ಮಂಡ್ಯ, (ಫೆ.18): ಕಮಲ-ದಳ ಮೈತ್ರಿಯಿಂದ ಲೋಕಸಭೆ ಟಿಕೆಟ್ ಕೈತಪ್ಪಬಹುದು ಎನ್ನುವ ಆತಂಕದಲ್ಲಿರುವ ಸಂಸದೆ ಸುಮಲತಾ ಅಂಬರೀಶ್, ಈ ಮಣ್ಣಿನ ಋಣ ಈ ಮಣ್ಣಿನ ಗುಣ ಎಂದೆಂದೂ ಬಿಡಲ್ಲ, ಸುಮಲತಾ ಅಂಬರೀಷ್ ಈ ಮಣ್ಣನ್ನು ಬಿಡಲ್ಲ ಎಂದು ಹೇಳುವ ಮೂಲಕ ದಳಪತಿಗಳಿಗೆ ಕಮಲ-ದಳ ಮೈತ್ರಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.
ಶನಿವಾರ ರಾತ್ರಿ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇಗುಲ ಆವರಣದಲ್ಲಿ ಆಯೋಜಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷವಾದ ಸಂದರ್ಭದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರರಂಗದಲ್ಲಿ ದರ್ಶನ್ ಅವರ ಬೆಳವಣಿಗೆ, ತಮ್ಮ ಕುಟುಂಬ ಮತ್ತು ದರ್ಶನ್ ಅವರ ನಡುವಿನ ಒಡನಾಟ ಬಗ್ಗೆ ಮಾತನಾಡಿ ನಂತರ ಮುಂಬರುವ ಲೋಕಸಭೆ ಚುನಾವಣೆಯ ಸ್ಪರ್ಧೆಯ ಬಗ್ಗೆ ಕೇಳಿಬರುತ್ತಿರುವ ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.
ನನ್ನ ಪತಿ ಅಂಬರೀಷ್ ಅವರು ತೀರಿಕೊಂಡಾಗ ಈ ಮಂಡ್ಯದ ಮಣ್ಣನ್ನು ಅವರ ಹಣೆಗೆ ತಿಲಕವಾಗಿ ಹಚ್ಚಿ ನಾವೆಲ್ಲಾ ಬೀಳ್ಕೊಟ್ಟಿದ್ದೆವು. ಇಂದು ಈ ವೇದಿಕೆ ಮುಖಾಂತರ ಮತ್ತೊಮ್ಮೆ ಹೇಳುತ್ತಿದ್ದೇನೆ. ಈ ಮಂಡ್ಯ ನೆಲದ ಗುಣ, ಋಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ, ಅದೇ ರೀತಿ ಈ ಮಣ್ಣನ್ನು ನಾನು ಬಿಡುವುದೂ ಇಲ್ಲ ಎಂದರು.
2019ರ ಚುನಾವಣೆ ನೆನೆದು ಸುಮಲತಾ ಭಾವುಕರಾದ ಸುಮಲತಾ ಅವರು, ಆ ಸಂದರ್ಭದಲ್ಲಿ ದರ್ಶನ್, ಯಶ್ ನನಗೆ ಧೈರ್ಯ ತುಂಬಿದ್ದರು. ಕಳೆದ 5 ವರ್ಷ ಮಂಡ್ಯ ಜನರ ಪ್ರೀತಿಗಳಿಸಿದ್ದೇನೆ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. ಈ ಚುನಾವಣೆಯಲ್ಲಿಯೂ ದರ್ಶನ್ ತನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….