ಬೆಂಗಳೂರು: ನಿನ್ನೆ ನಿಧನರಾದ ದೊಡ್ಡಬಳ್ಳಾಪುರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ (j narasimha swamy) ಅವರಿಗೆ ಬೆಳಗಾವಿಯಲ್ಲಿ ನಡೆಯುತ್ತಿರುವ 16 ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸಂತಾಪ ಸೂಚಿಸಲಾಯಿತು.
ಸಭಾಪತಿ ಯುಟಿ ಖಾದರ್ ಅವರು ನರಸಿಂಹಸ್ವಾಮಿ ಅವರ ನಿಧನ ಕುರಿತು ಪ್ರಸ್ತಾಪಿಸಿ, ಸಂತಾಪ ಸಲ್ಲಿಸಿದರು.
ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜೆ.ನರಸಿಂಹಸ್ವಾಮಿ ಅವರ ಒಡನಾಟ, ದೊಡ್ಡಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೆ ಶ್ರಮ, ಎಸ್‌ಎಸಂ ಕೃಷ್ಣ ಅವರೊಂದಿಗೆ ಟಿಕೆಟ್ ನೀಡುವ ಕುರಿತು ಪ್ರಸ್ತಾಪಿಸಿ, ನರಸಿಂಹಸ್ವಾಮಿ ಆಪರೇಷನ್ ಕಮಲಕ್ಕೆ ಒಳಗಾಗಿದನ್ನು ಸ್ಮರಿಸಿ ಸಂತಾಪ ಸೂಚಿಸಿದರು.
ನಂತರ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಜೆ.ನರಸಿಂಹಸ್ವಾಮಿ ಅವರನ್ನು ಸ್ಮರಿಸಿ, ಸಂತಾಪ ಸೂಚಿಸಿದರು.
ನಂತರ ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಬಳಿಕ ವಿಧಾನಸಭೆ ಅಧಿವೇಶನದಲ್ಲಿ ನಡೆದ ಸಂತಾಪ ಸೂಚನೆಯ ನಿರ್ಣಯವನ್ನು ಜೆ.ನರಸಿಂಹಸ್ವಾಮಿ ಅವರ ಕುಟುಂಬಕ್ಕೆ ತಲುಪಿಸಲಾಗುವುದು ಎಂದು ಸಭಾಪತಿ ಯುಟಿ ಖಾದರ್ ತಿಳಿಸಿದರು.