ಹರಿತಲೇಖನಿ ದಿನಕ್ಕೊಂದು ಕಥೆ: ತುಳಸಿದಾಸರಿಗೆ ರಾಮನಾಗಿ ಕಂಡ ಪುರಿ ಜಗನ್ನಾಥ

ಒಂದು ದಿನ ತುಳಸಿದಾಸರಿಗೆ ಪುರಿ ಜಗನ್ನಾಥನಲ್ಲಿ  ರಾಮನ ದರ್ಶನವಾಗುತ್ತದೆ ಎಂಬ ಸುದ್ದಿ ಯಾರಿಂದಲೋ ತಿಳಿದು ಬಂದಿತು. ರಾಮನ ದರ್ಶನ ಮಾಡುವ ಸಲುವಾಗಿ ರಾಮನ ಭಕ್ತರಾಗಿದ್ದ ತುಳಸಿದಾಸರು ಯಾತ್ರೀಕರ ಜೊತೆ ಪಾದಯಾತ್ರೆ ಮಾಡುತ್ತಲೇ ಪುರಿ ಕ್ಷೇತ್ರಕ್ಕೆ ರಾಮನ ದರ್ಶನ ಮಾಡಲು ಹೊರಟರು.

ಕಷ್ಟಪಟ್ಟು ನಡೆದು ಬಹಳ ದಿನಗಳ ಮೇಲೆ ಪುರಿ ಕ್ಷೆತ್ರವನ್ನು ತಲುಪಿದರು. ಅವರಿಗೆ ಇಷ್ಟದೈವವಾದ ರಾಮನ ದರ್ಶನ ಮಾಡಲು ಕಾತರದಿಂದ ದೇವಸ್ಥಾನದ ಒಳಗೆ ಬಂದು ಗರ್ಭಗುಡಿಯೊಳಗೆ ನೋಡಿದ ಅವರಿಗೆ ನಿರಾಸೆಯಾಯಿತು.

ಇದೇನು, ದುಂಡನೆಯ ನಯನವುಳ್ಳ ಮರದ ದೇವರು , ನನ್ನ ರಾಮನಾಗಲು ಹೇಗೆ ಸಾಧ್ಯ? ಸಾಧ್ಯವೇ ಇಲ್ಲ ರಾಮನೆಲ್ಲಿ ಇವನೆಲ್ಲಿ ಎಂಬ ಬೇಸರದಿಂದ ಹೊರಬಂದು  ಮರದ ಕೆಳಗೆ ಕುಳಿತರು. ಅಷ್ಟೂಂದು ಕಷ್ಟಪಟ್ಟು ಇಷ್ಟು ದೂರ ಬಂದರೂ ನನಗೆ ರಾಮನ ದರ್ಶನವಾಗಲಿಲ್ಲ ಎಂದು ಬೇಸರದಿಂದ ಚಿಂತಿಸುತ್ತಲೇ ಕತ್ತಲಾಯಿತು. ಆ ಹೊತ್ತಿಗೆ ಪುಟ್ಟ ಬಾಲಕನೊಬ್ಬ ಕೈಯಲ್ಲಿ  ಕುಡಿಕೆ ತುಂಬಾ ಪ್ರಸಾದ ಹಿಡಿದು ತಂದು ಇಲ್ಲಿ ತುಳಸಿದಾಸರು ಎಂದರೆ ಯಾರು ಎಂದು ಅಲ್ಲಿದ್ದವರನ್ನೆಲ್ಲ ಕೇಳುತ್ತಾ ಬಂದನು ತುಳಸಿದಾಸರು ನಾನೇ  ಎಂದರು. ಹಾಗೂ ಯೋಚಿಸಿದರು ದೇವಸ್ಥಾನದವರಿಗೆ  ನಾನು ಬಂದಿರುವ ವಿಚಾರ ಹೇಗೆ ತಿಳಿಯಿತು, ನನ್ನ ಜೊತೆ ಬಂದವರು ಯಾರೋ ಒಳಗೆ  ಹೇಳಿರಬೇಕು ಅದಕ್ಕಾಗಿ ನನಗೆ ಪ್ರಸಾದ ಕಳಿಸಿದ್ದಾರೆ  ಎಂದುಕೊಂಡು,

ಮಗು ನಾನೇ ತುಳಸಿ ದಾಸ ಎಂದರು. ಮುದ್ದಾದ ಬಾಲಕ  ನಾನು ನಿಮ್ಮನ್ನು ಆಗಿನಿಂದಲೂ ಹುಡುಕುತ್ತಲೇ ಇದ್ದೆ. ಜಗನ್ನಾಥ ದೇವರು ನಿಮಗಾಗಿ ಈ ಕುಡಿಕೆ ತುಂಬಾ ಪ್ರಸಾದ ಕಳಿಸಿದ್ದಾರೆ ಎಂದನು. ಆದರೆ ದಾಸರು ನಾನು ಈ ಪ್ರಸಾದವನ್ನು ನಾನು ಸೇವಿಸಲಾರೆ ಎಂದರು. ಆಶ್ಚರ್ಯವಾದ ಬಾಲಕ, ಇಡೀ ಜಗತ್ತೇ ಜಗನ್ನಾಥನ  ಪ್ರಸಾದಕ್ಕಾಗಿ ಕೈ ಚಾಚುತ್ತಾರೆ. ಆದರೆ ನೀವೇಕೆ ಪ್ರಸಾದ ವಾಪಸ್ಸು ತೆಗೆದುಕೊಂಡು ಹೋಗಲು ಹೇಳುವಿರಿ?  ಎಂದು ಕೇಳಿದಾಗ, ನನ್ನ ಇಷ್ಟದೈವ ರಾಮನ ಪೂಜೆ ಮಾಡಿ ಅವನಿಗೆ ಅರ್ಪಿಸದೆ ಏನನ್ನು ಸೇವಿಸುವುದಿಲ್ಲ. ಅಲ್ಲದೆ ನಿನ್ನ ಜಗನ್ನಾಥನ ಪ್ರಸಾದವನ್ನು ನನ್ನ ರಾಮನಿಗೆ  ಹೇಗೆ ನೈವೇದ್ಯ ಮಾಡಲಿ ಆದುದರಿಂದ ಈ ಪ್ರಸಾದವನ್ನು ಇಟ್ಟುಕೊಂಡು ನಾನೇನು ಮಾಡಲಿ ಎಂದರು. 

ಅದಕ್ಕೆ ಬಾಲಕ, ನಿಮ್ಮ ಇಷ್ಟ ದೇವರೇ ಈ ಪ್ರಸಾದವನ್ನು ಕಳಿಸಿರು ವುದು ಎಂದನು.  ಅದು ಹೇಗೆ ಸಾಧ್ಯ  ಹಸ್ತ-ಪಾದ ಗಳಿಲ್ಲದ ನಿನ್ನ ಜಗನ್ನಾಥ ನನ್ನ ರಾಮನಾಗಲು ಹೇಗೆ ಸಾಧ್ಯ? ಎಂದು ತುಳಸಿದಾಸರು ಕೇಳಿದಾಗ ಬಾಲಕ ನಗುತ್ತಾ ನುಡಿದ ನೀವೇ ನಿಮ್ಮ ‘ರಾಮ ಚರಿತ ಮಾನಸ’ದಲ್ಲಿ ವರ್ಣಿಸಿದ್ದೀರಲ್ಲ, ” ಬ್ರಹ್ಮನು ಪಾದಗಳಿಲ್ಲದೆ ನಡೆಯು ತ್ತಾನೆ, ಕಿವಿ ಇಲ್ಲದೆ ಕೇಳುತ್ತಾನೆ, ಕೈ ಗಳಿಲ್ಲದೆ ಕೆಲಸಗಳನ್ನು ಮಾಡುತ್ತಾನೆ,

ನಾಲಿಗೆ ಇಲ್ಲದೆ ಎಲ್ಲಾ ಆಹಾರಗಳ ರುಚಿ ಆಸ್ವಾದಿಸುತ್ತಾನೆ, ಮತ್ತು ಮಾತಿಲ್ಲದೆ ಅನೇಕ ವಿಷಯಗಳನ್ನು ಮಾತಾಡುವ ವಾಗ್ಮೀ ಅಲ್ಲವೇ? ಎಂದು ತುಳಸಿ ದಾಸರನ್ನು ಕೇಳಿದಾಗ ಅವರಿಗೆ ಅರ್ಥವಾಯಿತು. ಕಣ್ಣಂಚಿನಲ್ಲಿ ನೀರು ಬಂದಿತು.  ಬಾಲಕನು ನಗುತ್ತಾ ತುಳಸಿದಾಸರೇ  ನಾನೇ ನಿಮ್ಮ ರಾಮ, ನನ್ನ  ನಾಲ್ಕೂ ದಿಕ್ಕುಗಳಿಗೂ ಹನುಮಂತ ಪಹರೆ ಕಾಯುತ್ತಿದ್ದಾನೆ. ದಿನ ನಿತ್ಯ ಬೆಳಿಗ್ಗೆ ವಿಭೀಷಣ ನನ್ನ ದರ್ಶನಕ್ಕೆ ಬರುತ್ತಾನೆ. ನೀವು ಸಹ ನಾಳೆ ಬಂದು ನನ್ನ ದರ್ಶನ ಮಾಡಿ ಎಂದು ಹೇಳಿ ಓಡಿ ಕಣ್ಮರೆಯಾದನು 

ತುಳಸಿದಾಸರಿಗೆ ಜಗತ್ತಿನ ಪರಿವೇ ಇರಲಿಲ್ಲ. ಅವರ ಇರುವಿಕೆಯನ್ನೇ ಅವರು ಮರೆತಿದ್ದರು. ಹಗುರವಾಗಿ ತೇಲಾಡುತ್ತಿದ್ದರು. ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಬಾಲಕ ತಂದಿಟ್ಟ ಪ್ರಸಾದವನ್ನು ಭಕ್ತಿಯಿಂದ ಸಂಭ್ರಮದಿಂದ ಸೇವಿಸಿದರು. ಮರುದಿನ ಬೆಳಿಗ್ಗೆ ಎದ್ದವರೇ ಜಗನ್ನಾಥನ ದರ್ಶನ ಮಾಡಲು ಹೋದರು ಜಗನ್ನಾಥ-  ಬಲರಾಮ- ಸುಭದ್ರೆ ನಿಂತಿರುವ ಜಾಗದಲ್ಲಿ ರಾಮ ಸೀತೆ ಲಕ್ಷ್ಮಣ ಹನುಮಂತ  ಇರುವುದನ್ನು ಕಂಡರು. 

ಯಾವ ಜಾಗದಲ್ಲಿ ತುಳಿತಿದಾಸರು ರಾತ್ರಿ ಯನ್ನು ಕಳೆದಿದ್ದರೋ ಆ ಜಾಗವನ್ನು ಇಂದಿಗೂ ‘ತುಳಸಿಯ ಚೌರ’ ಎಂದು ಕರೆಯುತ್ತಾರೆ. ಅವರು ಕುಳಿತಿದ್ದ ಪೀಠ ಇರುವ ಜಾಗವನ್ನು ಬಡಸ್ತಾಮಠ ಎಂದು  ಪ್ರಸಿದ್ಧವಾಗಿದೆ. ಜಗನ್ನಾಥನು ತುಳಸಿದಾಸರಿಗೆ ರಾಮನಾಗಿ ದರ್ಶನ ಕೊಟ್ಟು ತುಳಸಿದಾಸರನ್ನು ಕೃತಾರ್ಥರ ನ್ನಾಗಿಸಿದ. ಇಂಥ ಪುರಿಯ ಜಗನ್ನಾಥ ಜಗತ್ತಿಗೆ ಅಧಿಪತಿಯಾಗಿ ಪುರಿ ಕ್ಷೇತ್ರ ದಲ್ಲಿ  ನೆಲೆಸಿ ಕ್ಷೇತ್ರವನ್ನೆ ವಿಶ್ವ ವಿಖ್ಯಾತ ಗೊಳಿಸಿದನು. 

ಬರಹ: ಆಶಾ ನಾಗಭೂಷಣ, ಸಂಗ್ರಹ ವರದಿ; ಗಣೇಶ್. ಎಸ್.,ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!