Story; ಒಂದು ಮನೆಯಲ್ಲಿ ಅತ್ತೆ ಮತ್ತು ಸೊಸೆ ತುಂಬ ಪ್ರೀತಿಯಿಂದ ಜೀವನ ನಡೆಸುತ್ತಿದ್ದರು. ಒಂದು ದಿನ ಅವರ ಮನೆಯಲ್ಲಿ ನೆಂಟರು ಬಂದರು ಆ ಸಮಯದಲ್ಲಿ ಅತ್ತೆ ನೆಂಟರ್ ಜೊತೆ ಮಾತನಾಡುತ್ತಾ ಹೇಳಿದರು, ಮಗಳು ಸಕ್ಕರೆ ಇದ್ದಂತೆ, ಮತ್ತು ಸೊಸೆ ಉಪ್ಪು ಇದ್ದಂತೆ.
ಈ ರೀತಿ ಮಾತನಾಡುತ್ತಾ ಇರುವಾಗ ಸೊಸೆಯು ಅತ್ತೆಯ ಮಾತುಗಳು ಕಿವಿಗೆ ಬಿದ್ದು ಬಿಟ್ಟಿತು. ಸೊಸೆಯು ಅತ್ತೆಗೆ ತುಂಬಾ ಪ್ರೀತಿ ಮಾಡುತ್ತಿದ್ದಳು, ಅತ್ತೆಗೆ ಯಾವುದೇ ಕೊರತೆಯನ್ನು ಮಾಡುವುದಿಲ್ಲವಾಗಿದ್ದಳು ತುಂಬಾ ಅನೋನ್ಯತೆಯಿಂದ ಇರುತಿದ್ದಳು.
ಆದರೆ ಅತ್ತೆಯ ಈ ಮಾತುಗಳನ್ನು ಕೇಳಿ ಸೊಸೆಯು ತುಂಬಾ ದುಃಖಿಯಾದಳು.. ಮತ್ತು ಸೊಸೆಯ ನಡುವಳಿಕೆಯಲ್ಲೂ ತುಂಬಾ ಬದಲಾವಣೆಗಳು ಆದುದನ್ನು ನೋಡಿದ ಅತ್ತೆ ಸೊಸೆಯನ್ನು ಸ್ವಲ್ಪ ದಿನದ ನಂತರ ಪ್ರೀತಿಯಿಂದ ಕರೆದು ಜೊತೆಯಲ್ಲಿ ಕುಳಿಸಿ ಕೇಳಿದಳು ನೀನು ಈಗ ತುಂಬಾ ಮೌನವಾಗಿ ಇರಲು ಕಾರಣವೇನು?
ಆಗ ಸೊಸೆಯು ಅಳುತ್ತಾ ಅಳುತ್ತಾ ಹೇಳಿದಳು ನೀವು ನಮ್ಮ ನೆಂಟರೊಟ್ಟಿಗೆ ಮಾತನಾಡುವಾಗ ನಾನು ನಿಮ್ಮ ಮಾತುಗಳನ್ನು ಕೇಳಿದೇ, ಅತ್ತೆ ಅವರೊಟ್ಟಿಗೆ ಮಾತನಾಡಿದ ವಿಚಾರದ ಬಗ್ಗೆ ತಿಳಿಸು ಹೇಳಿದಳು.
ಅತ್ತೆ ನಗುತ್ತಾ ಮಗಳೇ ನೀನು ನನ್ನ ಮಾತಿನ ತಿರುಳನ್ನು ಅರಿತಿಲ್ಲ ಕಣೆ, ನೀನು ತಪ್ಪು ಅರ್ಥ ಮಾಡಿ ಕೊಂಡಿರುವೆ, ಆ ಮಾತಿನ ಅರ್ಥ ಏನೆಂದರೆ.. ಮಗಳು ಎಲ್ಲಾ ಸಮಯದಲ್ಲೂ ಸಕ್ಕರೆಯಂತೆ ಸಿಹಿ ಸಿಹಿಯಾಗಿ ಇರುತ್ತಾಳೆ.
ಸೊಸೆ ಉಪ್ಪಿನಂತೆ ಇರುತ್ತಾಳೆ ಅವಳ ಋಣವನ್ನು ತೀರಿಸಲು ಆಗುವುದಿಲ್ಲ, ಮತ್ತೆ ಉಪ್ಪು ಇಲ್ಲವೆಂದರೆ ಯಾವ ತಿನಿಸು ಸಹ ರುಚಿಕರ ಆಗಿರುವುದಿಲ್ಲ. ಮನೆಯ ಗೌರವ ಒಂದು ಸೊಸೆಯಿಂದಲೇ ಬರುತ್ತದೆ.
ಹೌದು ಒಂದು ಹೆಣ್ಣು ತನ್ನ ಗಂಡನ ಮನೆಗೆ ಕಾಲಿಟ್ಟಾಗ ಆ ಮನೆಯವರ ಜೀವನ ಸ್ವರ್ಗ ಮಾಡುವ ಅಥವಾ ನರಕವನ್ನಾಗಿ ಮಾಡುವ ಒಂದು ಶಕ್ತಿ ಹೆಣ್ಣು ಹೊಂದಿದೆ.
ಕೃಪೆ: ಲೇಖಕರ ಹೆಸರು ತಿಳಿದುಬಂದಿಲ್ಲ ( ಸಾಮಾಜಿಕ ಜಾಲತಾಣ)