ಡಿಕೆ ಶಿವಕುಮಾರ್‌ಗೆ ಕಣ್ಣೀರು ಬರುತ್ತಾ? ನನಗೇನೋ ಹಾಗೆ ಅನಿಸಿಲ್ಲ: ನಿಖಿಲ್ ಕುಮಾರಸ್ವಾಮಿ ಲೇವಡಿ

Is DK Shivakumar in tears?: Nikhil Kumaraswamy

ಬೆಂಗಳೂರು: ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆಗೆ ನಡೆಯಬೇಕು. ಆಗ ಮಾತ್ರ ಅಮಾಯಕ ಜೀವಗಳಿಗೆ ಮತ್ತು ಹೆತ್ತವರಿಗೆ ನ್ಯಾಯ ಒದಗಿಸಲು ಸಾಧ್ಯ. ಸಾವಿನಲ್ಲೂ ನಿಮ್ಮ ಸಣ್ಣತನ ಮಾಡಬಾರದು, ಕ್ರೀಡಾ ಮನೋಭಾವದಿಂದ ನೋಡಬೇಕು ಎಂದು ಅವರು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾವಿನ ನಂತರವೂ ಡಿಕೆ ಶಿವಕುಮಾರ್ (DK Shivakumar) ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಕಪ್‌ ಗೆ ಮುತ್ತಿಕ್ಕಿ, ಫೋಟೋ ತೆಗೆಸಿಕೊಂಡು ರೀಲ್ಸ್‌ ಮಾಡಿದ್ದಾರೆ, ನಾಚಿಕೆ ಆಗಲ್ವಾ. ಈಗ ಕಣ್ಣೀರು ಹಾಕಿದರೆ ಪ್ರಯೋಜನ ಏನು ಎಂದು ಅವರು ಕಿಡಿಕಾರಿದರು.

ಕಾಲ್ತುಳಿತ ದುರಂತದಲ್ಲಿ 12 ರಿಂದ 33 ವರ್ಷದವರು ಸಾವನಪ್ಪಿದ್ದಾರೆ. ಸರ್ಕಾರ ಇವರಿಗೆ ಐವತ್ತು ಕೋಟಿ ಹಣ ಪರಿಹಾರ ನೀಡಿದರು ಹೋಗಿರುವ ಜೀವವನ್ನ ಮತ್ತೆ ತರಲು ಸಾಧ್ಯವಿಲ್ಲ. ಮಕ್ಕಳನ್ನ ಕಳೆದುಕೊಂಡ ಪೋಷಕರ ಭವಿಷ್ಯದ ಮುಂದಿನ ಸ್ಥಿತಿ ಏನು.? ಆ ಕುಟುಂಬದಲ್ಲಿ ಅಕ್ಕ ತಂಗಿ ಇದ್ದರೆ ಅವರ ವಿದ್ಯಾಭ್ಯಾಸಕ್ಕೆ ಸರ್ಕಾರ ಜವಾಬ್ದಾರಿ ತಗೋಬೇಕು. ಅವರಿಗೆ ಮುಂದೆ ಉದ್ಯೋಗವಕಾಶ ಮಾಡಿಕೊಡಬೇಕು ಎಂದು ಅವರು ಅಗ್ರಹಿಸಿದರು.

ವಿಜಯೋತ್ಸವವನ್ನ ಎರಡು ಕಡೆ ಯಾಕೆ ಆಯೋಜನೆ ಮಾಡಬೇಕಿತ್ತು. ಚಿನ್ನಸ್ವಾಮಿ ಸ್ಟೇಡಿಯಂಗಿಂತ ಜಾಗ ಬೇಕಾ. ಜನಕ್ಕೆ ಫ್ರಿ ಟಿಕೆಟ್ ಅಂತ ಹೇಳಿದ್ರು, ಫ್ರಿ ಅನ್ನೋದು ಇವರಿಗೆ ರೂಡಿಯಾಗಿದೆ ಅದಕ್ಕೆ ಫ್ರಿ ಸಾವು ಕೊಟ್ಟಿದ್ದಿರಾ.? ಎಂದು ಅವರು ಪ್ರಶ್ನಿಸಿದರು.

ದುರಂತವನ್ನ ಕ್ರೀಡಾ ಮನೋಭಾವದಿಂದ ನೋಡಿ

ಅಭಿನಂದನಾ ಸಮಾವೇಶದಲ್ಲಿ ಅಂತರಾಷ್ಟ್ರೀಯ ಆಟಗಾರರಿಗೆ ಯಾವ ರೀತಿ ಗೌರವ ಕೊಟ್ಟಿದ್ದಿರಾ.?ನಾವೆಲ್ಲಾ ಬೌರಿಂಗ್ ಆಸ್ಪತ್ರೆಗೆ ತೆರಳಿದ್ದಾಗ ಆಗ ಸಿಎಂ ಅವರು ಬೇಟಿ ಮಾಡ್ತಾರೆ. ಅಲ್ಲಿಯವರೆಗೂ ಸಿಎಂ ಜನಾರ್ಧನ ಹೋಟೆಲ್ ನಲ್ಲಿ ಟೀ ಕುಡಿತ್ತಿದ್ರಾ..? ಆಗಿರುವ ಘಟನೆಯನ್ನ ಕ್ರೀಡಾ ಮನೋಭಾವದಿಂದ ನೋಡಿ ರಾಜಕೀಯ ಮಾಡ್ಬೇಡಿ ಎಂದು ಕಿಡಿಕಾರಿದರು.

ತೆಲಾಂಗಣದಲ್ಲಿ ಚಲನಚಿತ್ರ ಬಿಡುಗಡೆಯಾಗಿ ದುರ್ಘಟನೆ ನಡೆದಾಗ ಯಾವ ರೀತಿ ಕ್ರಮ ತೆಗೆದುಕೊಂಡರಿ, ಎಲ್ಲಾ ಪ್ರೊಸೆಸ್ ಮಾಡುದ್ರಿ ಅವತ್ತು ನೀವು ಆ ನಟ ಮೇಲೆ ಎಫ್ ಐ ಆರ್ ಹಾಕಿದ್ರಿ, ಕಾಂಗ್ರೆಸ್ ಸರ್ಕಾರ ಆ ನಟನನ್ನ ಅರೆಸ್ಟ್ ಮಾಡಿದ್ದೀರಾ.ಈಗ ನಿಮ್ಮ‌ ಸರ್ಕಾರ ಇದೆ ಯಾರ ಮೇಲೆ ಎಫ್ ಐ ಆರ್ ಹಾಕ್ತಿರಾ..? ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.

ನ್ಯಾಯಾಧೀಶರ ಮೂಲಕ ತನಿಖೆಗೆ ಒತ್ತಾಯ

ಈಗ ಮ್ಯಾಜಿಸ್ಟ್ರೇಟ್ ಮೂಲಕ ತನಿಖೆ ಮುಂದುವರೆಸಿ ಪಾರದರ್ಶಕವಾಗಿ ಮಾಡ್ತಿವಿ ಎಂದು ಬಿಂಬಿಸಲು ಹೊರಟಿದ್ದಿರಾ.? ಅವರು ಯಾರ ಅಂಗಳದಲ್ಲಿ ಕೆಲಸ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಪಾರದರ್ಶಕವಾಗಿ ತನಿಖೆ ಮಾಡುವುದಾದರೆ ನ್ಯಾಯಾಧೀಶರ ಮೂಲಕ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು.

ರಾಜ್ಯದ ಇತಿಹಾಸದ ಎರಡನೇ ಅತೀ ದೊಡ್ಡ ಕಾಲ್ತುಳಿತ ದುರಂತ

ನಿನ್ನೆಯ ಕಾಲ್ತುಳಿತ ದುರಂತ ರಾಜ್ಯದ ಇತಿಹಾಸದ ಎರಡನೇ ಅತೀ ದೊಡ್ಡ ಪ್ರಕರಣವಾಗಿದೆ. ಭಾರತ ವರ್ಲ್ಡ್ ಕಪ್ ಗೆದ್ದಾಗ ಮುಂಬೈನಲ್ಲಿ ಪೆರೆಡ್ ನಲ್ಲಿ ಸುಮಾರು 3ಲಕ್ಷ ಕ್ಕೂ ಹೆಚ್ಚು ಜನ ಭಾಗಿಯಾಗಿದ್ರು. ಯಾವುದಾದರೂ ಒಂದು ದುರ್ಘಟನೆ ನಡೆಯಿತಾ.? ಪ್ರಧಾನಿಯವರು ರಾಜ್ಯಕ್ಕೆ ಭೇಟಿ ಕೊಟ್ಟಾಗ ಪೊಲೀಸ್ ಭದ್ರತೆ ಆಯ್ತಾ.? ಎಂದು ವಾಗ್ದಾಳಿ ನಡೆಸಿದರು.

ಸಿಎಂ ಅವರು ಮೂರರಿಂದ‌ ನಾಲ್ಕು ಲಕ್ಷ‌ ಜನ ನಿರೀಕ್ಷೆಗೂ ಮೀರಿದ ಜನ ಸೇರಿದ್ರು ಎಂದಿದ್ದಾರೆ. ಪಹಲ್ಗಾಮ್ ಘಟನೆಯ ಬಳಿಕ ಇಂಟೆಲಿಜೆನ್ಸ್‌ ಸತ್ತು ಹೋಗಿತ್ತಾ ಎಂದು ಸಿಎಂ ಅವರು ಹೇಳಿದ್ರು. ಇವತ್ತು ಟಿ ಕುಡಿಯೋಕೆ ಟಿಫನ್ ತಿನ್ನೋಕೆ ಹೋಗಿತ್ತಾ.? ಘಟನೆ ಬಗ್ಗೆ ಗೃಹ ಸಚಿವರಿಂದ ಒಂದು ಹೇಳಿಕೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಗೃಹ ಸಚಿವರ ಅಧಿಕಾರ ಮೇಲೆ ಸವಾರಿ ಮಾಡಿ ಜಿಪಿಎ ತಗೊಂಡಿದ್ದಾರೆ ಕೆಲವರು.ಇದರ ಬಗ್ಗೆ ಗೃಹ ಸಚಿವರಿಗೆ ಯಾವುದೆ ಮಾಹಿತಿ ಇದ್ದಂಗಿಲ್ಲಾ.! ಸಿಎಂ‌ ಅವರನ್ನ ಓವರ್ ಟೇಕ್ ಮಾಡಿದ ಮಹಾನುಭಾವ ಒಬ್ಬರು ಇದ್ದಾರೆ. ಡಿಸಿಎಂ ಏನಾದ್ರು RCB ನಾಯಕ ರಜತ್ ಪಾಟಿದಾರ್ ಬದಲು ಕಫ್ ಗೆಲ್ಲೋದಕ್ಕೆ ಕಾರಣ ಆಗಿದ್ರಾ..? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಅಭಿನಂದನಾ ಸಮಾರಂಭದ ವೇಳೆ
ನಾಲ್ಕೈದು ಸಾವಿನ ಪ್ರಕರಣ ಆಗಿದೆ ಅಂತ ಗೊತ್ತಾದಮೇಲೂ, ಡಿಸಿಎಂ ಅವರು ಕಫ್ ಗೆ ಮುತ್ತು ಕೊಟ್ಟಿದ್ದು, ರೀಲ್ಸ್ ಮಾಡಿದ್ರು ನಿನ್ನೆಯ ಘಟನೆಗೆ ಮುಖದಲ್ಲಿ ವಿಷಾದ ವ್ಯಕ್ತಪಡಿಸಿದ ಭಾವನೆ ಕಾಣ್ತಾ ಇರಲಿಲ್ಲ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.

ರಾಜಕೀಯ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಬಿಜೆಪಿಯ (BJP) ಗತವೈಭವದ ದಿನಗಳು ದಾವಣಗೆರೆಯಲ್ಲಿ ಮರುಕಳಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

[ccc_my_favorite_select_button post_id="121758"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]