ಕೆಲವೊಂದು ಅಯೋಗ್ಯ ಅಪ್ಪಾಜಿ ಕಂಪನಿಯಿಂದ ಕರ್ನಾಟಕ ಬಿಜೆಪಿ ಹಾಳು: ಯತ್ನಾಳ್

Appaji's company is ruining Karnataka BJP: Yatnal

ಕೊಪ್ಪಳ: ಎತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ, ಪೂಜ್ಯ ತಂದೆಯವರಿಗೆ ಅವರ ಮಗನೆ ಮುದ್ದು. ಆದರೆ ರಾಜ್ಯದ ಜನ ಅವನ ನಾಯಕತ್ವ ತಿರಸ್ಕರಿಸಿದ್ದಾರೆ‌. ಅವನ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಬಿಜೆಪಿಗೆ 30 ಸೀಟ್ ಸಿಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patila Yatnal) ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲೆ ಇದ್ದೀನಿ, ಬಿಟ್ಟು ಹೋಗಿಲ್ಲ, ಯಡಿಯೂರಪ್ಪ, ಅವರ ಮಗನ ಭವಿಷ್ಯಕ್ಕಾಗಿ ನಮ್ಮನ್ನ ಪಕ್ಷದಿಂದ ಹೊರಗಾಕಿದ್ದಾರೆ.

ಯಡಿಯೂರಪ್ಪಗೆ ತಾನಿರಬೇಕು, ತಾ ಸತ್ತಮೇಲೆ ಅವರ ಮಗ ಇರಬೇಕು, ಅವ ಸತ್ತ ಮೇಲೆ ಅವರ ಮೊಮ್ಮಗ ಇರಬೇಕು. ಮಿಕ್ಕಿದವರೆಲ್ಲ ಅವರ ಮನೆ ಕಸಗುಡಿಸಬೇಕು. ನಮಗೇನ್ ಕೆಲಸ ಇಲ್ಲವೇನು ಎಂದು ಪ್ರಶ್ನಿಸಿದರು.

ಕೆಲವೊಂದು ಅಪ್ಪಾಜಿ ಎನ್ನುವ ಅಯೋಗ್ಯ ನನ್ ಮಕ್ಕಳು ರಾಜಕಾರಣದಲ್ಲಿದ್ದಾರೆ. ಜನ್ಮಕೊಟ್ಟವರ ಅಪ್ಪ ಎನ್ನಬೇಕು. ಇಲ್ಲವೇ ದೊಡ್ ದೊಡ್ ಜಗತ್ ಗುರುಗಳನ್ನು ಅಪ್ಪಾಜಿ ಎಂದರೆ ತಪ್ಪಲ್ಲ. ಆದರೆ ಹಾದಿಬೀದಿ ಹೋಗೋರನ್ನೇಲ್ಲ ಅಪ್ಪಾಜಿ ಎಂದರೆ. ಬಿಜೆಪಿನ ಹಾಳು ಮಾಡಿದವರೇ ಈ ಅಪ್ಪಾಜಿ ಕಂಪನಿಯವರು ಎಂದರು.

ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾಗಬೇಕು, ನಾವು ಹೋರಾಟ ಮಾಡುತ್ತಿರೋದೆ ಈ ಕಾರಣಕ್ಕೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿಲ್ಲವೇ..? ಪಕ್ಷದಲ್ಲಿ ವಂಶವಾದ ಮತ್ತು ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ ಎಂದು. ಅದನ್ನು ನಡೆದುಕೊಳ್ಳುವಂತೆ ಹೇಳುತ್ತೇವೆ. ಇಲ್ಲವಾದರೆ ಡಿಕ್ಲೇರ್ ಮಾಡಿಬಿಡಿ, ಬಿಜೆಪಿಯಲ್ಲಿ ವಂಶಾಡಳಿತ, ಭ್ರಷ್ಟಾಚಾರ ನಡೆಯುತ್ತೆ ಎಂದು.

ವಿಜಯೇಂದ್ರ ಒಬ್ಬನನ್ನು ಬಿಟ್ಟು ಯಾರನ್ನೇ ರಾಜ್ಯಾಧ್ಯಕ್ಷನ ಮಾಡಿದರರೂ ಸಮಸ್ಯೆ ಇಲ್ಲ. ಒಡೆದ ಮನಸ್ಸುಗಳು ಒಂದಾಗಬೇಕಾದರೆ ಒಳ್ಳೆಯ ನಾಯಕತ್ವ ಬೇಕು, ನಾಯಕತ್ವವೇ ಸರಿಯಿಲ್ಲದಿದ್ದರೆ ಯಾರು ಒಂದಾಗಿ ಏನು ಪ್ರಯೋಜನ?

ಯಡಿಯೂರಪ್ಪ ಮತ್ತು ವಿಜಯೇಂದ್ರ ತಾವು ರೈತನ ಮಕ್ಕಳು ಅಂತ ಹೇಳುತ್ತಾರೆ, ಹಾಗಾದರೆ ನಾವೇನು ಎಮ್ಮೆಯ ಮಕ್ಕಳೇ? ಎಂದು ಯತ್ನಾಳ್ ಲೇವಡಿ ಮಾಡಿದರು.

ರಾಮುಲು ಮಂತ್ರಿ ಅವರ ಭವಿಷ್ಯ ಹಾಳು ಮಾಡಿ ವ್ಯಕ್ತಿ ವಿಜಯೇಂದ್ರ, ಮತ್ತೆ ಅವನಿಗೆ ಜೈ ಎಂತಾರೆ ಅಂದರೆ ವಿಷಾದಕರ ಸುದ್ದಿ ಎಂದರು.

ರಾಜ್ಯದಲ್ಲಿ ಬಿಜೆಪಿಗೆ ಪ್ರಾಮಾಣಿಕ ನಾಯಕ ಬೇಕಾಗಿದೆ. ಈ ಡಂಬಾಚಾರದ ನಾಯಕತ್ವ ಬೇಕಿಲ್ಲ. ಇಡೀ ಕರ್ನಾಟಕದಲ್ಲಿ ವಿಜಯೇಂದ್ರನ ನಾಯಕತ್ವವನ್ನು ಯಾರು ಒಪ್ಪುತ್ತಿಲ್ಲ. ಅನೇಕ ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಇರುವ ಕರ್ನಾಟಕದಲ್ಲಿ ಮಾಡಲು ಸಾಧ್ಯವಾಗದೇ ಇರುವುದು ಈ ವ್ಯಕ್ತಿ ಬೇಡ ಎನ್ನುವುದಾಗಿದೆ‌. ಇವನ ನೇತೃತ್ವದಲ್ಲಿ ಚುನಾವಣೆಗೆ ಹೋದರೆ 30 ಸ್ಥಾನ ಬರಲ್ಲ ಎಂಬುದೇ ಕಾರಣ.

ಬಿಜೆಪಿಯವರು ವಿಜಯೇಂದ್ರನ ಮತ್ತೆ ತಲೆ ಮೇಲೆ ಕೂರಿಸಿಕೊಂಡರೆ, ವಿಜಯದಶಮಿಗೆ ಪಕ್ಷವನ್ನು ಕಟ್ಟುವುದು ಗ್ಯಾರಂಟಿ, ನಮ್ಮ ಸರ್ಕಾರಕ್ಕೆ ಬಹುಮತ ಬರುವುದು ಗ್ಯಾರಂಟಿ, ಕರ್ನಾಟಕ ಉದ್ದಾರ ಆಗೋದು ಗ್ಯಾರಂಟಿ.

ವಿಜಯೇಂದ್ರನ ಬದಲಾವಣೆ ಮಾಡುವುದು ಬಿಡುವುದು ಅವರ ಪಾರ್ಟಿಗೆ ಸಂಭಂದಿಸಿದ ವಿಷಯ. ಅವ ಅಯೋಗ್ಯ ಇದ್ದಾನ, ಭ್ರಷ್ಟ ಇದ್ದಾನ ಅಂತ ನಾವು ಹೇಳಿದ್ದೇವೆ. ಆದರೂ ಅವನೇ ಬೇಕು ಎಂದರೆ ನಾವೇನು ಮಾಡುವುದು ಎಂದು ಯತ್ನಾಳ್ ಹೇಳಿದರು.

ರಾಜಕೀಯ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಯುದ್ಧ ಇನ್ನೂ ಸ್ಥಗಿತಗೊಂಡಿಲ್ಲ. ಅಡುಗೆ ಅನಿಲ ಸೇರಿದಂತೆ ತೈಲ ಸಮಸ್ಯೆ ಎಲ್ಲ ದೇಶಗಳಿಗೆ ತಟ್ಟಿದೆ. ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಆರ್‌. ಅಶೋಕ (R. Ashoka)

[ccc_my_favorite_select_button post_id="121608"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]