ದೊಡ್ಡಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರಿಗೆ ವಿಶ್ವನಾಥಪುರ ಠಾಣೆ ಪೊಲೀಸರು (Police) ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ವಾಹನ ಸವಾರರು ಸಂಚಾರನಿಯಮ ಉಲ್ಲಂಘನೆ ಮಾಡುತ್ತಿರುವ ಕುರಿತು ದೂರು ಹೆಚ್ಚಾದ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಕೆಪಿಎಸ್ ಶಾಲೆ ಮುಂಭಾಗ ಹಾದುಹೋಗುವ ರಾಹೆ 648ರಲ್ಲಿ ವಿಶ್ವನಾಥಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಟಿ. ಶ್ರೀನಿವಾಸ್ ನೇತೃತ್ವದಲ್ಲಿ ಪೊಲೀಸರು ಬ್ಯಾರಿಗೇಡ್‌ಗಳನ್ನು ಅಳವಡಿಸಿ, ಅತಿವೇಗ ವಾಹನಗಳ ತಪಾಸಣೆ ಮತ್ತು ಹೆಲೈಟ್ ಧರಿಸದೆ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು ಸಂಚಾರ ನಿಯಮ ಪಾಲಿಸುವಂತೆ ಸೂಚಿಸಿದರು. ಜತೆಗೆ ದಂಡ ವಿಧಿಸಿದರು.
ಪಿಐ ಟಿ.ಶ್ರೀನಿವಾಸ್ ಅವರು ಮಾತನಾಡಿ, ವಿಶ್ವನಾಥಪುರ ಪೊಲೀಸರ ಕಾರಾಚರಣೆ ಹದಿಹರೆಯದ, ಪರವಾನಿಗೆ ಇಲ್ಲದೆ, ಹೆಜ್ಜೆಟ್ ಧರಿಸದೆ ರಸ್ತೆಗಿಳಿದ ದ್ವಿಚ ಕ್ರವಾಹನ ಸವಾರರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು. ಕಾರು, ಇನ್ನಿತರೆ ವಾಹನಗಳ ಚಾಲಕರಿಗೆ ಸೀಟ್‌ಬೆಲ್ಟ್ ಉಪಯೋಗಿ ಸಲು ಸೂಚಿಸಿದರು.
ಸಂಚಾರ ನಿಯಮಗಳ ಕಡ್ಡಾಯ ಪಾಲನೆ ಚಾಲಕರ ಆದ್ಯ ಕರ್ತವ್ಯವಾಗಿರ ಬೇಕು ಎಂದು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥಪುರ ಪೊಲೀಸ್ ಠಾಣೆಯ ಎಎಸ್‌ಐ ಶ್ರೀನಿ ವಾಸ್, ವೆಂಕಟಾಚಲಯ್ಯ, ಹೆಡ್ ಕಾನ್ಸ್ ಟೆಬಲ್ ದೇವರಾಜ್, ನಾಗೇಶ್, ಹರಿಪ್ರ ಸಾದ್, ಈಶ್ವರ್, ಸಿಬ್ಬಂದಿ ಉಮೇಶ್, ನಾಗೇಶ್, ಅನಿಲ್, ಇದ್ದರು.
ವಿಶ್ವನಾಥಪುರ ಠಾಣೆ ಪೊಲೀಸರು ರಸ್ತೆ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರು ಮತ್ತು ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು.
ದೊಡ್ಡಬಳ್ಳಾಪುರ ಪೊಲೀಸರು ಅಳವಡಿಸಿಕೊಳ್ಳಿ: ದೊಡ್ಡಬಳ್ಳಾಪುರ ತಾಲೂಕು ಟೋಲ್ ಕೇಂದ್ರಗಳಿಂದ ಸುತ್ತುವರಿದಿದ್ದು, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿದೆ.
ಅಂತೆಯೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅಪಘಾತ ಪ್ರಕರಣಗಳು ತೀವ್ರವಾಗಿದ್ದು, ವಾಹನ ಸವಾರರ ನಿರ್ಲಕ್ಷ್ಯ ಪ್ರಮುಖ ಕಾರಣ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ವಿಶ್ವನಾಥಪುರ ಪೊಲೀಸರಂತೆ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ದೊಡ್ಡಬೆಳವಂಗಲ ವ್ಯಾಪ್ತಿಯ ಪೊಲೀಸರು ಬೇಕಾಬಿಟ್ಟಿ ವಾಹನ ಚಲಾವಣೆ ಮಾಡುವ ವಾಹನ ಸಾವರರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದರೆ, ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಬಹುದು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.