
ಉಡುಪಿ, (ಜುಲೈ.30): ಯಕ್ಷಗಾನ ಯುವ ಕಲಾವಿದರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ.

ಮೃತರನ್ನು ಮಂದಾರ್ತಿ ಬಳಿಯ ನೀರ್ಜೆಡ್ಡು ನಿವಾಸಿ 25 ವರ್ಷದ ಗುರುಪ್ರಸಾದ್ ಕುಲಾಲ್ ಎಂದು ಗುರುತಿಸಲಾಗಿದೆ.

ಗುರುಪ್ರಸಾದ್ ಕುಲಾಲ್ ಹಲವು ವರ್ಷಗಳ ಕಾಲ ಮಂದಾರ್ತಿ, ಮಾರಣಕಟ್ಟೆ ಹಾಲಾಡಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಹಾಲಾಡಿ ಮೇಳದಲ್ಲಿ ಯುವ ಕಲಾವಿದರಾಗಿ ಪ್ರಶಂಸೆ ಪಡೆಯುತ್ತಿದ್ದರು.
ಮಾರಣಕಟ್ಟೆಯ ಕ್ಷೇತ್ರ ಮಹಾತ್ಮ ಪ್ರಸಂಗದಲ್ಲಿ ರತಿ, ದೇವಿ ಮಹಾತ್ಮಿಯಲ್ಲಿ ಮಾಲಿನಿ, ಮೋಹಿನಿ ಹೀಗೆ ಹಲವಾರು ಪಾತ್ರಗಳು ಇವರಿಗೆ ಹೆಸರು ತಂದುಕೊಟ್ಟಿತ್ತು
ಗುರುಪ್ರಸಾದ್ ಕುಲಾಲ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
