ಬೆಂಗಳೂರು, (ಜ.27); ಅಕ್ಟೋಬರ್‌ನಲ್ಲಿ ವಿವಿಧ ನಿಗಮ ಮಂಡಳಿ ಗಳಲ್ಲಿನ ನೇಮಕಾತಿಗೆ KEA ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಆರೋಪ ಕೇಳಿಬಂದಿತ್ತು.
ಪ್ರಕರಣ ಸಂಬಂಧ ಕಲಬುರಗಿಯ 3ನೇ JMFC ಕೋರ್ಟ್‌ಗೆ CID ಅಧಿಕಾರಿಗಳು 370 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಶೈಲಶ್ರೀ, ಲಕ್ಷ್ಮಿಪುತ್ರ ತಳವಾರ, ಗಂಗಾಧರ್ ಎಂಬ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದೆ.
ಇನ್ನು ಪ್ರಕರಣದ ಪ್ರಮುಖ ಆರೋಪಿ RD ಪಾಟೀಲ್ ಕುರಿತ ವಿಚಾರಣೆ ಬಾಕಿಯಿದ್ದು, ಆತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಎಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….