ಬೆಂಗಳೂರು: ಇತ್ತೀಚಿಗೆ ನಿಧನರಾದ ನಟಿ ಸರೋಜಾದೇವಿ ಅಂತಿಮ ದರ್ಶನಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಇದನ್ನು ಮೆಟಾ (Meta) ತರ್ಜುಮೆ ಮಾಡುವ ವೇಳೆ ಎಡವಟ್ಟು ಮಾಡಿದೆ.
ಟ್ರಾನ್ಸೆಷನ್ ಆಗುವ ವೇಳೆ “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಿಧನರಾದ ಬಹುಭಾಷಾ ತಾರೆ, ಹಿರಿಯ ನಟಿ ಬಿ.ಸರೋಜಾದೇವಿ ಅವರು ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು ಎಂದು ಪೋಸ್ಟ್ ನಲ್ಲಿ ತರ್ಜುಮೆ ಆಗಿದೆ
ಇಡೀ ಕ್ಯಾಪ್ಟನ್ ಪೂರ್ತಿ ತಪ್ಪಾಗಿದ್ದು ಪೋಸ್ಟ್ ಓದಿದ ಪ್ರತಿಯೊಬ್ಬರು ಕಕ್ಕಾಬಿಕ್ಕಿ ಆಗಿದ್ದಾರೆ. ಮೆಟಾ ಸಂಸ್ಥೆಯ ತಂತ್ರಜ್ಞಾನ ಯಡವಟ್ಟು ಸಂಬಂಧ ಕಮೆಂಟ್ಸ್ ಮಾಡಿ ನೆಟ್ಟಿಗರು ಕಿಚಾಯಿಸಿದ್ದಾರೆ.
ಮೊದಲೇ ಕನ್ನಡ ಪ್ರೇಮಿಯಾದ ಸಿಎಂ ಸಿದ್ದರಾಮಯ್ಯ, ಇದರಿಂದ ಕೆರಳಿದ್ದು, ಮೇಟಾಗೆ ಪತ್ರಬರೆದು ಕ್ಲಾಸ್ ತೆಗೆದುಕೊಂಡಿದ್ದಾರೆ.
@Meta ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡ ವಿಷಯದ ದೋಷಪೂರಿತ ಸ್ವಯಂ-ಅನುವಾದವು ಸತ್ಯಗಳನ್ನು ವಿರೂಪಗೊಳಿಸುತ್ತಿದೆ ಮತ್ತು ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ. ಅಧಿಕೃತ ಸಂವಹನಗಳಿಗೆ ಬಂದಾಗ ಇದು ವಿಶೇಷವಾಗಿ ಅಪಾಯಕಾರಿ.
ನನ್ನ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರು ತಕ್ಷಣದ ತಿದ್ದುಪಡಿಯನ್ನು ಒತ್ತಾಯಿಸಿ ಮೆಟಾಗೆ ಔಪಚಾರಿಕವಾಗಿ ಪತ್ರ ಬರೆದಿದ್ದಾರೆ.
Faulty auto-translation of Kannada content on @Meta platforms is distorting facts & misleading users. This is especially dangerous when it comes to official communications.
— Siddaramaiah (@siddaramaiah) July 17, 2025
My Media Advisor Shri K V Prabhakar has formally written to Meta urging immediate correction.
Social… pic.twitter.com/tJBp38wcHr
ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ತೋರಿಸಿರುವ ಅನುವಾದಗಳು ಹೆಚ್ಚಾಗಿ ತಪ್ಪಾಗಿರುತ್ತವೆ ಎಂದು ನಾಗರಿಕರು ತಿಳಿದಿರಬೇಕೆಂದು ನಾನು ಸಲಹೆ ನೀಡುತ್ತೇನೆ.
ತಂತ್ರಜ್ಞಾನ ದೈತ್ಯರ ಇಂತಹ ನಿರ್ಲಕ್ಷ್ಯವು ಸಾರ್ವಜನಿಕ ತಿಳುವಳಿಕೆ ಮತ್ತು ನಂಬಿಕೆಗೆ ಹಾನಿ ಮಾಡುತ್ತದೆ ಎಂದು ಸಿಎಂ ಕಿಡಿಕಾರಿದ್ದಾರೆ.

