ದೊಡ್ಡಬಳ್ಳಾಪುರ, (ಆಗಸ್ಟ್.03); ನಗರ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳಿ ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಉಪಲೋಕಾಯುಕ್ತ ವೀರಪ್ಪ ಅವರ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ತಾಲೂಕು ಕಚೇರಿ ಅಧಿಕಾರಿಗಳು ಬೆಸ್ತು ಬಿದ್ದಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಚೇರಿಯ ಮೇಲೆ ಪದೇ ಪದೇ ಲೋಕಾಯುಕ್ತರ ದಾಳಿ ಇಲ್ಲಿನ ಭ್ರಷ್ಟಾಚಾರದ ಕುರಿತು ಸಾರ್ವಜನಿಕರ ಆರೋಪಕ್ಕೆ ಸಾಕ್ಷಿಯಾಗುತ್ತಿದೆ. ಸಾಸಲು ಹೋಬಳಿಯ ಚನ್ನವೀರನಹಳ್ಳಿ ಸರ್ವೆ ನಂಬರ್ 42 ಅರಣ್ಯ ಇಲಾಖೆಯ ಸೇರಿದ ಜಮೀನಿಗೆ ಖಾತೆ ಮಾಡಿರುವ ವಿಚಾರವಾಗಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಮೂಲಗಳ ಮಾಹಿತಿ ಅನ್ವಯ ಒಂದು ಇಲಾಖೆ ಮಾತ್ರವಲ್ಲದೆ, ಇಡೀ ತಾಲೂಕು ಕಚೇರಿಯಲ್ಲಿನ ಎಲ್ಲಾ ಕಚೇರಿಗಳ ದಾಖಲೆ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಸ್ಥಳದಲ್ಲಿ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್, ಇಒ ಮುನಿರಾಜು ಮತ್ತಿತರರಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

