ಭೊಪಾಲ್, (ಫೆ.18): ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಬಿಜೆಪಿ ಸೇರ್ಪಡೆಯ ಕುರಿತು ಪ್ರತಿಕ್ರಿಸಿದ್ದು, ‘ಈ ಕುರಿತು ನಾನು ಯಾರೊಂದಿಗೂ ಮಾತನಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರಲ್ಲದೆ. ಬೇಕಾಬಿಟ್ಟಿ ವರದಿ ಮಾಡಿದ ಮಾಧ್ಯಮಗಳಿಗೆ ಗ್ರಹಚಾರ ಬಿಡಿಸಿದ್ದಾರೆ.
ಬಿಜೆಪಿ ಸೇರುವ ಕುರಿತು ಊಹಾಪೋಹಗಳಿಗೆ ತಿರುಗೇಟು ನೀಡಿದ ಮಾಜಿ ಸಂಸದ, ಮಾಧ್ಯಮದವರಲ್ಲಿ ಹೆಚ್ಚು ಉದ್ವೇಗಕ್ಕೆ ಒಳಗಾಗಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ವಿರುದ್ಧ ಗರಂ ಆದರು.
ಇಂಥಹ ಯಾವುದೇ ಬೆಳವಣಿಗೆ ನಡೆದರೆ ಮಾಧ್ಯಮಗಳಿಗೆ ತಿಳಿಸುವುದಾಗಿ ಭರವಸೆ ನೀಡಿದರು. ಅವರ ಸಹೋದ್ಯೋಗಿ ದಿಗ್ವಿಜಯ ಸಿಂಗ್ ಕೂಡ ಬಿಜೆಪಿ ಬದಲಾವಣೆಯ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….