ನವದೆಹಲಿ, (ಜ.27); ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಉಪಟಳ ಹೆಚ್ಚಾಗಿದ್ದು, ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ.
ಈಗ ಮತ್ತೆ ಬ್ರಿಟನ್ ಆಯಿಲ್ ಟ್ಯಾಂಕರ್ ಮೇಲೆ ದಾಳಿ ನಡೆದಿದ್ದು ರಕ್ಷಣೆಗಾಗಿ ಯುದ್ಧ ನೌಕೆಗಳು ಹರಸಾಹಸಪಡುತ್ತಿವೆ ಎಂದು ವರದಿಯಾಗಿದೆ.
ಗಲ್ಫ್ ಆಫ್ ಏಡನ್‌ನಲ್ಲಿ ನಿಯೋಜನೆಗೊಂಡಿರುವ ಐಎನ್ಎಸ್ ವಿಶಾಖಪಟ್ಟಣಂ ಯುದ್ಧನೌಕೆಗೆ ದಾಳಿ ಬಗ್ಗೆ ಕರೆ ಬಂದಿದ್ದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಡನ್ ಕೊಲ್ಲಿ- ಕೆಂಪು ಸಮುದ್ರ-ಸುಯೇಜ್ ಕಾಲುವೆ ಮೂಲಕ ಮೆಡಿಟೇರಿಯನ್ ಸಮುದ್ರ ತಲುಪುವ ಹಡಗುಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಈಗ ಮತ್ತೆ ಮರ್ಲಿನ್ ಲೌಂಡಾ ಎಂಬ ಹೆಸರಿನ ಸರಕು ಸಾಗಣೆ ಹಡಗಿನ ಮೇಲೆ ಹೌತಿ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದು ಐಎನ್‌ಎಸ್ ವಿಶಾಖಪಟ್ಟಣಂ ಯುದ್ಧನೌಕೆ ರಕ್ಷಣೆಗೆ ಧಾವಿಸಿದೆ.
ಈ ಹಡಗಿನಲ್ಲಿ 22 ಮಂದಿ ಭಾರತೀಯ ಪ್ರಜೆಗಳು ಕೂಡ ಇದ್ದು ಹಡಗಿಗೆ ಹೊತ್ತಿಕೊಂಡಿರುವ ಬೆಂಕಿ ಆರಿಸುವ ಕಾರ್ಯದ ಜೊತೆ ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆ ಕೂಡ ನಡೆಯುತ್ತಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….