ನವದೆಹಲಿ: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತದ ಸಶಸ್ತ್ರ ಪಡೆಗಳು ನಡೆಸಿರುವ ಆಪರೇಷನ್ ಸಿಂಧೂರ್ (Operation Sindoor) ಪ್ರತಿಕಾರದ ದಾಳಿ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದ್ದರೆ, ಪಾಪಿ ರಾಷ್ಟ್ರ ಪಾಕ್ ವಿಲ ವಿಲ ಅಂತ ಒದ್ದಾಡುತ್ತಿದೆ
ಅಂತೆಯೇ ಪಾಕಿಸ್ತಾನ ಸುದ್ದಿ ವಾಹಿನಿ ಒಂದರ ನಿರೂಪಕಿಯೋರ್ವರು ಭಾರತದ ಅಕ್ರಮಣಕಾರಿ ಆಪರೇಷನ್ ಸಿಂಧೂರ್ ನೋಡಿ ಲೈವ್‌ನಲ್ಲೇ ಗಳಗಳನೇ ಕಣ್ಣೀರಿಟ್ಟಿದ್ದಾರೆ.
ಪಾಕಿಸ್ತಾನದ ಮೇಲೇ ರಾತ್ರೋರಾತ್ರಿ ಭಾರತದ ದಾಳಿಯ ಕುರಿತು ಸ್ಟುಡಿಯೋದಲ್ಲಿ ಸುದ್ದಿ ವಾಚನೆ ವೇಳೆ ನ್ಯೂಸ್ ಆಂಕರ್ ಆಪರೇಷನ್ ಸಿಂಧೂರ್ ಭೀಕರತೆ ಕಂಡು ಕಣ್ಣೀರು ಹಾಕಿದ್ದಾರೆ.
ಆಪರೇಷನ್ ಸಿಂಧೂರ್ ಸುದ್ದಿ ಓದುವಾಗಲೇ ನಿರೂಪಕಿ ಭಾವುಕಳಾಗಿದ್ದಾರೆ. ನಮ್ಮ ದೇಶದ ಮೇಲೆ ಭಾರತ ಪ್ರಹಾರ ಮಾಡ್ತಿದೆ. ನಮ್ಮವರು ಸಾಯುತ್ತಿದ್ದಾರೆ ಎಂದು ಗೋಳಿಟ್ಟಿದ್ದಾರೆ.
ಸದ್ಯ ನಿರೂಪಕಿ ಅಳುತ್ತಿರೋ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.