ದೊಡ್ಡಬಳ್ಳಾಪುರ: ಕ್ಷೇತ್ರಶಿಕ್ಷಣಾಧಿಕಾರಿ (BEO) ಸೈಯಿದಾ ಅನೀಸ್ ಅವರ ದಿಢೀರ್ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನೂತನ ಬಿಇಒ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅಧಿಸೂಚನೆ ಹೊರಡಿಸಿದ್ದಾರೆ.
ಇದರನ್ವಯ ದೊಡ್ಡಬಳ್ಳಾಪುರ ನೂತನ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಕೊಪ್ಪಳ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಕರಯ್ಯ ಟಿ.ಎಸ್. ಅವರನ್ನು ದೊಡ್ಡಬಳ್ಳಾಪುರ ಬಿಇಒ ಆಗಿ ನೇಮಕ ಮಾಡಲಾಗಿದೆ.
ಇಂದು ಒಟ್ಟು 12 ಮಂದಿ ಬಿಇಒಗಳನ್ನು ವಿವಿಧ ತಾಲೂಕುಗಳಿಗೆ ವರ್ಗಾವಣೆ ಮಾಡಲಾಗಿದೆ.