ದೊಡ್ಡಬಳ್ಳಾಪುರ; ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಶಾಲಾ ಸಂಸತ್ ಚುನಾವಣೆ ನಡೆಸಲಾಗಿದ್ದು, ಇದೀಗ ಫಲಿತಾಂಶ ಪ್ರಕಟವಾಗಿದೆ.
ಸಂಸ್ಥೆಯ ಅಧ್ಯಕ್ಷರಾದ ಎ.ಸುಬ್ರಮಣ್ಯ ಅವರು ಮೊಹರು ಮಾಡಿದ ನಾಮ ಮತಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಚುನಾವಣಾ ಪ್ರಕ್ರಿಯೆಗೆ ಅಧಿಕೃತ ಚಾಲನೆಯನ್ನು ನೀಡಿದರು. ಅಲ್ಲದೆ ಪ್ರಥಮ ಮತವನ್ನು ಚಲಾಯಿಸಿದರು.
ಬಳಿಕ ಮಾತನಾಡಿದ ಅವರು, ಭಾರತ ಒಂದು ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಯೂ ಸಂವಿಧಾನಬದ್ಧವಾಗಿ ಹಾಗೂ ಅದು ನೀಡಿರುವ ಹಕ್ಕುಗಳ ಅನ್ವಯ ಜೀವಿಸಬೇಕಾಗುತ್ತದೆ.
ಇಂತಹ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಯೂ ತಾನು ಚುನಾವಣೆ ನಿಲ್ಲುವ ಅವಕಾಶವನ್ನು ಪಡೆದಿರುತ್ತಾನೆ. ಇಂತಹ ವ್ಯವಸ್ಥೆಯಲ್ಲಿ ಚುನಾವಣೆ ಎಂದರೇನು? ಚುನಾವಣಾ ಚಿಹ್ನೆ ಎಂದರೇನು? ನಾಮ ಪತ್ರ ಸಲ್ಲಿಸುವ, ಹಿಂಪಡೆಯುವ, ಮತದಾನ ಮಾಡುವ ಹಾಗೂ ಮತ ಎಣಿಕೆ ಹೇಗೆ ಎನ್ನುವ ಹಲವು ಪ್ರಶ್ನೆಗಳಿವೆ.
ಈ ಹಿನ್ನೆಲೆಯಲ್ಲಿ ಶಾಲಾ ಹಂತದಲ್ಲಿ ಚುನವಣೆಯ ಮೂಲಕ ವಿದ್ಯಾರ್ಥಿ ಸಂಘದ ನಾಯಕ/ನಾಯಕಿಯನ್ನು, ವಿವಿಧ ಗುಂಪಿನ ನಾಯಕರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಿದಾಗ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಒಂದು ನಾಯಕತ್ವ ಗುಣ, ಹಾಗೂ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಜೀವನದಲ್ಲಿ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣಗಳನ್ನು ಬೆಳೆಸಿಕೊಳ್ಳುತ್ತಾನೆ. ಅಂತಹ ವಿದ್ಯಾರ್ಥಿ ಚುನಾವಣೆಯನ್ನು ಇಂದು ಶಾಲೆಯಲ್ಲಿ ನಡೆಸಲಾಗಿದೆ ಎಂದರು.
ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಮತ ಚಲಾಯಿಸಿ 2025-26 ನೇ ಸಾಲಿನ ವಿವಿಧ ಗುಂಪಿನ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದರು.
ಶಾಲೆಯ ಶಿಕ್ಷಕ ಬಳಗ ಚುನವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ, ವಿದ್ಯಾರ್ಥಿ ಚುನಾವಣೆಯನ್ನು ಯಶಸ್ವಿಗೊಳಿಸಿದರು.
ಆಯ್ಕೆಯಾದ ಮಕ್ಕಳು ವಿವಿಧ ಜವಾಬ್ದಾರಿಗಳನ್ನು ಹೊಂದುವುದರಿಂದ ವರ್ಷವಿಡೀ ಶಾಲೆಯ ನಿರ್ವಹಣೆಯಲ್ಲಿ ಶಿಕ್ಷಕರಿಗೆ ಸಹಾಯ ಹಸ್ತ ನೀಡುತ್ತಾರೆ.
ಈ ವೇಳೆ ಶಾಲೆಯ ಉಪಾಧ್ಯಕ್ಷ ಸ್ವರೂಪ್ ಎಸ್., ಪ್ರಾಂಶುಪಾಲರಾದ ರೆಮ್ಯ ಬಿ. ವಿ. ಒಳಗೊಂಡಂತೆ ಎಲ್ಲಾ ಶಿಕ್ಷಕ ಸಿಬ್ಬಂದಿ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಮತ ಚಲಾಯಿಸಿದರು.
ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ನಾಯಕರ ವಿವರ
ಶಾಲಾ ನಾಯಕ: ಭುವನ್.ಇ.. (Class 9)
ಶಾಲಾ ನಾಯಕಿ: ಎಸ್. ರೋಶಿನಿ. (Class 9)
ಶಾಲಾ ಉಪನಾಯಕ: ಎಂ.ಆರ್.ಚಿರಂತ್ ನಾಗ್ ಗೌಡ (Class 8)
ಶಾಲಾ ಉಪನಾಯಕಿ: ಹಂಸಿಕಾ .ಸಿ.ಎಮ್. (Class 9)
ಸಾಂಸ್ಕೃತಿಕ ಕಾರ್ಯದರ್ಶಿ; ಬಾಲಕ – ಗೌರವ್ (Class 8)
ಸಾಂಸ್ಕೃತಿಕ ಕಾರ್ಯದರ್ಶಿ: ಬಾಲಕಿ – ದೇವಾನಂದ. ಆರ್. (Class 8)
ಕ್ರೀಡಾ ಕಾರ್ಯದರ್ಶಿ: ಬಾಲಕ – ಚಂದನ್ ಆರ್.. (Class 8)
ಕ್ರೀಡಾ ಕಾರ್ಯದರ್ಶಿ: ಬಾಲಕಿ – ಹರ್ಷಿತಾ.ಎಂ. (Class 9)