ಕುಲಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನ್ನು ನೀವು ಬಲ್ಲಿರಾ ಅಂತ ಕೇಳುವ ಮೂಲಕ ಇಡೀ ಮನುಕುಲವನ್ನ ಜಾತಿ ಮತಗಳ ಕೊಳಕಿನಿಂದ ಹೊರ ತರೋದಿಕ್ಕೆ ಪ್ರಯತ್ನ ಮಾಡಿದ ಕನಕದಾಸರಂತಹ ಮಹಾಪುರುಷರನ್ನ ಕೂಡ ನಮ್ಮ ರಾಜಕಾರಣಿಗಳು ಇವತ್ತು ಜಾತಿ ರಾಜಕೀಯದ ವಸ್ತುವನ್ನಾಗಿ ಬಳಸಿಕೊಳ್ಳ ಅದಕ್ಕೆ ಹೋಗ್ತಿದ್ದಾರೆ ಅನ್ನೋದು ನಿಜಕ್ಕೂ ದುರಂತ.
ಹಾವೇರಿ ಜಿಲ್ಲೆಯ ಬಾಡ ಅನ್ನೋದ ಗ್ರಾಮ. ಅಲ್ಲಿ ಬಚ್ಚಮ್ಮ ಹಾಗೂ ಬೀರಪ್ಪ ಅನ್ನೋ ದಂಪತಿ ನೆಲೆ ಕಂಡುಕೊಂಡಿದ್ದರು. ಬೀರಪ್ಪ ಸಮಾಜದ ಪ್ರಮುಖ ನಾಗಿದ್ದ ಸಮುದಾಯದಲ್ಲಿ ಹೆಸರು ಸ್ಥಾನಮಾನಗಳಿದ್ದವು. ಆದರೆ ಆತನ ಪತ್ನಿ ಬೀಚಮ್ಮ ಗೆ ಒಂದೇ ಕೊರಗು ಮಕ್ಕಳಾಗಲಿಲ್ಲ ಅನ್ನೋದು. ಹೀಗಾಗಿ ತಮ್ಮ ಇಷ್ಟ ದೈವ ತಿರುಪತಿ ತಿಮ್ಮಪ್ಪನಿಗೆ ಪುತ್ರ ಸಂತಾನವನ್ನು ಕರುಣಿ ಸೋದಿಕ್ಕೆ ಹರಕೆ ಹೊತ್ತುಕೊಂಡಳು ಆ ತಾಯಿ.
ಒಂದು ವೇಳೆ ಮಗು ಆದರೆ ಆ ಮಗುವನ್ನ ನಿನ್ನ ದಾಸನಾಗಿ ಮಾಡ್ತೀನಿ. ನನಗೊಂದು ಮಗು ಕೊಡು ಅಂತ ಕೇಳ್ಕೊಂಡು. ಹೀಗೆ ಆಕೆ ತಿರುಪತಿ ತಿಮ್ಮಪ್ಪನ ಬಳಿ ತನ್ನ ಬೇಡಿಕೆಯನ್ನ ಇಟ್ಟ ಕೆಲವೇ ದಿನಗಳಲ್ಲಿ ಆ ಹರಕೆಯ ಫಲವೇನು ಅನ್ನೋ ಹಾಗೆ 1509ರಲ್ಲಿ ಬೀಚಮ್ಮ ಬೀರಪ್ಪ ದಂಪತಿಗೆ ಗಂಡು ಮಗು ಹುಟ್ಟಿತು.
ವಿಶೇಷ ಏನು ಗೊತ್ತಾ? ಅದೇ ಸಂದರ್ಭದಲ್ಲೇ ವಿಜಯನಗರ ಸಾಮ್ರಾಜ್ಯದ ಸಿಂಹಾಸನದ ಮೇಲೆ ಶ್ರೀ ಕೃಷ್ಣ ದೇವರಾಯ ಪಟ್ಟಾಭಿಷಿಕ್ತ ನಾದ ಒಂದು ಕಡೆ ಧರ್ಮ ಉದ್ಧಾರಕನ ಆಡಳಿತ ಶುರು ವಾದ್ರೆ ಮತ್ತೊಂದು ಕಡೆ ಮಹಾ ನ್ ಸಂತನ ಜನನ ಆಗಿತ್ತು. ಅವತ್ತು ತಿಮ್ಮಪ್ಪನ ಕೃಪೆಯಿಂದ ಹುಟ್ಟಿದ ಆ ಮಗುವಿಗೆ ಮುಂದೆ ತಿಮ್ಮಪ್ಪ ನಾಯಕ ಅಂತ ನಾಮಕರಣ ಮಾಡಲಾಯಿತು.
ಬೀರ ಪ್ಪನಿಗೆ ಮಗನ ತನ್ನಂತೆಯೇ ಪರಾಕ್ರಮಿ ಮಾಡಬೇಕು ಅನ್ನೋ ಆಸೆ. ಆದ್ರೆ ತಾಯಿ ಬೀಚಮ್ಮನಿಗೆ ಮಗ ಶಸ್ತ್ರ ಜೊತೆಗೆ ಒಂದ ಷ್ಟು ಶಾಸ್ತ್ರ ಅಭ್ಯಾಸವನ್ನು ಮಾಡಬೇಕು ಅನ್ನೋ ಆಸೆ ಹೀಗೆ ಮಗು ಶಸ್ತ್ರ ಶಾಸ್ತ್ರ ಎರಡನ್ನು ಕಲಿತಾ ಇತ್ತು. ಹೀಗಿರುವಾಗಲೇ ಅದೊಂದು ದಿನ ತಂದೆ ಬೀರಪ್ಪ ಅಕಾಲ ಮೃತ್ಯುವಿಗೆ ತುತ್ತಾದರು. ಆನಂತರ ಬೀಚಮ್ಮನಿಗೆ ದಿಕ್ಕೂತೋಚಲಿಲ್ಲ. ಬೀರಪ್ಪ ನಂತರ ಅವರ ಮಗ ತಿಮ್ಮಪ್ಪ ಸಣ್ಣ ವಯಸ್ಸಲ್ಲೇ ಜನಾಂಗದ ನಾಯಕನಾಗಿ ಅಧಿಕಾರ ವಹಿಸಿಕೊಂಡ.
ಹೀಗೆ ನಾಯಕನಾದ ತಿಮ್ಮಪ್ಪನಿಗೆ ಅದೊಂದು ದಿನ ಕನಸಲ್ಲಿ ತಿರುಪತಿ ತಿಮ್ಮಪ್ಪ ಪ್ರತ್ಯಕ್ಷನಾಗಿ ತನಗೊಂದು ಗುಡಿ ಕಟ್ಟಿಸಿ ಕೊಡುವಂತೆ ಕೇಳಿದಂತೆ ತನಗೆ ಬಿದ್ದ ಕನಸಿನ ಬಗ್ಗೆ ಅಚ್ಚರಿ ಗೊಂಡ ತಿಮ್ಮಪ್ಪ ನಾಯಕ ಮುಂದೆ ದೇವರ ಅಣತಿಯಂತೆ ದೇವಾಲಯವೊಂದನ್ನ ಕಟ್ಟೋದಕ್ಕೆ ಮುಂದಾಗುತ್ತಾನೆ. ದೇವಾಲಯ ಕಟ್ಟಿಸುವ ಕಾರ್ಯಭರ ದಿಂದ ಸಾಗ್ತಾ ಇತ್ತು.
ಅಡಿಪಾಯ ಹಾಕುವುದಕ್ಕೆ ಭೂಮಿ ಅಗೆಯುತ್ತಿರುವ ಸಂದರ್ಭದಲ್ಲಿ ಏಳು ಗಡಿಗೆಗಳಷ್ಟು ಚಿನ್ನದ ನಾಣ್ಯಗಳು ಹಾಗು ಒಂದು ದೇವರ ವಿಗ್ರಹ ಕೂಡ ಅಲ್ಲಿ ಸಿಕ್ತು. ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ತಿಮ್ಮಪ್ಪ ಮುಂದೆ ಸಿಕ್ಕಿದ ಹಣವನ್ನೆಲ್ಲ ಜನರ ಶ್ರೇಯಸ್ಸು ಹಾಗೂ ಧಾರ್ಮಿಕ ಕಾರ್ಯ ಗಳಿಗಾಗಿ ವಿನಿಯೋಗಿಸೊದಕ್ಕೆ ಶುರು ಮಾಡಿದ ಭೂಮಿಯಲ್ಲಿ ಬಂಗಾರ ಸಿಕ್ಕಿದ ಕಾರಣ ಈತ ಮುಂದೆ ಕನಕ ನಾಯಕ ಅಂತ ಪ್ರಸಿದ್ಧಿ ಹೊಂದುತ್ತಾನೆ. (ಮುಂದುವರಿಯುವುದು)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….