ದೊಡ್ಡಬಳ್ಳಾಪುರ, (Doddaballapura): ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಇದು ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದರು.
ಸ್ನೇಹಿತರಾದ ಉದ್ಯಮಿ ಮಂಜುನಾಥ್ ಅವರ ಮನೆಗೆ ಭೇಟಿ ನೀಡಿದ್ದ ಪ್ರದೀಪ್ ಈಶ್ವರ್, ಬಳಿಕ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಗಳಿಂದ, ನಾಡಿನ ಜನತೆ ನೆಮ್ಮದಿಯಿಂದ ಊಟ ಮಾಡುವಂತಾಗಿದೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ವರದಾನವಾಗಿದ್ದು, ಈ ಯೋಜನೆಗಳ ಅಗತ್ಯತೆ ಕುರಿತು ಜನತೆಗೆ ತಿಳಿಸುವಂತೆ ಮನವಿ ಮಾಡಿದರು. ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು.

ಈ ವೇಳೆ ನಗರಸಭೆ ಸದಸ್ಯ ಹೆಚ್.ಎಸ್.ಶಿವಶಂಕರ್ (ಶಂಕ್ರಿ), ಶಿವು, ಮುಖಂಡರಾದ ಅಶ್ವಥ್ ನಾರಾಯಣ್, ಶರತ್ ಪಟೇಲ್, ರಾಘವ, ರಾಜೇಶ್, ರಘುನಂದನ್, ಮುನಿರಾಜು, ಮಂಜುನಾಥ್, ಕುಮಾರ್, ಗಣೇಶ್, ಹೇಮಂತ್ ಕುಮಾರ್, ಸುರೇಶ್, ಅಶೋಕ್, ಯಶವಂತ್ ಆರಾಧ್ಯ, ಮಲ್ಲಿಗೆ ನಿತಿನ್, ಹರ್ಷ, ಮುನಿಕೃಷ್ಣಪ್ಪ ಸೇರಿದಂತೆ ಅನೇಕ ಮುಖಂಡರಿದ್ದರು.