ದೊಡ್ಡಬಳ್ಳಾಪುರ, (ಆಗಸ್ಟ್.22); ನಗರದಲ್ಲಿ ಸೋಮವಾರ ಮಧ್ಯಾಹ್ನ ಸುಮಾರು ಒಂದು ತಾಸು ಸುರಿದ ಮಳೆಯಿಂದಾಗಿ ನಗರದ ಹಲವಾರು ಕಡೆ ಚರಂಡಿಗಳು ಉಕ್ಕಿ ಹರಿದವು. ಇದರಿಂದ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹವಾಗಿತ್ತು.
ನಗರದ ತೇರಿನ ಬೀದಿ, ಅರಳುಮಲ್ಲಿಗೆ ಬಾಗಿಲು, ನೆಲಮಂಗಲ ರಸ್ತೆಯಲ್ಲಿ ಚರಂಡಿಗಳ ಕೊಚ್ಚೆ ನೀರು ರಸ್ತೆಗೆ ಹರಿದು ಶಾ ಮಕ್ಕಳು, ವಾಹನ ಸಂಚಾರರ ಪರದಾಡಿದರು. ಈ ಹಿನ್ನೆಲೆಯಲ್ಲಿ ಇಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದವತಿಯಿಂದ ನಗರಸಭೆ ಆವರಣದಲ್ಲಿ ಇಂದು ಒಳಚರಂಡಿ ಅವ್ಯವಸ್ಥೆ ಹಾಗೂ ಮಳೆ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ದೊಡ್ಡಬಳ್ಳಾಪುರ ನಗರವು ನಗರ ವ್ಯಾಪ್ತಿಯಲ್ಲಿ 2011 ರ ಜನಗಣಿತಿಯ ಪ್ರಕಾರ ಅಂದಾಜು 90000 ಜನಸಂಖ್ಯೆಯನ್ನು ಹೊಂದಿದೆ.
ಇತ್ತೀಚೆಗೆ ತಾನೇ 78ನೇ ವರ್ಷ ಸ್ವಾತಂತ್ರೋತ್ಸವನ್ನು ಆಚರಿಸಿ ಸಂಭ್ರಮದಲ್ಲಿರುವ ನಾವು ಇನ್ನು ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ಬೀದಿ ದೀಪಗಳಿಗೋಸ್ಕರ ಇನ್ನು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ದೊಡ್ಡಬಳ್ಳಾಪುರದ ನಗರವು 31 ವಾರ್ಡ್‌ಗಳಿದ್ದು, ನಗರಸಭೆಯು ಇದ್ದು, ಇಲ್ಲಿ ಕಚೇರಿಯಲ್ಲಿ ದೂರಾಡಳಿತ, ಒಳಚರಂಡಿ ಅವ್ಯವಸ್ಥೆ, ಮಳೆಗಾಲದಲ್ಲಿ ಮಳೆ ನೀರು ಹೋಗಲು ಚರಂಡಿಗಳ ನಿರ್ಮಾಣಗೊಂಡಿರುವ ಚರಂಡಿ ಒತ್ತುವರಿ ತೆರವು ಯಾವುದು ಆಗಿರುವುದಿಲ್ಲ.
ಮಳೆಯ ಹಿನ್ನಲೆಯಲ್ಲಿ ನಗರಸಭೆಯು ಮುಂಜಾಗ್ರತ ಕ್ರಮವಾಗಿ ಯಾವುದೇ ತಯಾರಿ ಮಾಡಿಲ್ಲ. ನಗರದ ಪ್ರಮುಖ ರಸ್ತೆಗಳಾದ ತಾಲ್ಲೂಕು, ಕಚೇರಿಯ ಮುಂದೆ ಮಳೆಯ ನೀರಿ ಅವ್ಯವಸ್ಥೆ, ಐ.ಬಿ ವೃತ್ತ(ಡಾ.ಬಿ.ಅಂಬೇಡ್ಕರ್ ವೃತ್ತ)ದಲ್ಲಿ ಮಳೆ ಹಾಗೂ ಒಳಚರಂಡಿಯ ನೀರು ನಿಂತಿರುತ್ತದೆ.
ಮುತ್ತೂರು ಗುರುರಾಜ ಕಲ್ಯಾಣ ಮಂಟಪದ ಮುಂದೆ ಒಳಚರಂಡಿ ಅವ್ಯವಸ್ಥೆ, ರೈಲ್ವೇ ಸ್ಟೇಷನ್ ಬಳಿ ಹೋಟೆಲ್‌ಗೆ ನೀರು ನುಗ್ಗಿದರು ಸಹ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಅರಳುಮಲ್ಲಿಗೆ ಸರ್ಕಲ್ ನಲ್ಲಿ ಸರ್ಕಾರಿ ಶಾಲೆಯ ಆವರಣಕ್ಕೆ ನೀರು ನುಗ್ಗಿದರು ಇದರ ಬಗ್ಗೆ ನಗರಸಭೆಯ ಸದಸ್ಯರು ಬೊಬ್ಬೆ ಹೊಡೆದರು ಯಾವುದೇ ಕ್ರಮ ಆಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ತಾವು ಎಲ್ಲಾ ಅಂಶಗಳನ್ನು ಗಮನಿಸಿ ನಗರ ಹಾಗೂ ಗ್ರಾಮಾಂತರ ಸಾರ್ವಜನಿಕರಿಗೆ, ಶಾಲಾ ಕಾಲೇಜು ಮಕ್ಕಳು ಓಡಾಡಲು ಹಾಗೂ ಮುಂದೆ ಯಾವುದೇ ಅನಾಹುತಗಳು ಸಂಭವಿದಂತೆ ಮುನ್ನೆಚರಿಕೆ ಕ್ರಮವನ್ನು ತೆಗೆದುಕೊಂಡು ಬಗೆ ಹರಿಸುವಂತೆ ಒತ್ತಾಯಿಸಿದ ಮುಖಂಡರು, ತ್ವರಿತವಾಗಿ ಸಮಸ್ಯೆ ಬಗೆಹರಿಸದೇ ಹೋದಲ್ಲಿ ನಗರಸಭೆಗೆ ಭೀಗ ಜಡಿಯುವುದರ ಮೂಲಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ನಂತರ ಪೌರಾಯುಕ್ತ ಕಾರ್ತಿಕ್ ಈಶ್ವರ್ ಅವರಿಗೆ ಮನವಿ ಪತ್ರ ನೀಡಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರಮೇಶ್ ವಿರಾಜ್, ಗೌರವಾಧ್ಯಕ್ಷ ಮಹೇಶ್, ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್ಎಲ್‌ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಖಜಾಂಚಿ, ಆನಂದ್, ಕಾನೂನು ಸಲಹೆಗಾರರು ಆನಂದ್ ಕುಮಾರ್, ಕಾರ್ಯದರ್ಶಿ ಕಾರಳ್ಳಿ ಮಂಜು, ಮುಖೇನಳ್ಳಿ ರವಿ, ರಾಜಘಟ್ಟ ಮಹೇಶ್, ನಗರ ಅಧ್ಯಕ್ಷ ಶ್ರೀನಗರ ಬಶೀರ್, ಉಪಾಧ್ಯಕ್ಷ ನೂರಲ್ಲ, ಉಪಾಧ್ಯಕ್ಷ ಮಂಜುನಾಥ್, ರವಿ, ಕೆಂಪೇಗೌಡ, ರಾಜಣ್ಣ, ಶ್ರೀನಿವಾಸ್, ರಾಮ ಮಡಿವಾಳ ಕೃಷ್ಣ, ಕರಾಟೆ ಮಂಜು, ದಯಾನಂದ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….