ವಿಜಯಪುರ: ನಮ್ಮ ಕೋರ್ ಕಮಿಟಿಯಲ್ಲಿ ನನ್ನ ಅಭ್ಯರ್ಥಿ ಎಂದು ತೀರ್ಮಾನಿಸಿದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಖಚಿತ ಎಂದು ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಹೇಳಿದ್ದು, ಮತ್ತೊಮ್ಮೆ ವಿಜಯೇಂದ್ರ ಅವರನ್ನು ಲೇವಡಿ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಬೆಳಗ್ಗೆ ಡಿಕೆ ಶಿವಕುಮಾರ್ ಮನೇಲ್ ಇದ್ದರೆ ಬಿಜೆಪಿ ಹೇಗ್ರಿ ಉದ್ದಾರ ಆಗ್ತೈತೆ..?
ರಾತ್ರಿ ಡಿಕೆ ಶಿವಕುಮಾರ್ ಮನೇಲಿ, ಮುಂಜಾನೆ ನಾಲ್ಕು ಗಂಟೆಗೆ ಸಿದ್ದರಾಮಯ್ಯ ಮನೇಲಿ, 11 ಗಂಟೆಗೆ ಬೋಲೋ ಭಾರತ್ ಮಾತಾಕೀ ಜೈ ಅಂದರೆ ನಡಿಯೋದಿಲ್ಲ ಎಂದು ವಿಜಯೇಂದ್ರ ಹೆಸರಳೇದ ಪರೋಕ್ಷವಾಗಿ ಲೇವಡಿ ಮಾಡಿದರು.
ಇನ್ನು ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಕುರಿತು ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧವಾಗಿದ್ದೇನೆ. ನನ್ನ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತವಾಗಿದೆ, ಠೇವಣಿ ಉಚಿತ ಎಂದರು.
ಬಿಜೆಪಿ ಕೋರ್ ಕಮಿಟಿಯಲ್ಲಿ ನನ್ನ ಹೆಸರು ಅಂತಿಮವಾದರೆ ಸ್ಪರ್ಧಿಸಲು ರೆಡಿಯಾಗಿದ್ದೇನೆ.
ಬೆಂಗಳೂರಿನಲ್ಲಿ ನಡೆದ ಸಭೆಗೆ ನಾ ಹೋಗಿಲ್ಲ..ಅಲ್ಲಿ 600 ಶಾಸಕರ ಬೆಂಬಲ ಇರೋವಾಗ ನಾ ಹೋಗಿ ಏನ್ ಮಾಡ್ಲಿ..? ಅವನ್ಯಾರೋ ಹೇಳಿದ್ದಾನಲ್ವಾ 60 ಶಾಸಕರ ಬೆಂಬಲ ಐತೆ ಅಂತ… ಮುಗ್ದೋಯ್ತು ಮತ್ತೇನ್ ಕಿಸಿಲಕ್ ಹೋಗೋದು.
ನಮಗೇನ ಕೆಲಸ 60 ಅಲ್ಲ 600 ಶಾಸಕರ ಬೆಂಬಲ ಐತೆ, 1500 ಎಂಪಿ ಬೆಂಬಲ ಐತೆ. ಒಂದೂವರೆ ಸಾವಿರ MLC ಬೆಂಬಲ ಐತೆ.. ಇಡೀ ರಾಜ್ಯಾದಾಗೆ ಕಾರ್ಯಕರ್ತರ ಬೆಂಬಲ ಐತೆ.. ಯತ್ನಾಳ್ ಹಿಂದೆ, ಜಾರಕ್ಕಿಹೋಳಿ ಹಿಂದೆ ಯಾವ್ಮಗ ಓವ್ನೆ… ಅದಕ್ಕೆ ಹೋಗಿಲ್ಲ ಎಂದು ವಿಜಯೇಂದ್ರ ಹೆಸರೇಳದೆ ಕುಟುಕಿದರು.
ಕಾರ್ಯಕರ್ತರ ಹುರುಪು ತುಂಬುವವ ಅಧ್ಯಕ್ಷ ಆಗಬೇಕು. ರಾತ್ರಿ ಬೆಳಗ್ಗೆ ಡಿಕೆ ಶಿವಕುಮಾರ್ ಮನೇಲ್ ಇದ್ದರೆ ಬಿಜೆಪಿ ಹೇಗ್ರಿ ಉದ್ದಾರ ಆಗ್ತೈತೆ..?
ರಾತ್ರಿ ಡಿಕೆ ಶಿವಕುಮಾರ್ ಮನೇಲಿ, ಮುಂಜಾನೆ ನಾಲ್ಕು ಗಂಟೆಗೆ ಸಿದ್ದರಾಮಯ್ಯ ಮನೇಲಿ, 11 ಗಂಟೆಗೆ ಬೋಲೋ ಭಾರತ್ ಮಾತಾಕೀ ಜೈ ನಡಿಯೋದಿಲ್ಲ ಎಂದು ವಿಜಯೇಂದ್ರ ಹೆಸರಳೇದ ಪರೋಕ್ಷವಾಗಿ ಲೇವಡಿ ಮಾಡಿದರು
ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ನಡುವಿನ ಸಮರದ ವಿಚಾರವು ಪ್ರಸ್ತಾಪಿಸಿ, ಇಬ್ಬರು ಜಗಳವಾಡಬೇಡಿ, ಕಷ್ಟ ಇದ್ದಾಗ ಜೊತೆಯಾಗಿ ಬಂದಿದ್ದೀರಿ, ಒಂದಾಗಿ ಮುಂದೆ ಸಾಗಿ. ನಿಮ್ಮ ಮನೆ, ಮನದ ಕಾಂಪೌಂಡ್ ಕಿತ್ತು ಹಾಕಿ ಒಂದಾಗಿರಿ ಎಂದು ಸಲಹೆ ನೀಡಿದ್ದಾರೆ.
ರೆಡ್ಡಿ-ರಾಮುಲು ನಡುವೆ ಕೆಲವರು ಹುಳಿ ಹಿಂಡಿದ್ದಾರೆ ಎಂದೂ ಯತ್ನಾಳ್ ಆರೋಪಿಸಿದ್ದಾರೆ.