Daily story: A lesson from the fox to the crocodile

ಹರಿತಲೇಖನಿ ದಿನಕ್ಕೊಂದು ಕಥೆ: ಮೊಸಳೆಗೆ ನರಿಯ ಪಾಠ

Daily story: ಗವಿಯಲ್ಲಿ ವಾಸವಾಗಿದ್ದ ಒಂದು ನರಿಗೆ ಏನೂ ಆಹಾರ ಸಿಕ್ಕಿರಲಿಲ್ಲ. ಅದೊಂದು ನದಿಯ ದಡಕ್ಕೆ ಬಂತು.

ನದಿಯ ಇನ್ನೊಂದು ದಡದಲ್ಲಿ ಕೆಂಪು ಕೆಂಪಾದ ಹಣ್ಣುಗಳ ಮರವೊಂದು ಗೋಚರಿಸಿತು. ಅಲ್ಲಿಗೆ ಹೋದರೆ ಬೇಕಾದಷ್ಟು ಹಣ್ಣು ತಿನ್ನಬಹುದೆನಿಸಿತು. ಆದರೆ ನದಿಯಲ್ಲಿ ತುಂಬಾ ನೀರಿದ್ದ ಕಾರಣ ನದಿಗಿಳಿಯಲು ಸಾಧ್ಯವಿರಲಿಲ್ಲ.

ಆ ನರಿಯನ್ನೇ ನೋಡುತ್ತಿದ್ದ ಒಂದು ಮೊಸಳೆಗೆ ಇದು ತನಗೆ ಹೊಟ್ಟೆ ತುಂಬಾ ಆಹಾರವಾಗಬಹುದು ಎಂಬ ಯೋಚಿಸಿ ಉಪಾಯವಾಗಿ ಅದನ್ನು ಹಿಡಿಯಲು ನಿರ್ಧರಿಸಿತು.

ಅದು ನರಿ ಬಳಿಗೆ ಹೋಗಿ ‘ಏನು ಯೋಚನೆ ಮಾಡುತ್ತಿದ್ದೀಯಾ, ಏನಾಗಬೇಕು?’ ಎಂದು ಕೇಳಿತು. ಅದಕ್ಕೆ ನರಿ ‘ನದಿಯ ಆಚೆ ದಡದಲ್ಲಿರುವ ಪ್ರಾಣಿಗಳಿಂದ ಇನ್ನೂ ಸುಂಕ ಬಂದಿಲ್ಲವಂತೆ. ಹುಲಿರಾಯರು ವಸೂಲಿ ಮಾಡಿಕೊಂಡು ಬಾ ಎಂದಿದ್ದಾರೆ. ಆದರೆ ನದಿ ದಾಟಲು ಆಗುವುದಿಲ್ಲ’ ಎಂದಿತು.

‘ಅದಕ್ಕೇನಂತೆ ನಾನು ದಾಟಿಸುತ್ತೇನೆ. ಆದರೆ ನನಗೆ ಅದರ ಸಂಬಳ ಕೊಡಬೇಕು’ ಎಂದು ಮೊಸಳೆ ಹೇಳಿ ನರಿಯನ್ನು ಬೆನ್ನಿನ ಮೇಲೆ ಕೂಡಿಸಿಕೊಂಡು ಆಚೆ ದಡಕ್ಕೆ ಹೋಯಿತು.

ದಡದಲ್ಲಿ ಕೆಳಗಿಳಿದ ಕೂಡಲೇ ನರಿಯನ್ನು ನುಂಗಬೇಕೆಂದು ಅದು ಎಣಿಸಿಕೊಂಡಿತ್ತು. ಆದರೆ ದಡ ತಲಪುವ ಮೊದಲೇ ನರಿ ಚಂಗನೆ ದಡಕ್ಕೆ ಹಾರಿತು. ‘ಸಂಬಳ ಎಲ್ಲಿ?’ ಎಂದು ಮೊಸಳೆ ಕೇಳಿದಾಗ ‘ಮರಳಿ ಬರುವಾಗ ಎರಡನ್ನೂ ಸೇರಿಸಿ ಕೊಡ್ತೇನೆ’ ಎಂದು ಓಡುತ್ತಲೇ ಹೇಳಿದ ನರಿ ಹಣ್ಣಿನ ಮರಗಳ ಬಳಿಗೆ ಹೋಗಿ ಉದುರಿದ್ದ ಹಣ್ಣುಗಳನ್ನು ಹೊಟ್ಟೆ ತುಂಬ ತಿಂದಿತು.

ಸಂಜೆಯವರೆಗೆ ಕಾದ ಮೊಸಳೆ ಮತ್ತೆ ನರಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಹಿಂತಿರುಗಿತು. ಅದರ ಬುದ್ಧಿವಂತಿಕೆ ಗೊತ್ತಿದ್ದ ಕಾರಣ ಅದು ದಡಕ್ಕೆ ಹಾರುವ ಮೊದಲೇ ಅದರ ಒಂದು ಕಾಲನ್ನು ಹಲ್ಲುಗಳಿಂದ ಗಟ್ಟಿಯಾಗಿ ಹಿಡಿದುಕೊಂಡಿತು.

ಚಾಲಾಕಿ ನರಿ ಜೋರಾಗಿ ನಗುತ್ತ ‘ಅಯ್ಯೋ ಮೊಸಳೆಯಣ್ಣ, ಇದೆಂಥ ನಿನ್ನ ಅವಸ್ಥೆ? ನನ್ನ ಕಾಲು ಹಿಡಿದು ನಮಸ್ಕರಿಸಬೇಕು ಅನ್ನುವ ಆಸೆಯಲ್ಲಿ ಕಾಲಿನ ಬದಲು ತೇಲುತ್ತಿರುವ ಒಂದು ಬೇರನ್ನು ಯಾಕೆ ಕಚ್ಚಿಕೊಂಡಿದ್ದೀ? ನನ್ನ ಕಾಲು ಇಲ್ಲಿದೆ ನೋಡು’ ಎಂದಿತು.

ಆ ಮಾತನ್ನು ನಂಬಿ ಮೊಸಳೆ ಕಾಲನ್ನು ಬಿಟ್ಟ ಕೂಡಲೇ ದಡಕ್ಕೆ ನೆಗೆದು ನರಿ ತಪ್ಪಿಸಿಕೊಂಡಿತು. ಹೇಗಾದರೂ ಮಾಡಿ ನರಿಯನ್ನು ತಿನ್ನದೆ ಬಿಡುವುದಿಲ್ಲ ಎಂದು ಶಪಥ ಮಾಡಿದ ಮೊಸಳೆ ನದಿಯ ದಡದಲ್ಲಿ ಒಂದು ಮರದಿಂದ ತುಂಬ ಹಣ್ಣುಗಳು ಬಿದ್ದಿರುವುದನ್ನು ನೋಡಿತು. ಅದನ್ನು ತಿನ್ನಲು ನರಿ ಬರುವುದು ಅದಕ್ಕೆ ಗೊತ್ತಿತ್ತು. ಆ ಸಮಯದಲ್ಲಿ ಮರದ ಕೆಳಗೆ ಹಣ್ಣುಗಳನ್ನು ರಾಶಿ ಹಾಕಿ ಅದರೊಳಗೆ ಹುದುಗಿಕೊಂಡಿತು.

ನರಿಗೆ ಹಣ್ಣುಗಳ ರಾಶಿ ಕಂಡು ಅನುಮಾನವಾಯಿತು. ‘ಹಣ್ಣುಗಳೇ, ಯಾವಾಗಲೂ ನಾನು ಬರುವಾಗ ಮೇಲಕ್ಕೆ ಹಾರುತ್ತಿದ್ದಿರಿ. ಆದರೆ ಇಂದೇನಾಗಿದೆ ನಿಮಗೆ? ಸುಮ್ಮನೆ ಯಾಕೆ ಮಲಗಿದ್ದೀರಿ?’ ಎಂದು ಕೇಳಿತು.

ಇದನ್ನು ಸತ್ಯವೆಂದೇ ನಂಬಿದ ಮೊಸಳೆ ಬಾಲದಲ್ಲಿ ಹಣ್ಣುಗಳನ್ನು ರಪರಪನೆ ಮೇಲಕ್ಕೆ ಚಿಮ್ಮಿಸಿತು. ಅಲ್ಲಿ ಮೊಸಳೆಯಿರುವುದು ಅರ್ಥವಾದ ಕೂಡಲೇ ನರಿ, ‘ಏನು ಮೊಸಳೆಯಣ್ಣ, ಹಣ್ಣುಗಳು ಹಾರುವುದಿಲ್ಲವೆಂದು ನಿನಗೆ ಗೊತ್ತಿಲ್ಲವೆ?’ ಎನ್ನುತ್ತ ಓಡಿಹೋಯಿತು.

ಮೊಸಳೆ ಹೊಸ ಉಪಾಯ ಹುಡುಕಿತು. ನರಿಯ ಗವಿಯನ್ನು ಪತ್ತೆ ಮಾಡಿ ಅದರೊಳಗೆ ಹೋಗಿ ಮಲಗಿತು.

ಬೇಟೆಗೆ ಹೋದ ನರಿ ಮರಳಿದಾಗ ಗವಿಯೊಳಗೆ ಹೋಗಿರುವ ಮೊಸಳೆಯ ಹೆಜ್ಜೆ ಗುರುತುಗಳನ್ನು ಕಂಡು ನಿಜ ವಿಷಯ ತಿಳಿದುಕೊಂಡು ಗಟ್ಟಿ ದನಿಯಲ್ಲಿ ‘ಗುಹೆಯಣ್ಣ, ಯಾವಾಗಲೂ ನಾನು ಬರುವಾಗ ಶಂಖ ಊದಿ ಸ್ವಾಗತಿಸುತ್ತಿದ್ದ ನೀನು ಇಂದೇಕೆ ಮೌನವಾಗಿರುವೆ? ಏನಾಗಿದೆ ನಿನಗೆ?’ ಎಂದು ಕೇಳಿತು.

ಇದನ್ನು ನಿಜವೆಂದು ಭಾವಿಸಿದ ಮೊಸಳೆ ಶಂಖದಂತೆ ಕೂಗಿತು. ಮೊಸಳೆಯ ಮೋಸ ತಿಳಿದ ಕೂಡಲೇ ನರಿ ‘ಅಯ್ಯೋ ಬೆಪ್ಪು ಮೊಸಳೆಯಣ್ಣ, ಗವಿ ಎಂದಿಗಾದರೂ ಕೂಗುವುದುಂಟೆ? ನಿನಗಷ್ಟೂ ಗೊತ್ತಿಲ್ಲವೆ?’ ಎಂದು ನಗುತ್ತ ಅಲ್ಲಿಂದ ದೂರ ಓಡಿಹೋಯಿತು.

ಮೊಸಳೆ ಇನ್ನೂ ಒಂದು ಉಪಾಯ ಹುಡುಕಿತು. ತನ್ನ ಹೆಂಡತಿಯನ್ನು ನರಿಯ ಬಳಿಗೆ ಕಳುಹಿಸಿತು. ಹೆಣ್ಣು ಮೊಸಳೆ ಕಣ್ಣೀರಿಳಿಸುತ್ತ ‘ನಿನ್ನ ಅಣ್ಣ ಅಂದರೆ ನನ್ನ ಗಂಡ ಮೊಸಳೆ ಸತ್ತು ಹೋಗಿದೆ.

ನನಗೆ ಕೊಡಬೇಕಾದ ಸಂಬಳವನ್ನಂತೂ ನರಿ ಕೊಡಲಿಲ್ಲ. ಅಂತ್ಯ ಸಂಸ್ಕಾರವನ್ನಾದರೂ ಮಾಡಿ ಸದ್ಗತಿ ಸಿಗುವಂತೆ ಮಾಡಲಿ ಎಂದು ಕೊನೆಯಾಸೆ ಹೇಳಿಕೊಂಡಿತ್ತು. ಆದ್ದರಿಂದ ನೀನು ಬಂದು ಅದರ ಬಯಕೆ ನೆರವೇರಿಸಬೇಕು’ ಎಂದು ಕೇಳಿಕೊಂಡಿತು.

ನರಿ ಅದರ ಜೊತೆಗೆ ಹೋಯಿತು. ಮರದ ಕೆಳಗೆ ನಿಶ್ಚಲವಾಗಿ ಮಲಗಿದ್ದ ಮೊಸಳೆಯನ್ನು ನೋಡಿ ‘ಇದು ಸತ್ತ ಹಾಗೆ ಕಾಣಿಸುವುದಿಲ್ಲವಲ್ಲ. ಸತ್ತವರು ಕಣ್ಣಿನ ರೆಪ್ಪೆ ಪಟಪಟ ಬಡಿಯುತ್ತಾರೆ. ನಾಲಿಗೆ ಹೊರಗೆ ಚಾಚುತ್ತಾರೆ. ಇದಕ್ಕೆ ಅಂತಹ ಯಾವ ಲಕ್ಷ ಣಗಳೂ ಕಾಣಿಸುತ್ತಿಲ್ಲ’ ಎಂದಿತು.

ಆಗ ತಾನು ಸತ್ತಿದ್ದೇನೆಂದು ತೋರಿಸಿಕೊಳ್ಳಲು ಮೊಸಳೆ ಕಣ್ಣರೆಪ್ಪೆಗಳನ್ನು ಪಟಪಟ ಬಡಿಯುತ್ತ ನಾಲಿಗೆ ಹೊರಗೆ ಹಾಕಿತು. ನರಿ ಜೋರಾಗಿ ನಕ್ಕು ‘ಹೆಡ್ಡ, ಸತ್ತವರು ರೆಪ್ಪೆ ಬಡಿಯುವುದು ಎಲ್ಲಾದರೂ ಉಂಟೆ? ನಿನ್ನ ಮೋಸದ ಬಲೆಗೆ ನಾನು ಎಂದಿಗೂ ಸಿಲುಕುವುದಿಲ್ಲ’ ಎಂದು ಹೇಳಿ ದೂರ ಓಡಿತು. ಮೊಸಳೆಗೆ ನಾಚಿಕೆಯಾಗಿ ಆ ಪ್ರದೇಶದಿಂದಲೇ ಹೋಗಿಬಿಟ್ಟಿತು.

ಕೃಪೆ: ಪ.ರಾಮಕೃಷ್ಣ ಶಾಸ್ತ್ರಿ (ಸಾಮಾಜಿಕ ಜಾಲತಾಣ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹಿಟ್ ಅಂಡ್ ರನ್ ಪ್ರಕರಣಕ್ಕೆ ಟ್ವಿಸ್ಟ್.. ಕೊಲೆ ಶಂಕೆ..!

ದೊಡ್ಡಬಳ್ಳಾಪುರ: ಹಿಟ್ ಅಂಡ್ ರನ್ ಪ್ರಕರಣಕ್ಕೆ ಟ್ವಿಸ್ಟ್.. ಕೊಲೆ ಶಂಕೆ..!

ಇಂದು ಬೆಳಗ್ಗೆ ವರದಿಯಾಗಿದ್ದ ಹಿಟ್ ಅಂಡ್ ರನ್ (Hit and run) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವ್ಯಕ್ತಿಯ ಹತ್ಯೆ ನಡೆದಿರುವ ಅನುಮಾನ (Murder) ಪೊಲೀಸರಿಗೆ ಕಂಡು ಬಂದಿದೆ.

[ccc_my_favorite_select_button post_id="112842"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!