ಬೆಂಗಳೂರು; ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆ ಯಂತೆಯೇ 18ನೇ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.
ಈ ಮೂಲಕ ಕಳೆದ 18 ವರ್ಷಗಳಿಂದ ‘ ಈ ಸಲ ಕಪ್ ನಮ್ಮೆ’ ಎಂದು ಗುನುಗುನಿಸುತ್ತಿದ್ದ ಅಭಿಮಾನಿಗಳ ಕನಸನ್ನು ಸಾಕಾರ ಗೊಳಿಸಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್ ಗಳ ಅಂತರದಲ್ಲಿ ಮಣಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಕಪ್ ಕನಸು ನನಸಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಸಂಭ್ರಮ ತಾಳಲಾರದೆ ಕಣ್ಣೀರಿಟ್ಟರು. ಈ ಗೆಲುವಿಗೆ ಎಬಿ ಡಿವಿಲಯರ್ಸ್, ಕ್ರಿಸ್‌ಗೇಲ್ ಸಾಕ್ಷಿಯಾದರು.
ಗೆಲುವು ಖಚಿತವಾಗುತ್ತಿದ್ದಂತೆ RCB ಅಭಿಮಾನಿಗಳ ತಾಳ್ಮೆಯ ಕಟ್ಟೆ ಹೊಡೆದು ಹೋಗಿದೆ. ನಡು ರಾತ್ರಿಯೇ ರಸ್ತೆಗಿಳಿದು ಪಟಾಹಿ ಕೊಡೆದು, ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಈ ಗೆಲುವಿಗೆ ಸಿಎಂ ಸಿದ್ದರಾಮಯ್ಯ, ಡಿಸಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಆರ್.ಅಶೋಕ, ತಮಿಳುನಾಡಿನ ಎಲ್‌ಕೆ ಸ್ಟಾಲಿನ್, ತೆಲುಗು ಚಿತ್ರ ನಟ ಅಲ್ಲು ಅರವಿಂದ್ ಸೇರಿದಂತೆ ಅನೇಕರು ಶುಭಕೋರಿ ಟ್ವಿಟ್ ಮಾಡಿ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಕಾಲ್ತುಳಿತ
ಆದರೆ ವಿಪರ್ಯಾಸ ಮರು ದಿನ ನಡೆದ ಸಂಭ್ರಮಾಚರಣೆಯಲ್ಲಿ ಪ್ರಮಾದವೊಂದು ಸಂಭವಿಸಿ, 11 ಮಂದಿ RCB ಅಭಿಮಾನಿಗಳು ಸಾವನಪ್ಪಿದ್ದಾರೆ. ಇದರಿಂದಾಗಿ 18 ವರ್ಷದ ಕಾತರದ ಸಂಭ್ರಮ ಕೆಲವೇ ಗಂಟೆಗಳಲ್ಲಿ ಇಲ್ಲವಾಗಿ ಹೋಯ್ತು.
ಹೌದು 18 ವರ್ಷಗಳ ಬಳಿಕ ಕಪ್ ಗೆದ್ದ ಸಂಭ್ರಮ ಇಡೀ ದೇಶವನ್ನೇ ಅವರಿಸಿತು. ಇದಕ್ಕೆ ಆಟಗಾರರನ್ನು ಸನ್ಮಾನಿಸಲು ರಾಜ್ಯ ಕಾಂಗ್ರೆಸ್ ಸರ್ಕಾರದ ವಿಧಾನ ಸೌಧದ ಬಳಿ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಆಟಗಾರರಿಗೆ ಸ್ವಾಗತ ಕೋರಿದರು, ಮತ್ತೊಂದೆಡೆ ಕ್ರಿಕೆಟ್ ಮಂಡಳಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ವಿಜಯೋತ್ಸವ ಆಯೋಜಿಸಿತ್ತು.
ಆದರೆ ಈ ವೇಳೆ RCB ಅಭಿಮಾನಿಗಳ ಸುನಾಮಿಗೆ ಬೆಂಗಳೂರು ಸ್ತಬ್ಧವಾಗಿದ್ದರೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಟಿಕೆಟ್ ಗೊಂದಲ, ಏಕಾಏಕಿ ಗೇಟ್ ತೆರೆದ ಕಾರಣ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನಪ್ಪಿ, 44 ಮಂದಿ ಆರ್‌ಸಿಬಿ ಅಭಿಮಾನಿಗಳು ಗಾಯಗೊಂಡರು.
ಮೈತ್ರಿ ನಾಯಕರ ದಾಳಿ
ಇದರ ಬೆನ್ನಲ್ಲೇ ಶುರುವಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಲ-ದಳ ಮೈತ್ರಿ ನಾಯಕರ ದಾಳಿ, ಸಿಎಂ ರಾಜೀನಾಮೆ ಕೊಡಬೇಡು, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಆರಂಭವಾಗಿ ಕೊನೆಗೆ RCB ಗೆಲುವಿನ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಅನುಮಾನ ವ್ಯಕ್ತಪಡಿಸಿದರೇ, ಇದೀಗ ವಿರೋಧ ಪಕ್ಷದ ನಾಯಕ ಆರ್ ಅಶೋಕ ಆರ್‌ಸಿಬಿ ಅಂದ್ರೆ Real Culprits of Bangalore ಅಂತ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಲೇವಡಿ ಮಾಡಿದ್ದಾರೆಂದು ಖಾಸಗಿ ವಾಹಿನಿ ವರದಿ ಮಾಡಿದೆ.
RCBನ ಬ್ಯಾನ್ ಮಾಡಬೇಕು
ಮತ್ತೊಂದೆಡೆ RCBನ ಬ್ಯಾನ್ ಮಾಡಬೇಕು, ವಿರಾಟ್ ಕೊಯ್ಲಿನ ಬಂಧಿಸಬೇಕು ಎಂಬಂತೆ ಬೇಕಾಬಿಟ್ಟಿ ವರದಿಗಳು ವ್ಯಾಪಕವಾಗಿದ್ದು, ಖುದ್ದು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋ ಸ್ವಾಮಿ ವಿರಾಟ್ ಕೊಹ್ಲಿ ವಿರುದ್ಧ ಮಾತನಾಡಿದರೆ, ಕುಂಭಮೇಳ ಕಾಲ್ತುಳಿತ ಭಕ್ತರ ಉನ್ಮಾದ ಎಂದ ಖಾಸಗಿ ವಾಹಿನಿಯೊಂದು, ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಸರ್ಕಾರದ ಹೊಣೆ ಎಂದು ತೀರ್ಪು ನೀಡಿದೆ.
RCB ಅಭಿಮಾನಿಗಳ ತಾಳ್ಮೆಯ ಕಟ್ಟೆಹೊಡೆಯುತ್ತಿದೆ
ಈ ಎಲ್ಲಾ ಬೆಳವಣಿಗೆ ನಡುವೆ RCB ಅಭಿಮಾನಿಗಳ ತಾಳ್ಮೆಯ ಕಟ್ಟೆಹೊಡೆಯುತ್ತಿದೆ. ಈಗಾಗಲೇ 18 ವರ್ಷದ ಬಳಿಕ ದೊರೆತ ಗೆಲುವನ್ನು ಪೂರ್ಣವಾಗಿ ಸಂಭ್ರಮಿಸಲಾಗದೆ ಅಭಿಮಾನಿಗಳು ಚಡಪಡಿಸುತ್ತಿದ್ದಾರೆ.
ಇದರ ಬೆನ್ನಲ್ಲೆ ಈ ರೀತಿಯ ಮಾತುಗಳು ಅಭಿಮಾನಿಗಳ ತಾಳ್ಮೆ ಕೆಡಿಸಿದ್ದು, ಕುಂಭಮೇಳ ಕಾಲ್ತುಳಿತ, ಪಹಲ್ಗಾಮ್ ದಾಳಿಯನ್ನು ದೊಡ್ಡದು ಮಾಡದ ನ್ಯೂಸ್ ಚಾನಲ್‌ಗಳು ಈ ಘಟನೆಯನ್ನು ದೊಡ್ಡದಾಗಿ ಬಿಂಬಿಸುವ ಮೂಲಕ RCB ವಿರುದ್ಧ ಷಡ್ಯಂತ್ರ ರೂಪಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆರ್ ಸಿ ಬಿ ಬಗ್ಗೆ ಯಾಕ್ ಮಾತಾಡ್ತೀರಿ
ಇದರ ಬೆನ್ನಲ್ಲೇ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಈ ಪೋಸ್ಟ್ ಹಾಕಬೇಕಾದ್ರೆ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) June 9, 2025
ತಮಗೆ ಗೊತ್ತಿರಲಿಲ್ಲವೇ?
ಅಶೋಕಣ್ಣ @RAshokaBJP
ನಿಮ್ಮ ರಾಜಕೀಯ ಏನಾದ್ರು ಮಾಡಿಕೊಳ್ರಿ
ಅದು ಬಿಟ್ಟು
ಆರ್ ಸಿ ಬಿ ಬಗ್ಗೆ ಯಾಕ್ ಮಾತಾಡ್ತೀರಿ.
ಎಲ್ಲಾ ರಾಜ್ಯದವರು ಅವರವರ ತಂಡನಾ ಇಷ್ಟ ಪಡುವಾಗ ನಾವು ನಮ್ಮ ತಂಡದ ಗೆಲುವು ಇಷ್ಟ ಪಟ್ರೆ ತಪ್ಪೇನು?
ನಾವು RCB ಪ್ರೀತಿ ಮಾಡೋದು
ಬೆಂಗಳೂರು ಅನ್ನೋ ಹೆಸರಿಗಾಗಿ. https://t.co/KP4mt5NWn3 pic.twitter.com/m9ZnaeHist
RCB ಕಪ್ ಗೆದ್ದಾಗ ಶುಭಕೋರಿದ್ದ ಆರ್.ಅಶೋಕ್ ಪೋಸ್ಟ್ ಹಂಚಿಕೊಂಡಿರುವ ಅವರು, ಈ ಪೋಸ್ಟ್ ಹಾಕಬೇಕಾದ್ರೆ ತಮಗೆ ಗೊತ್ತಿರಲಿಲ್ಲವೇ? ಅಶೋಕಣ್ಣ, ನಿಮ್ಮ ರಾಜಕೀಯ ಏನಾದ್ರು ಮಾಡಿಕೊಳ್ರಿ.. ಅದು ಬಿಟ್ಟು
ಆರ್ ಸಿ ಬಿ ಬಗ್ಗೆ ಯಾಕ್ ಮಾತಾಡ್ತೀರಿ.
ಎಲ್ಲಾ ರಾಜ್ಯದವರು ಅವರವರ ತಂಡನಾ ಇಷ್ಟ ಪಡುವಾಗ ನಾವು ನಮ್ಮ ತಂಡದ ಗೆಲುವು ಇಷ್ಟ ಪಟ್ರೆ ತಪ್ಪೇನು? ನಾವು RCB ಪ್ರೀತಿ ಮಾಡೋದು ಬೆಂಗಳೂರು ಅನ್ನೋ ಹೆಸರಿಗಾಗಿ ಎಂದು ತಿರುಗೇಟು ನೀಡಿದ್ದಾರೆ.