ಚಿಕ್ಕಬಳ್ಳಾಪುರ: ಕರ್ಕಶ ಶಬ್ದದೊಂದಿಗೆ ವಾಹನಗಳನ್ನ ಓಡಿಸಿ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದ ನೂರಾರು ವಾಹನಗಳನ್ನ ಪೊಲೀಸರು (Police) ವಶಕ್ಕೆ ಪಡೆದು ಅವುಗಳ ಸೈಲೆನ್ಸ್ ರಗಳನ್ನ ಪ್ರತ್ಯೇಕಗೊಳಿಸಿ ನಾಶಪಡಿಸಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಚಿಕ್ಕಬಳ್ಳಾಪುರ ಸಂಚಾರಿ ಠಾಣೆಯ ಪಿಎಸ್.ಐ. ಮಂಜುಳಾ ನೇತೃತ್ವದಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಬರೋಬ್ಬರಿ 110 ವಾಹನಗಳ ಸೈಲೆನ್ಸರ್ ಗಳನ್ನ ಜಪ್ತಿ ಮಾಡಿ ಅವುಗಳನ್ನ ರಸ್ತೆ ಮೇಲೆ ರೋಡ್ ರೋಲರ್ ಗಳ ಹತ್ತಿಸಿ ನಾಶಗೊಳಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಆಗಮಿಸಿ ಕಳೆದೊಂದು ತಿಂಗಳಲ್ಲಿ ಜಫ್ತಿ ಮಾಡಿದ ಸೈಲೆನ್ಸರ್ ಗಳನ್ನ ನಾಶಗೊಳಿಸಿದ್ದನ್ನ ವೀಕ್ಷಿಸಿ, ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.