ದೊಡ್ಡಬಳ್ಳಾಪುರ: ಮಳೆಗೂ ಮುನ್ನ ಏಕಾಏಕಿ ಮರಕ್ಕೆ ಸಿಡಿಲು (Thunderbolt) ಬಡಿದಿರುವ ಘಟನೆ ತಾಲೂಕಿನ ತೂಬಗೆರೆ ಹೋಬಳಿಯ ತಿರುಮಗೊಂಡನಹಳ್ಳಿಯಲ್ಲಿ ಸಂಭವಿಸಿದೆ.
ತಿರುಮಗೊಂಡನಹಳ್ಳಿಯ ಸಿದ್ದರಾಜು ಅವರ ಮನೆಯ ಮುಂಭಾಗದಲ್ಲಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದಿರುವ ಕಾರಣ ಮರ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಶುಕ್ರವಾರ ಸಂಜೆ ಮೋಡ ಕವಿದ ವಾತಾವರಣ ಇದ್ದಾಗಿಯೂ ಮಳೆ ಬಂದಿರಲಿಲ್ಲ. ಆದರೆ ಏಕಾಏಕಿ ಬಡಿದ ಸಿಡಿಲು ಗ್ರಾಮಸ್ಥರಲ್ಲಿ ಆಶ್ಚರ್ಯ, ಆತಂಕಕ್ಕೆ ಕಾರಣವಾಗಿದೆ.