ಮುಂಬೈ: ಮರಾಠಾ ನಾಡಿನ ಬಾಳಾ ಠಾಕ್ರೆ ಕಾಲದಲ್ಲಿದ್ದ ಮೂಲ ಶಿವಸೇನೆಯ (ShivSena) ಹಳೆಯ ಯುವವ್ಯಾಘ್ರಗಳು ಈಗ ಮತ್ತೆ ಒಗ್ಗೂಡಿವೆ.
ಮರಾಠಾ ಅಸ್ಮಿತೆಯ ನೆಲದಲ್ಲಿ ಶಿವಸೇನೆಯ ಆರಂಭದ ದಿನಗಳ ನೆನಪು ಮರುಕಳಿಸಿದೆ. ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ 20 ವರ್ಷಗಳ ನಂತರ ಮತ್ತೆ ಒಂದುಗೂಡಿದ್ದು, ಶನಿವಾರ ಒಟ್ಟಿಗೇ ವೇದಿಕೆಯೇರಿ ಒಗ್ಗಟ್ಟು ಪ್ರದರ್ಶಿಸಿದರು.
महाराष्ट्र ज्या क्षणाची आतुरतेने वाट बघत होता, तो क्षण आज साजरा झाला…
— ShivSena – शिवसेना Uddhav Balasaheb Thackeray (@ShivSenaUBT_) July 5, 2025
तब्बल दोन दशकांनंतर ‘ठाकरे बंधूची’ मराठीसाठी, महाराष्ट्रासाठी, मराठी माणसासाठी गळाभेट झाली आणि पुन्हा एकदा बुलंद झाला ‘आवाज मराठीचा’!
मराठी माणसाची एकजूट अखंड राहो!
मराठी भाषिक अस्मितेचा विजय असो! pic.twitter.com/7GajdJVqJb
ಮಹಾರಾಷ್ಟ್ರ ಶಾಲೆಗಳಲ್ಲಿ 1ನೇ ತರಗತಿಯಿಂದ 3ನೇ ಭಾಷೆಯಾಗಿ ಹಿಂದಿ ಪರಿಚಯಿಸುವ ಯೋಜನೆಯನ್ನು ಸರಕಾರ ರದ್ದುಗೊಳಿಸಿದ ಹಿನ್ನೆಲೆ ಆಯೋಜಿಸಲಾಗಿದ್ದ ‘ಮರಾಠಿ ವಿಜಯೋತ್ಸವ ರ್ಯಾಲಿ’ಯ ವೇದಿಕೆಯಲ್ಲಿ ಇಬ್ಬರು ಸೋದರ ಸಂಬಂಧಿಗಳು ಅಕ್ಕಪಕ್ಕದ ಆಸನದಲ್ಲಿ ಆಸೀನರಾಗಿದರು.
2 ದಶಕಗಳ ಹಿಂದೆ ದೂರವಾದ ನಮ್ಮನ್ನು ಮತ್ತೆ ಜತೆಗೂಡಿಸಿದ ಕೀರ್ತಿ ಸಿಎಂ ಫಡ್ನವೀಸ್‌ಗೆ ಸಲ್ಲಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ದ ವ್ಯಂಗ್ಯದ ಬಾಣ ಬಿಟ್ಟರು.
20 ವರ್ಷ ಬಳಿಕ ಉದ್ದವ್ ಮತ್ತು ರಾಜ್ ಒಟ್ಟಾಗಿದ್ದಾರೆ. ಬಾಳಾ ಸಾಹೇಬ್ ಠಾಕ್ರೆ ಮಾಡಲಾಗದ್ದನ್ನು ಫಡ್ನವಿಸ್ ಮಾಡಿದ್ದಾರೆ ಎಂದರು. ‘ಈಗಿನ ಮರು ಮಿಲನ ಸಾಂಕೇತಿಕವಲ್ಲ. ಅದಕ್ಕಿಂತಲೂ ಹೆಚ್ಚಿನದಾಗಿದೆ. ನಾವು ಒಟ್ಟಾಗಿಯೇ ಇರುತ್ತೇವೆ’ ಎನ್ನುವ ಮೂಲಕ ಶಿವಸೇನೆ(ಯುಬಿಟಿ) ನಾಯಕ ಉದ್ಧವ್ ಠಾಕ್ರೆ ರಾಜಕೀಯ ಮೈತ್ರಿಯ ಸುಳಿವು ನೀಡಿದರು.
‘ಶಿವಸೇನೆಯನ್ನು ಬಿಜೆಪಿ ಬಳಸಿಕೊಂಡು ಬಹಳ ಪ್ರಯೋಜನ ಪಡೆದುಕೊಂಡಿದೆ. ಬಾಳಾ ಸಾಹೇಬ್ ಬೆಂಬಲ ನಿಮಗಿಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿತ್ತೆ? ರಾಜ್ಯದಲ್ಲಿ ನಿಮ್ಮ ಬಗ್ಗೆ ಯಾರಿಗೆ ತಿಳಿದಿತ್ತು. ನಮಗೆ ಹಿಂದುತ್ವದ ಪಾಠ ಹೇಳಲು ಬಿಜೆಪಿಗೆಲ್ಲಿದೆ ಅಧಿಕಾರ? ಎಂದು ಉದ್ದವ್ ವಾಗ್ದಾಳಿ ನಡೆಸಿದರು.
ಶಿವಸೇನೆ (ಯುಬಿಟಿ) ಮತ್ತು ಎಂಎನ್ಎಎಸ್ ಬೆಂಬಲಿಗರು ಕ್ಯಾಲಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಎರಡೂ ಪಕ್ಷಗಳ ಬೆಂಬಲಿಗರು ಮುಖ್ಯದ್ವಾರ ಮುರಿದು ಸಭಾಂಗಣದತ್ತ ಒಮ್ಮೆಲೇ ನುಗ್ಗಿದಾಗ ಗೊಂದಲ ಉಂಟಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ