ರುದ್ರಪ್ರಯಾಗ: ಕೇದಾರನಾಥ ಧಾಮಕ್ಕೆ ಹೋಗುವ ಮಾರ್ಗದಲ್ಲಿ ಖಾಸಗಿ ಹೆಲಿಕಾಪ್ಟರ್ (Helicopter) ತಾಂತ್ರಿಕ ದೋಷದಿಂದಾಗಿ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಗುಪ್ತಕಾಶಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಹೆಲಿಕಾಪ್ಟರ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಡಾ.ವಿ ಮುರುಗೇಶನ್ ಮಾಧ್ಯಮಗಳಿಗೆ ಹೇಳಿದ್ದಾರೆ.
🚨 Helicopter crash-lands near Kedarnath, the fourth chopper mishap on the Char Dham route in 30 days. pic.twitter.com/YOaj98SIGO
— Indian Tech & Infra (@IndianTechGuide) June 7, 2025
ಕ್ರಿಸ್ಟಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಹೆಲಿಕಾಪ್ಟರ್ (Helicopter), ಸಿರ್ಸಾದಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ, ಹೆಲಿಪ್ಯಾಡ್ ಬದಲಿಗೆ ರಸ್ತೆಯಲ್ಲಿ ಲ್ಯಾಂಡ್ ಆಗಿದೆ. ಆದ್ದರಿಂದ ಕೇದಾರನಾಥ ಧಾಮಕ್ಕೆ ಹೊರಟಿದ್ದ ಭಕ್ತಾದಿಗಳು ಆತಂಕಕ್ಕೀಡಾಗಿದ್ದರು.