The positions I have obtained are the result of my hard work: B.C. Anand

ನಾನು ಪಡೆದ ಹುದ್ದೆಗಳು ಭಿಕ್ಷೆಯಲ್ಲ, ನನ್ನ ಶ್ರಮದ ಫಲ: ಬಿಸಿ ಆನಂದ್ ತಿರುಗೇಟು

ದೊಡ್ಡಬಳ್ಳಾಪುರ: ಮಾಜಿ ಶಾಸಕ ಟಿ.ವೆಂಕಟರಮಣಯ್ಯ (T.Venkataramaniah) ಶಾಸಕರಾಗುವ ಮುಂಚಿನಿಂದಲೂ ನಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು, ಬಮೂಲ್ ನಿರ್ದೇಶಕರಾಗಿ ಸೇರಿದಂತೆ ನಾನು ಅನುಭವಿಸಿರುವ ಅಧಿಕಾರ ಹಾಗೂ ಹುದ್ದೆಗಳು ರಾಜಕೀಯವಾಗಿ ನನ್ನ ಶ್ರಮದಿಂದ ಗಳಿಸಿರುವುದೇ ಹೊರತು ನಿಮ್ಮ ಭಿಕ್ಷೆಯಿಂದ ಬಂದಿದ್ದಲ್ಲ ಎಂದು ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ (BC Anand Kumar) ತಿರುಗೇಟು ನೀಡಿದ್ದಾರೆ.

ನಗರದ ಬಮೂಲ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಮೂಲ್ ಚುನಾವಣೆ, ಕೆಎಂಎಫ್ ನಿರ್ದೇಶಕ ಸ್ಥಾನ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಲ್ಲಲು ನಾನು ಹಾಕಿದ ಭಿಕ್ಷೆ ಎನ್ನುವ ಮಾಜಿ ಶಾಸಕರ ಮಾತಿನಲ್ಲಿ ಸತ್ಯವಿಲ್ಲ. ಅವರು 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂದರು. ಆದರೆ ನಾನು 1995ರಿಂದಲೇ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ.

ಮಾಜಿ ಶಾಸಕ ಗಂಟಿಗಾನಹಳ್ಳಿ ಕೃಷ್ಣಪ್ಪ ಅವರ ಪರವಾಗಿ ಕೆಲಸ ಮಾಡಿದ್ದೆ. 1997ರಲ್ಲಿ ಮಜರಾಹೊಸಹಳ್ಳಿ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಬರಲು ಶ್ರಮಿಸಿದ್ದೆ.

ಡಿಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಜೀವ್ ಗಾಂಧಿ ಶಕ್ತಿ ಕೇಂದ್ರದ ಪ್ರತಿನಿಯಾಗಿ ಕೆಲಸ ಮಾಡಿದ್ದೆ. ಮಾಜಿ ಶಾಸಕರು ರಾಜಕೀಯವಾಗಿ ಸಕ್ರಿಯವಾಗುವ ಮುಂಚೆಯೇ ಗ್ರಾಮಪಂಚಾಯಿತಿ ಸದಸ್ಯನಾಗಿ, ಉಪಾಧ್ಯಕ್ಷನಾಗಿ ನಂತರ ಅಧ್ಯಕ್ಷನಾಗಿ ನಂತರ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಹ ಸ್ಪರ್ಧಿಸಿ, ಕಡಿಮೆ ಅಂತರದಿಂದ ಸೋತಿದ್ದೆ.

ನನಗೆ ಪಕ್ಷ ನೀಡಿದ್ದಕ್ಕಿಂತ ಹೆಚ್ಚಾಗಿ ಅದರ ಎರಡರಷ್ಟು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿ, ಆರ್.ಜಿ.ವೆಂಕಟಾಚಲಯ್ಯ ಅವರ ಗೆಲುವಿಗೆ ಶ್ರಮಿಸಿದ್ದೇನೆ. ಆದರೆ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗಿಲ್ಲ. ಅದನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಜೆ.ನರಸಿಂಹಸ್ವಾಮಿ ಅವರಿಗೆ ನಾನು ಬೆಂಬಲಿಸಿದಾಗ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಿತ್ತು. ಈಗಿನ ಶಾಸಕ ಧೀರಜ್ ಮುನಿರಾಜು ಸಹ ಉತ್ತಮ ವ್ಯಕ್ತಿ ಎಂದು ಬೆಂಬಲಿಸಿದ್ದೇನೆ. ಭ್ರಷ್ಟರಾದರೆ ಅವರು ಯಾರೇ ಆಗಲೀ ಅವರನ್ನು ನಾನು ಬೆಂಬಲಿಸುವುದಿಲ್ಲ.

ಬಮೂಲ್ ಚುನಾವಣೆಗೆ ನನ್ನ ಯೋಗ್ಯತೆ ನೋಡಿ ಸ್ಪರ್ಧಿಸಲು ಅವಕಾಶ ನೀಡಿದ್ದರು. ನನಗೆ ನೀವು ಭಿಕ್ಷೆ ಕೊಡುವಷ್ಟು ಯೋಗ್ಯರಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕರ ಸಹೋದರನನ್ನು ಏಕೆ ನಿಲ್ಲಿಸಲಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಟಿಕೆಟ್ ನಾನು ಕೇಳಿರಲಿಲ್ಲ

ಕಾಂಗ್ರೆಸ್ ಕಟ್ಟಾಳುವಾಗಿ ಅಡಿಪಾಯ ಹಾಕಿದ್ದೇನೆ. ಡಿಕೆಶಿ ಪಟ್ಟಾ ಶಿಷ್ಯ ನಾನು. ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಾನು ಅವರ ಬಳಿ ಅರ್ಜಿ ಹಾಕಿರಲಿಲ್ಲ. ಅದಕ್ಕೆ ಬಲವಂತ ಮಾಡಿದವರು ಅವರು. ಅಂದು ಸಿ.ನಾರಾಯಣಸ್ವಾಮಿ, ಡಾ.ವಿಜಯಕುಮಾರ್ ಎದುರಿಸುವ ಶಕ್ತಿ ಅವರಲ್ಲಿ ಇರಲಿಲ್ಲ .ನಾನು ಯಾವತ್ತೂ ನಿಮ್ಮ ಬಳಿ ಭಿಕ್ಷೆ ಬೇಡಿಲ್ಲ ನನಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕೊಟ್ಟಿದ್ದರೆ ಅದು ಭಿಕ್ಷೆ ಅಂದುಕೊಳ್ಳುತ್ತೇನೆ ಎಂದರು.

ಕೆಎಂಎಫ್ ಕೇಳಿಲ್ಲ

ನಾನು ಕೆಎಂಎಫ್ ನಿರ್ದೇಶಕರಾಗಲು ಸಹ ಭಿಕ್ಷೆ ಕೊಟ್ಟಿದ್ದು ಎಂದು ಹೇಳಿದ್ದೀರಿ. ಅದು ಸುಳ್ಳು ನನಗೆ ನಿರ್ದೇಶಕರಾಗುವ ಉದ್ದೇಶವೇ ಇರಲಿಲ್ಲ. ಡಿಕೆ ಶಿವಕುಮಾರ್ ಅವರು ನನ್ನನ್ನು ಕೆಎಂಎಫ್ ನಿರ್ದೇಶಕರಾಗಿಸಿದರು. ಇದು ಅವರ ಹಾಕಿದ ಭಿಕ್ಷೆ ಎನ್ನುಬಹುದು.

ಡಿಕೆಶಿಗೆ ಹಾರ ತಾಲೂಕಿಗೋಸ್ಕರ

ಕೆಪಿಸಿಸಿ ವಕ್ತಾರರು ಆರೋಪಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲು ರಾತ್ರೋರಾತ್ರಿ ಹೋಗಿಲ್ಲ. ತಾಲೂಕಿನಲ್ಲಿ ಬಮೂಲ್‍ನಲ್ಲಿ ಕೆಲಸಗಳಾಗಬೇಕು. ಈ ಹಿಂದೆ ಬಮೂಲ್ ಉತ್ಪನ್ನಗಳ ಘಟಕಕ್ಕೆ ಡಿಕೆ ಶಿವಕುಮಾರ್ ಜಮೀನು ಮಂಜೂರು ಮಾಡಿಸಿದ್ದಾರೆ. ಅವರಿಂದ ನಮ್ಮ ತಾಲೂಕಿಗೆ ಕೆಲಸಗಳಾಗಬೇಕಿದೆ. ಅವರ ಮೇಲಿನ ಅಭಿಮಾನದಿಂದ ಹಾರ ಹಾಕಿ ಬಂದೆ ಎಂದರು.

ಕಾಂಗ್ರೆಸ್ ಶಕ್ತಿಹೀನ

ನಿಮ್ಮ ಬಗ್ಗೆ ಅಧಿಕಾರಿಗಳಲ್ಲಿ ಒಳ್ಳೆ ಅಭಿಪ್ರಾಯ ಇಲ್ಲ. ಅಪ್ಪನ ಬಗ್ಗೆ ಮಾತನಾಡಿರುವುದು ಆಕಸ್ಮಿಕವಾಗಿ ಬಂದಿರುವುದು. ಆದರೆ ನನ್ನ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಲು ಹೊರಟಿದ್ದರು. ಅದಕ್ಕಾಗಿ ನಾನು ಅಡಾಸ್ ಪದ ಬಳಸಬೇಕಾಯಿತು.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನೂ ನಿಮ್ಮಿಂದ ಉದ್ದಾರ ಆಗಿಲ್ಲ. ಪಕ್ಷ ಬಿಟ್ಟು ಹೊರಬಂದು ನಿಮ್ಮ ಶಕ್ತಿ ಪ್ರದರ್ಶಿಸಿ, ಇವರು ಪಕ್ಷ ಬಿಟ್ಟರೆ ಕಾಂಗ್ರೆಸ್ ಫೀನಿಕ್ಸ್‍ನಂತೆ ಮೇಲೇಳುತ್ತದೆ. ಕೊವಿಡ್ ಸಮಯದಲ್ಲಿ ಯಾರು ಜನರಿಗೆ ಸಹಾಯ ಮಾಡಿದ್ದರೋ ಅವರನ್ನು ಜನ ಬೆಂಬಲಿಸಿದ್ದಾರೆ. ಯಾರಿಗೂ ಸಹಾಯ ಮಾಡದವರನ್ನು ದೂರ ನಿಲ್ಲಿಸಿದ್ದಾರೆ.

ಶಾಸಕರಾಗಿದ್ದಾಗ ಅಧಿಕಾರಿಗಳಿಂದ ಹಣ ಪಡೆದಿಲ್ಲ ಎಂದು ನಿರೂಪಿಸಿ, ನಾನು ಏನು ಜನರಿಗೆ ಸಹಾಯ ಮಾಡಿದ್ದೇನೆ ನೀವು ಏನು ಮಾಡಿದ್ದೀರಿ, ಎನ್ನುವುದು ಸಾಬೀತು ಮಾಡಲು ಧರ್ಮಸ್ಥಳಕ್ಕೆ ಬನ್ನಿ ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದರು.

ಸುದ್ಧಿಗೋಷ್ಟಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್, ನಾಗರಿಕ ಹಿತರಕ್ಷಣಾ ಸಮಿತಿಯ ರವೀಂದ್ರ ಕುಮಾರ್ ಮತ್ತಿತರರಿದ್ದರು.

ರಾಜಕೀಯ

ಮುಸ್ಲಿಮರಿಗೆ ಮೀಸಲು ಹೆಚ್ಚಳ ಮಾಡಿರುವುದು ಅಪಚಾರ: ಆರ್‌ ಅಶೋಕ ಕಿಡಿ

ಮುಸ್ಲಿಮರಿಗೆ ಮೀಸಲು ಹೆಚ್ಚಳ ಮಾಡಿರುವುದು ಅಪಚಾರ: ಆರ್‌ ಅಶೋಕ ಕಿಡಿ

ವಸತಿ ಯೋಜನೆಯಲ್ಲಿ ಮುಸ್ಲಿಮರ ಮೀಸಲು ಹೆಚ್ಚಳ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಈ ಮೂಲಕ ಕಾಂಗ್ರೆಸ್‌ ಸರ್ಕಾರ ಜನರ ಹಕ್ಕನ್ನು ಕಸಿದಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ (R Ashoka)

[ccc_my_favorite_select_button post_id="109571"]
ದೊಡ್ಡಬಳ್ಳಾಪುರ ‘ಕ್ವಿನ್ ಸಿಟಿ’ ಕುರಿತು ಎಡಿಬಿ ಉನ್ನತ ನಿಯೋಗಕ್ಕೆ ಪ್ರಾತ್ಯಕ್ಷಿಕೆ ಪ್ರಸ್ತುತಿ

ದೊಡ್ಡಬಳ್ಳಾಪುರ ‘ಕ್ವಿನ್ ಸಿಟಿ’ ಕುರಿತು ಎಡಿಬಿ ಉನ್ನತ ನಿಯೋಗಕ್ಕೆ ಪ್ರಾತ್ಯಕ್ಷಿಕೆ ಪ್ರಸ್ತುತಿ

ದೊಡ್ಡಬಳ್ಳಾಪುರ-ಡಾಬಸ್ ಪೇಟೆ ನಡುವೆ ನಿರ್ಮಾಣವಾಗಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕ್ವಿನ್ ಸಿಟಿ’ (Kwin City) ಯೋಜನೆ ಬಗ್ಗೆ ಏಷ್ಯನ್ ಡೆವಲಪ್ಮೆಂಟ್

[ccc_my_favorite_select_button post_id="109562"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಪ್ರೇಯಸಿಯ ಕೊಂದು ಗೋವಾ ಕಾಡಿಗೆಸೆದ ಪಾಗಲ್ ಪ್ರೇಮಿ.. ಬೆಂಗಳೂರಲ್ಲಿ ಬಂಧನ..!

ಪ್ರೇಯಸಿಯ ಕೊಂದು ಗೋವಾ ಕಾಡಿಗೆಸೆದ ಪಾಗಲ್ ಪ್ರೇಮಿ.. ಬೆಂಗಳೂರಲ್ಲಿ ಬಂಧನ..!

ಮದುವೆಯಾಗಲು ಬೆಂಗಳೂರಿನಿಂದ ಗೋವಾಕ್ಕೆ ತೆರಳಿದ್ದ ಪ್ರೇಮಿಗಳಿಬ್ಬರ ನಡುವೆ ಉಂಟಾದ ಸಣ್ಣ ಮನಸ್ತಾಪದಿಂದ ಯುವಕ ತನ್ನ ಗೆಳತಿಯನ್ನು ಕೊಂದು ಕಾಡಿನಲ್ಲಿ ಬಿಸಾಕಿ (Murder)

[ccc_my_favorite_select_button post_id="109448"]
ದೊಡ್ಡಬಳ್ಳಾಪುರ: ಬೈಕ್ಗೆ ಟ್ಯಾಂಕರ್ ಡಿಕ್ಕಿ.. ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ: ಬೈಕ್ಗೆ ಟ್ಯಾಂಕರ್ ಡಿಕ್ಕಿ.. ಸವಾರನ ಸ್ಥಿತಿ ಗಂಭೀರ

ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ

[ccc_my_favorite_select_button post_id="109301"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]