ದೇವನಹಳ್ಳಿ, (ಆಗಸ್ಟ್.01); ನಿರ್ಮಾಣ ಹಂತದ ಐಪೋನ್ ತಯಾರಿಕಾ ಪ್ಯಾಕ್ಟರಿಯಲ್ಲಿ ಗಲಾಟೆ ನಡೆದಿದ್ದು, ಕನ್ನಡಿಗರ ಮೇಲೆ ಅನ್ಯ ಭಾಷಿಕರಿಂದ ಹಲ್ಲೆ ನಡೆಸಲಾಗಿದೆ ಎಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಕುರಿತಾದ ಅಸಲೀಯತ್ತು ಬಯಲಿಗೆ ಬಂದಿದೆ.

ಈ ಕುರಿತು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಕಾರ್ಖಾನೆಯಲ್ಲಿ ನಡೆದ ಗಲಾಟೆ ಕುರಿತು ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಲಾರಿ ಚಾಲಕನೋರ್ವ ಮದ್ಯಪಾನ ಮಾಡಿ, ಬೇಕಾ ಬಿಟ್ಟಿ ಲಾರಿ ಓಡಿಸಿಲ್ಲದೆ, ಪ್ರಶ್ನಿಸಲು ಬಂದ ಕಾರ್ಮಿಕರನ್ನು ಅವಾಚ್ಯ ಪದಗಳಿಂದ ಬೈದು, ಬೆದರಿಸಿದ್ದಾನೆ.

ಇದಲ್ಲದೆ ವಿಡಿಯೋ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಎಂಬಂತೆ ಹರಿಬಿಟ್ಟಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಕುರಿತು ಕಂಪನಿಯವರು ನೀಡಿದ ದೂರಿನ ಅನ್ವಯ ಆರೋಪಿ ಚಾಲಕನ ವಿರುದ್ಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಮೇಲೆ ಎಂಬಂತೆ ವಿಡಿಯೋ ವೈರಲ್ ಮಾಡಿರುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಕರವೇ ಮುಖಂಡರ ಭೇಟಿ; ಮತ್ತೊಂದೆಡೆ ಕನ್ನಡಿಗರ ಮೇಲೆ ಹಲ್ಲೆ ಎಂಬ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ನೇತೃತ್ವದಲ್ಲಿ ಮುಖಂಡರು ಕಾರ್ಖಾನೆಯ ಬಳಿ ಪ್ರತಿಭಟನೆಗೆ ಮುಂದಾದರು. ಆದರೆ ಈ ಪ್ರಕರಣಕ್ಕೆ ಚಾಲಕನಿಂದ ಉಂಟಾದ ಅವಾಂತರವೇ ಹೊರತು ಭಾಷೆಯ ಕಾರಣ ಯಾವುದೇ ಗಲಾಟೆ ನಡೆದಿಲ್ಲ ಎಂಬ ಮಾಹಿತಿ ತಿಳಿದು ಹಿಂತಿರುಗಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
