
ಫಿರೋಜಾಬಾದ್: ನಡು ರಸ್ತೆಯಲ್ಲಿ ಜೋಡಿಗಳು ಬೈಕ್ ಸವಾರಿಯಲ್ಲಿಯೇ ಅಪಾಯಕಾರಿಯಾಗಿ ಪ್ರಣಯದಲ್ಲಿ ತೊಡಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ವೈರಲ್ (Video Viral) ಆಗುತ್ತಿದ್ದು, ಮೊನ್ನೆಯಷ್ಟೇ ಯುವನೋರ್ವ ಭಾರಿ ಮೊತ್ತದ ದಂಡವನ್ನು ಕಟ್ಟಿದ್ದಾನೆ.
ಆದಾಗ್ಯೂ ಜೋಡಿಗಳ ಹುಚ್ಚಾಟ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೋಡಿಯೋಂದು ಬೈಕ್ ಸವಾರಿ ವೇಳೆ ಪ್ರಣಯದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ.
ಫಿರೋಜಾಬಾದ್ ಜಿಲ್ಲೆಯಲ್ಲಿ, ರಾತ್ರಿ 10 ಗಂಟೆಗೆ, ಚಲಿಸುತ್ತಿರುವ ಬೈಕ್‌ನಲ್ಲಿ ಒಬ್ಬ ಹುಡುಗ ಮತ್ತು ಹುಡುಗಿ ಕುಳಿತಿರುವುದು ಕಂಡುಬಂದಿದೆ. ಹುಡುಗಿ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಮಲಗಿದ್ದರೆ, ಯುವಕ ಬೈಕು ಓಡಿಸುತ್ತಿದ್ದಾನೆ.
ಈ ವಿಡಿಯೋವನ್ನು ದಾರಿಹೋಕನೊಬ್ಬ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ನಮ್ಮಿಷ್ಟ, ನಿನಗ್ಯಾಕೆ ನಡಿಯಲೇ ಎಂಬಂತೆ ಯುವತಿ ಬ್ರಾಜ್ ಭಾಷೆಯಲ್ಲಿ ದಾರಿಹೋಕನಿಗೆ ಆವಾಜ್ ಹಾಕಿದ್ದಾರೆ ಎನ್ನುವ ಸಂಭಾಷಣೆ ಕೇಳಬಹುದಾಗಿದೆ.

