ತಿರುಪತಿ: ತಿರುಮಲದ ವೆಂಕಟೇಶ್ವರ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.
ಭಕ್ತರ ಸಂಖ್ಯೆ (78,730) ಸಾಧಾರಣ ಪ್ರಮಾಣದಲ್ಲಿದ್ದರೂ ಒಂದೇ ದಿನದಲ್ಲಿ 5.3 ಕೋಟಿ ರೂ.ಗಳ ಸಂಗ್ರಹವಾಗಿದೆ. ಇದು ಕಳೆದೊಂದು ವರ್ಷದಲ್ಲಿ ತಿರುಪತಿ ದೇವಸ್ಥಾನಕ್ಕೆ ಬಂದ ಅತಿ ಹೆಚ್ಚು ಮೊತ್ತದ ಕಾಣಿಕೆಯಾಗಿದೆ.
ಹಬ್ಬ ಹರಿದಿನಗಳು ಮತ್ತು ಬೇಸಿಗೆ ಶಾಲೆ ರಜೆ ಅವಧಿ ಯಲ್ಲಿ ಆಗಮಿಸುವುದ ಕ್ಕಿಂತಲೂ ಸೋಮವಾರ ಕಡಿಮೆ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು. ಆದರೆ, ಭಕ್ತರು ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿಯಿಂದ ದೊಡ್ಡ ಮೊತ್ತದ ಕಾಣಿಕೆ ಸಲ್ಲಿಸಿದ್ದಾರೆ.
ಈ ಮೊದಲು 2023ರ ಜ.2ರಂದು 7.68 ಕೋಟಿ ರೂ. ಕಾಣಿಕೆ ಒಂದೇ ದಿನದಲ್ಲಿ ಸಂದಾಯವಾಗಿತ್ತು. ಈ ಹಿಂದೆಯೂ ಹಲವು ಬಾರಿ 6 ಕೋಟಿ ರೂ.ಗೂ ಅಧಿಕ ಕಾಣಿಕೆ ಸಂಗ್ರಹವಾದ ನಿದರ್ಶನಗಳಿವೆ.
ವಿಶ್ವದಲ್ಲೆ ಸಿರಿವಂತ ದೇವಸ್ಥಾನ ಎನಿಸಿಕೊಂಡಿರುವ ತಿರುಪತಿಯ ತಿಮ್ಮಪ್ಪನ್ನ ಸನ್ನಿದಾನದಲ್ಲಿ ತಿಂಗಳಿಗೆ ಕನಿಷ್ಠ 100 ಕೋಟಿ ರೂ. ಗಳಿಂದ ಗರಿಷ್ಠ 140 ಕೋಟಿ ರೂ.ವರೆಗೂ ಹುಂಡಿ ಹಣ ಸಂಗ್ರಹವಾಗುತ್ತಿದೆ. ಅಲ್ಲದೇ, ಮಾಸಿಕ 100 ಕಿಲೊದಿಂದ 140 ಕಿಲೊಗಳಷ್ಟು ಚಿನ್ನದ ಕಾಣಿಕೆಯೂ ಸಲ್ಲುತ್ತಿದೆ.
ವಿವಿಧ ಬ್ಯಾಂಕ್‌ಗಳಲ್ಲಿ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಟ್ರಸ್ಟ್‌ನ ಹೆಸರಲ್ಲಿನ ಸ್ಥಿರ ಠೇವಣಿಗಳ ಮೊತ್ತವೇ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ್ದಾಗಿದೆ!