ಮುಂಬೈ: ಮುಂಬೈನಲ್ಲಿ ನಡೆದ ದುರಂತ ಮತ್ತು ಆಘಾತಕಾರಿ ಘಟನೆಯಲ್ಲಿ, ವೇಗವಾಗಿ ಸಾಗುತ್ತಿದ್ದ ರೈಲಿನಿಂದ ಹಳಿಗಳ ಮೇಲೆ ಬಿದ್ದು 5 ಮಂದಿ ಪ್ರಯಾಣಿಕರು (Passenger) ಸಾವನ್ನಪ್ಪಿರುವ ಘಟನೆ ಮುಂಬ್ರಾ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಬಳಿ ಸಂಭವಿಸಿದೆ.
ಘಟನೆಯಲ್ಲಿ 10 ಕ್ಕೂ ಹೆಚ್ಚು ಪ್ರಯಾಣಿಕರು ಕೆಳಗೆ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆ ದಾಖಲಿಸಲಾಗಿದೆ.
ಪ್ರತಿ ನಿತ್ಯದಂತೆ ರೈಲಿನಲ್ಲಿ ಅತಿಯಾದ ಜನಸಂದಣಿಯಿಂದಾಗಿ ಈ ದುರ್ಘಟನೆ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಜನಸಂದಣಿಯ ಒತ್ತಡದಿಂದ ಬಾಗಿಲುಗಳ ಮೇಲೆ ಸುರಕ್ಷಿತವಾಗಿ ನೇತಾಡುತ್ತಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ರೈಲ್ವೆ ಆಡಳಿತವು ಅಪಘಾತದ ತನಿಖೆಯನ್ನು ಪ್ರಾರಂಭಿಸಿದೆ. ಅಪಘಾತದಿಂದಾಗಿ, ಸೆಂಟ್ರಲ್ ರೈಲ್ವೆಯ ಸ್ಥಳೀಯ ರೈಲು ಸೇವೆಗಳು ಪರಿಣಾಮ ಬೀರಿದವು ಎನ್ನಲಾಗಿದೆ.
BREAKING: Several passengers on a Mumbai local fall on the tracks, allegedly due to overcrowding.
— Vani Mehrotra (@vani_mehrotra) June 9, 2025
The incident happened while the local train was travelling from Mumbra towards CSMT. pic.twitter.com/lkXXNgu2iX
ಇನ್ನೂ ಈ ಘಟನೆ ಕುರಿತು ಕಾಂಗ್ರೆಸ್ ರೈಲ್ವೆ ಸಚಿವರ ವಿರುದ್ಧ ಕಿಡಿಕಾರಿದ್ದು, ಮುಂಬೈನಲ್ಲಿ ಜನದಟ್ಟಣೆಯಿಂದ ತುಂಬಿದ್ದ ಲೋಕಲ್ ರೈಲಿನಿಂದ ಸುಮಾರು 10-12 ಜನರು ಬಿದ್ದು, ಜೀವನೋಪಾಯಕ್ಕಾಗಿ ಹೊರಟಿದ್ದ ಐದು ಜನರು ಪ್ರಾಣ ಕಳೆದುಕೊಂಡರು.
ಈ ಘಟನೆಯನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮತ್ತು ತಂಡ ಒಪ್ಪಿಕೊಳ್ಳುವುದಿಲ್ಲ. ಅವರು ಖಾಲಿ ವಂದೇ ಭಾರತ್‌ಗಳು ಮತ್ತು ಬುಲೆಟ್ ರೈಲುಗಳನ್ನು ತೋರಿಸುತ್ತಾ ಜನರನ್ನು ಮೂರ್ಖರನ್ನಾಗಿಸುತ್ತಾರೆ ಎಂದಿದೆ.