ದೊಡ್ಡಬಳ್ಳಾಪುರ: ವನ್ನಿಗರಪೇಟೆ ನಗರದ ಸಪ್ತಮಾತೃಕ ಮಾರಿಯಮ್ಮ ದೇವಾಲಯದಿಂದ ಆರಂಭವಾಗಿರುವ ಕರಗ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಕರಗ ಉತ್ಸವವನ್ನು ಸಾವಿರಾರು ಜನ ವೀಕ್ಷಿಸುತ್ತಿದ್ದಾರೆ.
ಕುಪ್ಪಂನ ಪೂಜಾರಿ ಮುನಿರತ್ನಂ ಬಾಲಾಜಿ ಕರಗ ಹೊತ್ತು ಕರಗದ ಧಾರ್ಮಿಕ ವಿಧಿ ನೆರವೇರಿಸಿದರು.
5ನೇ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಕರಗ ಹೊರುತ್ತಿದ್ದಾರೆ. ಕರಗ ಅಂಗವಾಗಿ ನಗರದ ವಿವಿಧೆಡೆ ಪೂಜೆ ಪ್ರಸಾದ ವಿನಿಯೋಗ ನಡೆಯಲಿವೆ.
ಶ್ರೀ ಸಪ್ತಮಾತೃಕಾ ಮಾರಿಯಮ್ಮ ಸೇವಾಭಿವೃದ್ದಿ ಮತ್ತು ವಹ್ನಿಕುಲ ಕ್ಷತ್ರಿಯ ತಿಗಳರ ಸಂಘದ ನೇತೃತ್ವದಲ್ಲಿ ಕರಗ ಮಹೋತ್ಸವದ ಕಾರ್ಯಕ್ರಮಗಳು ನಡೆಯುತ್ತಿದೆ.
ಕರಗದ ಅಂಗವಾಗಿ ವಿವಿಧ ದೇವತಾ ಮೂರ್ತಿಗಳ ಉತ್ಸವಗಳು ನಡೆದವು.