ನವದೆಹಲಿ: ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ತನ್ನ 11 ವರ್ಷಗಳ ಅಧಿಕಾರದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮರುವ್ಯಾಖ್ಯಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Modi – 11) ಹೇಳಿದ್ದಾರೆ.
ವಿಜ್ಞಾನ, ಶಿಕ್ಷಣ, ಕ್ರೀಡೆ, ನವೋದ್ಯಮಗಳು ಮತ್ತು ಸಶಸ್ತ್ರ ಪಡೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಶ್ರೇಷ್ಟ ಸಾಧನೆ ಮಾಡಿದ್ದಾರೆ. ಹಲವಾರು ಜನರಿಗೆ ಸ್ಫೂರ್ತಿ ನೀಡುತ್ತಿದ್ದಾರೆ ಎಂದು ತಮ್ಮ ಸರ್ಕಾರದ ಮೂರನೇ ಅವಧಿಯ ಮೊದಲ ವಾರ್ಷಿಕೋತ್ಸವಕ್ಕೆ ಒಂದು ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ವಿವರಿಸಿದ್ದಾರೆ.
ಇದೇ ವೇಳೆ ಕೇಂದ್ರದಲ್ಲಿ ಅಧಿಕಾರಕ್ಕೇರಿ 11 ವರ್ಷಗಳೇ ಕಳೆದರೂ ಈವರೆಗೂ ಒಂದೂ ಸುದ್ದಿಗೋಷ್ಠಿ ನಡೆಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಟೀಕಿಸಿದೆ.
No Indian PM has dodged press conferences like Modi.
— Vijay Thottathil (@vijaythottathil) June 8, 2025
11 years. Not one where journalists could ask real questions.
Is this leadership—or stage-managed PR?
Mann Ki Baat is not a substitute for a free press.
Why hasn’t PM Modi faced a single open press conference in 11 years?
India… pic.twitter.com/oF2N3rbZYu
ಮೋದಿ ಅವರು ನಡೆಸಿಕೊಡುವ ಮಾಧ್ಯಮ ಸಂವಾದಗಳೂ ಪೂರ್ವ ನಿರ್ಧರಿತವಾಗಿರುತ್ತವೆ.
ದೇಶವನ್ನು ಆಳಿದ ಹಿಂದಿನ ಪ್ರಧಾನ ಮಂತ್ರಿಗಳಂತೆ ಮುಕ್ತವಾಗಿ ಒಂದೂ ಸುದ್ದಿಗೋಷ್ಠಿಯನ್ನು ಮೋದಿ ಈವರೆಗೂ ನಡೆಸಿಕೊಟ್ಟಿದ್ದೇ ಇಲ್ಲ ಎಂದು ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ವವನ್ ಖೇರಾ ‘ಎಕ್ಸ್’ ಖಾತೆಗಳಲ್ಲಿ ಟೀಕಿಸಿದ್ದಾರೆ.
ಮೋದಿ 2024ರಲ್ಲಿ ಚುನಾವಣೆ ಪ್ರಚಾರ ಸಂದರ್ಭ ಮಾಧ್ಯಮ ಸಂವಾದ ನಡೆಸಿದರು. ಆದರೆ, ಅದರ ರಚನೆ, ನಿರ್ಮಾಣ, ನಿರ್ದೇಶನ ಎಲ್ಲವೂ ಅವರದ್ದೇ ಆಗಿತ್ತು, ಮುಕ್ತವಾಗಿ ಸುದ್ದಿಗೋಷ್ಠಿ ನಡೆಸಿ ಪತ್ರಕರ್ತರನ್ನು ಎದುರಿಸುವ ಧೈರ್ಯ ಮೋದಿ ಅವರಿಗೆ ಇಲ್ಲ ಎಂದು ಕಾಂಗ್ರೆಸ್ ನಾಯಕರು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.