ಹೈದರಾಬಾದ್: ಅದಾನಿ ಗ್ರೂಪ್ ವಿರುದ್ಧ ಅಮೆರಿಕ ನ್ಯಾಯಾಲಾಯದಲ್ಲಿ ಲಂಚದ. ಆರೋಪದ ಬೆನ್ನಲ್ಲೇ ಯಂಗ್ ಇಂಡಿಯಾ ಸ್ಕಿಲ್ಸ್ ಯುನಿವರ್ಸಿಟಿಗೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಗ್ರೂಪ್ ನೀಡುತ್ತಿರುವ 100 ಕೋಟಿ ರೂ. ಗಳ ದೇಣಿಗೆಯನ್ನು ಸ್ವೀಕರಿಸದಿರಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ರೇವಂತ್ ರೆಡ್ಡಿ (Revanth reddy) ತಿಳಿಸಿದ್ದಾರೆ.
ಸಅದಾನಿ ಗ್ರೂಪ್ ವಿರುದ್ಧ ಅಮೆರಿಕ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿಯವರು ಈ ನಿರ್ಧಾರ ಕೈಗೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಮತ್ತು ತಮ್ಮ ಸಚಿವ ಸಂಪುಟ ಯಾವುದೇ ಅನಗತ್ಯ ವಿವಾದದಲ್ಲಿ ಸಿಲುಕುವುದನ್ನು ತಪ್ಪಿಸುವ ಸಲುವಾಗಿ ಈ ತೀರ್ಮಾನಕ್ಕೆ ಬಂದಿರುವುದಾಗಿಯೂ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ವಿಶೇಷ ಮುಖ್ಯ ಕಾರ್ಯದರ್ಶಿ ಹಾಗೂ ಕೈಗಾರಿಕಾ ಉತ್ತೇಜನ ಹಾಗೂ ವಾಣಿಜ್ಯ ಇಲಾಖೆಯ ಆಯುಕ್ತ ಜಯೇಶ್ ರಂಜನ್ ಅವರು ಅದಾನಿ ಪ್ರತಿಷ್ಠಾನದ ಡಾ.ಪ್ರೀತಿ ಆದಾನಿಗೆ ಪತ್ರ ಬರೆದು ಯಂಗ್ ಇಂಡಿಯಾ ಸ್ಕಿಲ್ಸ್ ಯುನಿವರ್ಸಿಟಿಗೆ 100 ಕೋಟಿ ರೂ. ನೀಡಿದ್ದಕ್ಕಾಗಿ ನಾನು ಅಭಾರಿಯಾಗಿದ್ದೇನೆ.
ನಿಮ್ಮ ಪ್ರತಿಷ್ಠಾನದ ಪರವಾಗಿ ನೀವು ಅಕ್ಟೋಬರ್ 18ರಂದು ಪತ್ರ ಬರೆದಿದ್ದೀರಿ. ಆದರೆ ನಾವು ಯಾವುದೇ ದಾನಿಯಿಂದ ಹಣದ ಭೌತಿಕ ವರ್ಗಾವಣೆ ಕೇಳಿಲ್ಲ. ಇಂತಹ ದೇಣಿಗೆಗೆ 80 ಜಿಯಡಿ ವಿನಾಯಿತಿ ಇದ್ದರೂ ಪ್ರಸ್ತುತ ಸಂದರ್ಭ ಹಾಗೂ ಉದ್ಭವಿಸಿರುವ ವಿವಾದಗಳ ಹಿನ್ನೆಲೆಯಲ್ಲಿ ಹಣದ ವರ್ಗಾವಣೆಗೆ ಒತ್ತಾಯಿಸದಂತೆ ಸರ್ಕಾರ ತಮಗೆ ಸೂಚಿಸಿದೆ ಎಂದು ತಿಳಿಸಲಾಗಿದೆ.