ಕಾಸರಗೋಡು, (ಜ.08); ಗ್ರಾಮಪಂಚಾಯತ್ ಸದಸ್ಯೆಯೋರ್ವರು ರಸ್ತೆ ಬದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೊಗ್ರಾಲ್ ಪುತ್ತೂರು ಸಮೀಪ ನಡೆದಿದೆ.
ಮೃತರನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಬೆಂಬಲಿತ ಸ್ವತಂತ್ರ ಸದಸ್ಯೆ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತಿ ಮೂರನೇ ವಾರ್ಡ್ ಸದಸ್ಯೆ ಪುಷ್ಪಾ (45 ವರ್ಷ) ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯಾಹ್ನ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪರಿಸರ ನಿವಾಸಿಯೋರ್ವರು ಗಮನಿಸಿ ಕೂಡಲೇ ಸ್ಥಳೀಯರ ನೆರವಿನಿಂದ ಆಟೋ ರಿಕ್ಷಾ ವೊಂದರಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಎರಡು ವರ್ಷಗಳ ಹಿಂದೆ ಪುಷ್ಪಾ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು, ಅವರ ಬಲಗೈ ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿತ್ತು ಎಂದು ರಫಿ ಹೇಳಿದರು. “ಅವಳು ಸ್ಟ್ರೋಕ್‌ನಿಂದ ಚೇತರಿಸಿಕೊಳ್ಳುವ ಹಂತದಲ್ಲಿದ್ದಳು. ಆಕೆಯನ್ನು ಬೋರ್ಡ್ ಮೀಟಿಂಗ್‌ಗಳಿಗೆ ಕರೆತರಲು ಪಂಚಾಯತ್ ವಾಹನವನ್ನು ಕಳುಹಿಸುತ್ತಿತ್ತು. ಶುಕ್ರವಾರದ ಸಭೆಯಲ್ಲೂ ಅವಳು ಭಾಗವಹಿಸಿದ್ದಳು” ಎಂದು ಅವರು ಹೇಳಿದರು.
ಮೃತರು ತಮ್ಮ ಮಕ್ಕಳಾದ ಶರತ್, ಮೇಸ್ತ್ರಿ, ಸೌಮಿನಿ (ವಿವಾಹಿತರು) ಮತ್ತು 8 ನೇ ತರಗತಿಯಲ್ಲಿರುವ ಸೂರಜ್ ಅವರನ್ನು ಅಗಲಿದ್ದಾರೆ. ಪತಿ ಮಾಧವನ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಫಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಮೊಗ್ರಾಲ್ ಪುತ್ತೂರು ಕೋಟೆಗುಡ್ಡೆ ಸಮೀಪ ಪುಷ್ಪಾ ಮೃತದೇಹ ಪತ್ತೆಯಾಗಿದೆ. ಪುಷ್ಪಾ ಅವರು ಸಂಬಂಧಿಕರ ಮನೆಗೆಂದು ತೆರಳಿದ್ದರು ಎನ್ನಲಾಗಿದೆ.
ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….