ದೊಡ್ಡಬಳ್ಳಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ಮಸೂದೆಯನ್ನು (Waqf Bill) ವಿರೋಧಿಸಿ ದೊಡ್ಡಬಳ್ಳಾಪುರದಲ್ಲಿಂದು ಮುಸ್ಲಿಂ ಸಮುದಾಯದ (Muslim community) ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ಇಂದು (ಜು.04) ಶುಕ್ರವಾರದ ನಮಾಜಿನ ಬಳಿಕ ಕೊಂಗಾಡಿಯಪ್ಪ ರಸ್ತೆಯಲ್ಲಿ ಮೆಕ್ಕ ಮಸೀದಿಯ ಮುಂಭಾಗದಿಂದ ಬೆಸ್ಕಾಂ ಕಚೇರಿಯ ವರೆಗೆ ಮಾನವ ಸರಪಳಿ ನಡೆಸುವ ಮೂಲಕ ಮೌನ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಪ್ರತಿಭಟನಾ ನಿರತರು ವಕ್ಫ್ ಕಾಯ್ದೆ ವಿರೋಧಿಸುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.
ಈ ವೇಳೆ ಮುಸ್ಲಿಮ್ ಸಮುದಾಯದ ಮುಖಂಡರಾದ ಶ್ರೀನಗರ ಬಶೀರ್, ಇರ್ಫಾನ್ ಅಹಮದ್ ಶರೀಫ್, ಫಯಾಜ್ ಪಾಷಾ. ಮುಶೀರ್, , ಸಲೀಂ, ಅಬ್ದುಲ್ ಕಪೂರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.