ತಿರುಪತಿ: ಮಾನ್ಯತೆ (ಜಿಐ ಟ್ಯಾಗ್) ಪಡೆದಿರುವ ಪ್ರಸಿದ್ಧ ತಿರುಪತಿ ಲಡ್ಡುವನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಆನೈನ್ ಮಾರಾಟ ಸಂಸ್ಥೆಗಳ ವಿರುದ್ದ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (TTD) ನೋಟಿಸ್ ಜಾರಿಗೊಳಿಸಿದೆ.
ಪುಷ್ ಮೈ ಕಾರ್ಟ್ (ಮಹಿತ ಎಲ್‌ಎಲ್ಸಿ) ಮತ್ತು ಟ್ರಾನ್ಸಾಕ್ಟ್ ಫುಡ್ಸ್ ಲಿ. ಸೇರಿ ಹಲವು ಸಂಸ್ಥೆಗಳಿಗೆ ನೋಟಿಸ್ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಸ್ಥೆಗಳು ತಮ್ಮ ಮಾರಾಟ ಉತ್ಪನ್ನಗಳ ಪಟ್ಟಿಯಿಂದ ತಿರುಪತಿ ಲಡ್ಡುವನ್ನು ಕೈಬಿಟ್ಟಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ತಿರುಪತಿ ಲಡ್ಡು ಕೇವಲ ಒಂದು ಉತ್ಪನ್ನವಲ್ಲ. ಅದೊಂದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯ ಹೊಂದಿರುವ ಪವಿತ್ರ ಪ್ರಸಾದ ಎಂದು ಟಿಟಿಡಿ ಹೇಳಿದೆ.