ಚಿಂಚ್‌ವಾಡ್: ಏಕಾಏಕಿ ಮರದಿಂದ ಧಾರಾಕಾರವಾಗಿ ನೀರು (Water) ಸುರಿದು ಸ್ಥಳೀಯರಲ್ಲಿ ಆಶ್ಚರ್ಯವನ್ನುಂಟು ಮಾಡಿದ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್ ನಗರದ ಪ್ರೇಮ್ಲೋಕ್ ಪಾರ್ಕ್‌ನಲ್ಲಿ ನಡೆದಿದೆ.
ಮರದಿಂದ ನೀರು ಸುರಿಯುತ್ತಿರುವುದು ಸ್ಥಳೀಯರು, ಆ ಮರವನ್ನು ದೈವಿಕ ಶಕ್ತಿ ಎಂದು ನಂಬಿ, ಮರವನ್ನು ಪೂಜಿಸಲು ಪ್ರಾರಂಭಿಸಿದ್ದಾರೆ.
ಈ ಕುರಿತು ಕೆಲವು ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ.. ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮರದ ಕೆಳಗೆ ಪೈಪ್‌ಲೈನ್ ಒಡೆದ ಕಾರಣ ನೀರು ಮರ ಮೇಲಿಂದ ಸೋರಿಕೆಯಾಗಿದೆ ಎಂದು ಸಿಬ್ಬಂದಿ ದೃಢಪಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆ ಕುರಿತು.. ಜನರು ಹೆಚ್ಚು ಹೆಚ್ಚು ಮೂಢನಂಬಿಕೆಯನ್ನು ಹೊಂದುತ್ತಿದ್ದಾರೆ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.