ನವದೆಹಲಿ (Video): ಇತ್ತೀಚಿಗೆ ತೆರೆಕಂಡ ಕನ್ನಡ ಚಿತ್ರ ವಾಮನ (Vamana) ಸಿನಿಮಾದ ಮುದ್ದು ಮುದ್ದು ರಾಕ್ಷಸಿ ಗೀತೆ ಪ್ರೇಮಿಗಳು, ದಂಪತಿಗಳ ಹಾಟ್ ಫೇವರೇಟ್ ಆಗಿದೆ. ಕಾರಣ ಪ್ರೇಯಸಿ, ಮಡದಿಯರ ಕೋಪ, ಕೀಟಲೆಗೆ ರಾಕ್ಷಸಿ ಎಂದರೆ ಬೇಸರವಾಗುತ್ತದೆ ಎಂದು ಪ್ರೀತಿಯಿಂದ ಮುದ್ದು ರಾಕ್ಷಸಿ ಎಂದು ಪ್ರೇಮಿ, ಗಂಡಂದಿರು ಕರೆಯಲಾರಂಭಿಸಿದ್ದಾರೆ.
ಈಗ ವಿಷಯ ಏನಪ್ಪ ಅಂದರೆ, ದೇಶಕ್ಕೆ ಅರಸನಾದರೂ ಮಡದಿಗೆ ಗಂಡನೇ, ಅವಳ ಕೋಪವನ್ನು ಸಹಿಸಲೇಬೇಕೆಂಬ ಸಂದೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ಫ್ರೆಂಚ್ ಅಧ್ಯಕ್ಷನ ಮುಖಕ್ಕೆ ಮಡದಿ ಪಂಚ್ ನೀಡಿರುವುದು ವೈರಲ್ ಆಗಿರುವ ವಿಡಿಯೋ.
Macron, blink twice if you need help. pic.twitter.com/BRCEert9Rg
— End Wokeness (@EndWokeness) May 26, 2025
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ವಿಯೆಟ್ನಾಂನಿಂದ ಭಾನುವಾರ ಸಂಜೆ ತಮ್ಮ ಆಗ್ನೆಯ ಏಷ್ಯಾ ಪ್ರವಾಸವನ್ನು ಪ್ರಾರಂಭಿಸಲು ಹನೋಯ್ಗೆ ಬಂದಿಳಿದಿದ್ದಾರೆ.
ಈ ವೇಳೆ ವಿಮಾನದಿಂದ ಕೆಳಗಿಳಿಯಲು ಸಿಬ್ಬಂದಿಗಳು ವಿಮಾನದ ಬಾಗಿಲು ತೆರೆದ ವೇಳೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪತ್ನಿ ಬ್ರಿಗಿಟ್ ಮ್ಯಾಕ್ರನ್ ಇಳಿಯಲು ಸಿದ್ಧವಾಗುತ್ತಿದ್ದ ಎಮ್ಯಾನುಯೆಲ್ ಅವರ ಮುಖಕ್ಕೆ ಪಂಚ್ ನೀಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪತ್ನಿಯ ಪಂಚ್ ನೀಡಿದ್ದರಿಂದ ಫ್ರೆಂಚ್ ಅಧ್ಯಕ್ಷರು ಸ್ವಲ್ಪ ಹೊತ್ತು ಗಾಬರಿಗೊಂಡಂತೆ ಕಂಡರೂ, ಬೇಗನೆ ಸುಧಾರಿಸಿಕೊಂಡು ಸಹಜವಾಗಿಯೇ ಇದ್ದರು. ನಂತರ ನಿರ್ಗಮನ ದ್ವಾರದ ಮೂಲಕ ನಿಯೋಗಕ್ಕೆ ಕೈ ಬೀಸಿದರು.
ಇದಾದ ಬಳಿಕ ಮ್ಯಾಕ್ರನ್ ಏನೂ ನಡೆದಿಲ್ಲ ಎಂಬಂತೆ ತಮ್ಮ ಕೈ ಹಿಡಿದುಕೊಳ್ಳುವಂತೆ ಬ್ರಿಗಿಟ್ಗೆ ಸನ್ನೆ ಮಾಡುತ್ತಾರೆ. ಆದರೆ ಅದನ್ನು ಲೆಕ್ಕಿಸದ ಬ್ರಿಗಿಟ್ ಪ್ರತ್ಯೇಕವಾಗಿಯೇ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾರೆ.
ಇನ್ನು ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ದೇಶಕ್ಕೆ ಅಧ್ಯಕ್ಷ ಆದ್ರೆನೂ ಎಲ್ಲರ ಮನೆ ದೋಸೆ ತೂತೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.