ನೆಲಮಂಗಲ: ಬೆಂಗಳೂರಿನ ಹೊರವಲಯದಲ್ಲಿ ಚಿರತೆ ದಾಳಿ (leopard attack) ನಡೆದಿದ್ದು, 52 ವರ್ಷದ ಮಹಿಳೆ ಕರಿಯಮ್ಮ ಸಾವನ್ನಪ್ಪಿದ್ದಾರೆ.
ನೆಲಮಂಗಲದ ಕಂಬಲು, ಗೊಲ್ಲರಹಟ್ಟಿಯಲ್ಲಿ ಈ ಘಟನೆ ವರದಿಯಾಗಿದ್ದು, ಕೃಷಿ ಭೂಮಿ ಯಿಂದ ಹುಲ್ಲು ತರಲು ಹೋಗಿದ್ದಾಗ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದೆ.
ಆಕೆ ಕೆಲಸ ಮಾಡುತ್ತಿದ್ದ ಜಾಗ, ಚಿರತೆಗಳು ಹೆಚ್ಚಾಗಿ ಬರುವ ಕಾಡಿಗೆ ಹೊಂದಿಕೊಂಡಿದ್ದು, ಸುತ್ತ ಮುತ್ತಲಿನ ಪ್ರದೇಶಗಳಿಗೆ ಹೋಗದಂತೆ ಇತ್ತೀಚಿನ ದಿನಗಳಲ್ಲಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿತ್ತು.
ಚಿರತೆ ನಾಯಿಗಳು ಮತ್ತು ಇತರ ಬೀದಿ ನಾಯಿಗಳನ್ನು ಕೊಂದ ನಿದರ್ಶನಗಳಿವೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿರತೆ ದಾಳಿಯಿಂದ ಮೃತಪಟ್ಟ ಮಹಿಳೆ ಕರಿಯಮ್ಮನ ಕುಟುಂಬಕ್ಕೆ ಅರಣ್ಯ ಇಲಾಖೆ 15 ಲಕ್ಷ ರು. ಪರಿಹಾರ ಘೋಷಿಸಿದೆ.
ಸ್ಥಳಕ್ಕೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿ ಪರಿಹಾರ ಪ್ರಕಟಿಸಿದ್ದಾರೆ.