‘ಫಿಲಿಬ್’ ನು ಮೆಸೆಡೋನಿಯಾ ರಾಜ್ಯದ ದೊರೆ ಆಗಿದ್ದ. ಅವನು ಅಲೆಗ್ಜಾಂಡರ್ ನ ತಂದೆ. ಅಥೆನ್ಸ್ ಪಟ್ಟಣದ ಸುತ್ತಮುತ್ತ ಸುವಿಸ್ತಾರ ರಾಜ್ಯ ಕಟ್ಟಿದ್ದ. ಅಪಾರ ಸಿರಿ ಸಂಪದವಿತ್ತು ಯಾವುದಕ್ಕೂ ಏನೂ ಕೊರತೆ ಇರಲಿಲ್ಲ.
ಮಹಾಶೂರ, ವೀರ, ಧೀರನೆಂಬ ಬಿರುದಾಂಕಿತನಾಗಿದ್ದ. ಅಂಥ ಫಿಲಿಬ್ ದೊರೆ ತಾನು ಮಲಗುವ ಕೋಣೆಯ ಮೇಲೆ ಒಂದು ಫಲಕ ಹಾಕಿದ್ದ. “ನೆನಪಿರಲಿ, ನೀನು ಮನುಷ್ಯ ಮಾತ್ರ!” ಎಂದು ಅದರ ಮೇಲೆ ಬರೆಯಲಾಗಿತ್ತು. ಪ್ರತಿನಿತ್ಯ ಮಲಗುವಾಗ ಫಿಲಿಬ್ ದೊರೆ ಅದನ್ನು ಓದಿ, ಸ್ವಲ್ಪ ಹೊತ್ತು ಅದರ ಮೇಲೆ ಚಿಂತನೆ ಮಾಡಿ ಮಲಗುತ್ತಿದ್ದ.
ಒಂದು ದಿನ ಮಗ ಅಲೆಗ್ಜಾಂಡರ್ ಕೇಳಿದ, “ತಂದೆಯೇ, ನೀವು ಬರೆಯಿಸಿರುವ ಈ ಫಲಕದ ಉದ್ದೇಶವೇನು..?” ಫಿಲಿಬ್ ಹೇಳಿದ “ನಾನು ಎಲ್ಲರಿಗಿಂತ ವಿಶೇಷನೆಂಬ ಅಹಂಭಾವ ಮೂಡದಿರಲಿ” ಎಂಬುದೇ ಅದರ ಉದ್ದೇಶ. (ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)
ಕೃಪೆ: ಶ್ರೀ ಸಿದ್ದೇಶ್ವರ ಸ್ವಾಮೀಜಿ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….