ವಾಷಿಂಗ್ಟನ್: ಪ್ರಸಿದ್ಧ ಉದ್ಯಮಿ, ಟ್ವಿಟರ್ (X) ಮಾಲೀಕ ಇಲಾನ್ ಮಸ್ಕ್ (Elon musk) ಅವರು ‘ಅಮೆರಿಕ ಪಾರ್ಟಿ’ (America Party) ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಮೂಲಕ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ (Donald Trump) ಶಾಕ್ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಡೊನಾಲ್ಡ್ ಟ್ರಂಪ್ ಅವರಿಗೆ ಬೆನ್ನುಗೆ ನಿಂತಿದ್ದ ಇಲಾನ್ ಮಸ್ಕ್, ಇತ್ತೀಚೆಗೆ ಟ್ರಂಪ್ ಅವರೊಂದಿಗೆ ಭಿನ್ನಾಭಿಪ್ರಾಯದ ಬೆನ್ನಲ್ಲೇ ಅಮೆರಿಕದ ಜನರಿಗಾಗಿ ಹೊಸ ರಾಜಕೀಯ ಪಕ್ಷ ರಚಿಸುವುದಾಗಿ ಮಸ್ಕ್ ಘೋಷಿಸಿದ್ದಾರೆ
ಈ ಕುರಿತು ತಮ್ಮದೇ ಒಡೆತದನಲ್ಲಿರುವ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ಹಂಚಿರುವ ಮಸ್ಕ್, ‘ನಿಮ್ಮ ಸ್ವಾತಂತ್ರ್ಯವನ್ನು ಹಿಂದಿರುಗಿಸಲು ಅಮೆರಿಕ ಪಕ್ಷವನ್ನು ಸ್ಥಾಪಿಸಲಾಗಿದೆ’ ಎಂದು ಘೊಷಿಸಿದ್ದಾರೆ.
ಈ ಮೊದಲು ಹೊಸ ಪಕ್ಷ ಸ್ಥಾಪನೆಗೆ ಸಂಬಂಧಿಸಿದಂತೆ ಮಸ್ಕ್, ಎಕ್ಸ್ ಪೋಲ್ ಮೂಲಕ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ್ದರು.