ಬೆಂಗಳೂರು: ಜೆಡಿಎಸ್ ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸುತ್ತಿರುವ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರಿಗೆ ಹೋದಲೆಲ್ಲಾ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಜನರೊಂದಿಗೆ ಜನತಾದಳ ಎಂಬ ಹೆಸರಿನಲ್ಲಿ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಅವರು ನಾಳೆ ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಹಾಗೂ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನ ಸಭೆಯನ್ನ ನಡೆಸಲಿದ್ದಾರೆ.
ನಾಳೆಯಿಂದ ಒಟ್ಟು 5 ದಿನಗಳ ಕಾಲ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸಂಚಾರ ನಡೆಸಲಿದ್ದಾರೆ. ಮೊದಲು ಗೌರಿಬಿದನೂರುನಲ್ಲಿ ನದಿದಡ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ನಂತರ ಚಿಕ್ಕಬಳ್ಳಾಪುರದ ಶ್ರೀ ದೇವಿ ಪ್ಯಾಲೇಸ್ ನಲ್ಲಿ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ.
ಪಕ್ಷ ಸಂಘಟನೆಗಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಪ್ರವಾಸ ಹಾಗೂ ʼಮಿಸ್ ಕಾಲ್ʼ ಸದಸ್ಯತ್ವ ಈಗಾಗಲೇ ತುಮಕೂರು, ರಾಮನಗರ, ಬೀದರ್, ರಾಯಚೂರು, ಕಲಬುರಗಿ, ಯಾದಗಿರಿಯಲ್ಲಿ ಜನರೊಂದಿಗೆ ಜನತಾದಳ ಪ್ರವಾಸ ಯಶಸ್ವಿಯಾಗಿ ನಡೆದಿದೆ.
ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸ ಹಾಗೂ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ಪ್ರವಾಸಕ್ಕೆ ಮತ್ತಷ್ಟು ಹುರುಪು ತಂದಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಕನಿಷ್ಠ ಐವತ್ತು ಲಕ್ಷ ಜನ ಸದಸ್ಯತ್ವದ ಗುರಿ ಇಟ್ಟುಕೊಂಡು ರಾಜ್ಯ ಪ್ರವಾಸ ಆರಂಭಿಸಿರುವ ಅವರು ನಾಳೆಯಿಂದ ಬಹುತೇಕ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡಲಿದ್ದಾರೆ, ನಿಮ್ಮ ಜೊತೆ ನಿರಂತರವಾಗಿ ಹೆಜ್ಜೆ ಹಾಕಲಿದ್ದಾರೆ. ಎಲ್ಲಾ ಜಿಲ್ಲೆಯ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷಕ್ಕೆ ಬಲ ತುಂಬುವಂತ ಕೆಲಸ ಮಾಡಲಿದ್ದಾರೆ.
ಕಳೆದ 26 ವರ್ಷಗಳಿಂದ ಈ ಪಕ್ಷದ ಮೇಲಿಟ್ಟಿರುವ ಅಭಿಮಾನ, ಬದ್ಧತೆಯಿಂದ ಜೆಡಿಎಸ್ ಸುಭದ್ರವಾಗಿದೆ. 2028ಕ್ಕೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ನಿಮ್ಮೆಲ್ಲರ ದುಡಿಮೆಗೆ ತಕ್ಕಂತೆ ಅಧಿಕಾರ ಕೊಡಿಸಿದಾಗ ಮಾತ್ರ ನಿಮ್ಮೆಲ್ಲರ ಋಣ ತೀರಿಸಿದಂತಾಗುತ್ತದೆ.
ನನ್ನ ರಾಜ್ಯ ಪ್ರವಾಸ ಕಾರ್ಯಕರ್ತರೊಂದಿಗೆ ಸಂಬಂಧ, ಬಾಂಧವ್ಯ, ವಿಶ್ವಾಸ ಬೆಳೆಸಿಕೊಳ್ಳಬೇಕು. ಇಂತಹ ಪ್ರವಾಸ ಮಾಡುತ್ತಿರುವುದು ನನ್ನ ಭಾಗ್ಯ, ಅವರೊಂದಿಗೆ ಉತ್ತಮ ಸಂಬಂಧ, ಸ್ನೇಹ ಬೆಳೆಸಿಕೊಳ್ಳಬೇಕು. ಅವರ ವಿಶ್ವಾಸ ಗಳಿಸಬೇಕು. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು. ಅವರ ಜತೆ ನಾನಿದ್ದೀನಿ ಎಂದು ಧೈರ್ಯ ತುಂಬಲು ಈ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ ಹೇಳಿದರು.
ದೇವೇಗೌಡರು ಮತ್ತು ಕುಮಾರಣ್ಣನವರಿಗೆ ನೀವು ತೋರಿಸಿದಷ್ಟು ಪ್ರೀತಿಯನ್ನೇ ಪ್ರವಾಸ ಹಮ್ಮಿಕೊಂಡ ಕಡೆಯಲ್ಲ ನನಗೂ ತೋರಿಸಿದ್ದೀರಿ. ನನ್ನ ಕೊನೆಯ ಉಸಿರು ಇರುವವರೆಗೂ ಪಕ್ಷವನ್ನು ಕಟ್ಟಲು ನನ್ನ ಹೋರಾಟ ನಿರಂತರವಾಗಿರುತ್ತದೆ. ನಾವೆಲ್ಲರೂ ಜೊತೆಯಾಗಿ ಹೆಜ್ಜೆ ಹಾಕೋಣ. ಬಲಿಷ್ಠವಾಗಿ ಪಕ್ಷ ಕಟ್ಟೋಣ, 2018ಕ್ಕೆ ಮತ್ತೆ ಕುಮಾರಣ್ಣನವರನ್ನ ಮುಖ್ಯಮಂತ್ರಿ ಮಾಡೋಣ ಎಂದರು.