ಹರಿತಲೇಖನಿ ದಿನಕ್ಕೊಂದು ಕಥೆ: ದೇವಿ ಭಾಗವತ ಜನನ

Birth of Devi Bhagavata

Harithalekhani: ಜಗತ್ತಿನ ಸೃಷ್ಟಿಯಲ್ಲಿ ಹಾಲಿನ ಸಮುದ್ರದ ಮೇಲೆ ವಿಷ್ಣು ಮಲಗಿದ್ದಾನೆ. ಸಮುದ್ರವನ್ನು ಹಿಡಿದಿಟ್ಟುಕೊಳ್ಳುವ ಹಾಲಿನ ಪಾತ್ರೆ ಹಿಡಿದಿರುವ ಶಕ್ತಿಯೇ ಆದಿಪರಾಶಕ್ತಿ -ಜಗದ್ಧಾತ್ರಿ.

ಬ್ರಹ್ಮನ ಸೃಷ್ಟಿ ಶಕ್ತಿ, ವಿಷ್ಣುವಿನ ರಕ್ಷಿಸುವ ಶಕ್ತಿ ಹಾಗೆ ಶಿವನ ಲಯ ಮಾಡುವ ಶಕ್ತಿ, ಇದೆಲ್ಲದರ ಒಟ್ಟು ಶಕ್ತಿ ಆದಿಪರಾಶಕ್ತಿ. ದೇವಿಯ ಶಕ್ತಿ ಸಾತ್ವಿಕ ವಾದಾಗ ವಿಷ್ಣುವಿನೊಳಗೆ ನಿಂತು ರಕ್ಷಣೆ ಮಾಡುತ್ತಾಳೆ.

ರಾಜಸಿಕವಾದಾಗ ಬ್ರಹ್ಮನೊಳಗೆ ಸೇರಿ ಸೃಷ್ಟಿಗೆ ಕಾರಣವಾದರೆ, ಸರ್ವ ಶಕ್ತಿಯಾಗಿ ಶಿವನಲ್ಲಿ ಸೇರಿ ಲಯಕ್ಕೆ ಕಾರಣವಾಗುತ್ತಾಳೆ. ಒಬ್ಬಳೇ ದೇವಿಯ ವಿಭಿನ್ನ ಶಕ್ತಿಯ ಎಲ್ಲಾ ಶಕ್ತಿಯು ದೇವಿಯಾಗಿದ್ದಾಳೆ.

ವೇದವ್ಯಾಸರ ರಚಿತ, ದೇವಿ ಭಾಗವತ ಹೇಗೆ ಸೃಷ್ಟಿಯಾಯಿತು ಎಂಬುದಕ್ಕೆ ವ್ಯಾಸರೇ ಹೇಳುವಂತೆ, ‌ಬಾಲರೂಪಿಯಾದ ವಿಷ್ಣು ವಟಪತ್ರ ಶಾಹಿಯಲ್ಲಿ ಮಲಗಿದ್ದಾನೆ. ಅವನಿಗೆ ಒಂದು ಆಲೋಚನೆ ಹುಟ್ಟಿತು ಸುತ್ತಲೂ ಕ್ಷೀರ ಸಮುದ್ರವಿದೆ. ನಾನು ಬಾಲಕನ ರೂಪದಲ್ಲಿ ಇಲ್ಲಿಗೆ ಹೇಗೆ ಬಂದೆ. ಯಾವ ಕಾರ್ಯ ನೆರವೇರಿಸಲು ನಾನು ಇಲ್ಲಿದ್ದೇನೆ. ನನ್ನ ರಚನೆ ಹೇಗಾಯಿತು? ಇಂಥ ಹಲವಾರು ಪ್ರಶ್ನೆಗಳು ಮೂಡಿ ಉತ್ತರಕ್ಕಾಗಿ ಚಿಂತಿಸತೊಡಗಿದ ಇಂತಹ ಒಂದು ಚಿಂತನೆ ಬರಲು ಸಾಕ್ಷಾತ್ ದೇವಿಯೇ ಪ್ರೇರಣೆಯಾಗಿದ್ದಳು.

ಆಗ ಬಂದ ಯೋಚನೆ ಈ ಜಗತ್ತೆಲ್ಲವೂ ನಾನೇ ಆಗಿದ್ದೇನೆ. ನನ್ನನ್ನು ಬಿಟ್ಟು ಅವಿನಾಶಿಯಾದ್ದು ಏನು ಇಲ್ಲ ಎಂಬ ಪ್ರಚೋದನೆಯನ್ನು ದೇವಿ ಕೊಟ್ಟಳು. ಅಂತ ದೇವಿಯ ಸ್ವರೂಪವನ್ನು ಮನಸ್ಸಿನಲ್ಲಿ ತಂದುಕೊಂಡ ವಿಷ್ಣು ಅವುಗಳನ್ನು ನಿಧಾನವಾಗಿ ತಿಳಿಯುತ್ತಾ ಅವುಗಳನ್ನು ತನ್ನ ನಾಭಿ ಕಮಲದಿಂದ ಹುಟ್ಟಿದ ಬ್ರಹ್ಮನಿಗೆ ಮೊಟ್ಟಮೊದಲು ಬೋಧಿಸಿದನು.

ಬ್ರಹ್ಮನು ತನ್ನ ಮಾನಸ ಪುತ್ರ ನಾರದರಿಗೆ ತಿಳಿಸಿದನು. ನಂತರದ ದಿನಗಳಲ್ಲಿ ನಾರದರು ಈ ದೇವಿ ಮಹಾತ್ಮೆ ಕಥೆಯನ್ನು ವ್ಯಾಸರಿಗೆ ಬೋಧಿಸಿದರು. ವ್ಯಾಸರು ಇವುಗಳನ್ನು ಸಂಕಲಿಸಿ “ದೇವಿ ಭಾಗವತ” ವನ್ನು ರಚಿಸಿದರು ಎಂಬುದಾಗಿ ವ್ಯಾಸರು ತಿಳಿಸಿದ್ದಾರೆ.

ಸತ್ಯವತಿ ಪರಾಶರ ಪುತ್ರರಾದ ವೇದವ್ಯಾಸರಿಗೆ ಇಂಥ ಹೊಸ ಪರಿಕಲ್ಪನೆ ಮೂಡ ಲು ಕಾರಣ, ಅಗಾಧ ಜ್ಞಾನದ ಗಣಿಯಾದ ವ್ಯಾಸರಿಗೆ, ತಮ್ಮಲ್ಲಿದ್ದ ಜ್ಞಾನದ ಸಂಪತ್ತ ನ್ನು ದಾಟಿಸಲು ಒಬ್ಬ ಶಿಷ್ಯ ಬೇಕು ಎಂದುಕೊಂಡರು.

ನಂತರ ಯೋಚಿಸಿದರು ಶಿಷ್ಯನಿಗೆ ಬೋಧಿಸಿದರೆ ಕ್ರಮೇಣ ಅದು ಅಷ್ಟಕ್ಕೆ ನಿಲ್ಲಬಹುದು. ಅದನ್ನು ಮುಂದಕ್ಕೆ ಬೆಳೆಸುವಂತಹ ಮುಂದಿನ ಪೀಳಿಗೆಗೂ ಉಪಯುಕ್ತವಾಗುವಂತೆ ಅದನ್ನು ತಲುಪಿಸಲು ತನ್ನದೇ ಒಂದು ಗಂಡು ಸಂತಾನ ಇದ್ದರೆ ಎಂಬ ಯೋಚನೆ ಬಂದಿತು ಆದರೆ ಅದು ಹೇಗೆ ಪಡೆಯುವುದು ಎಂದು ಯೋಚಿಸುತ್ತಾ ತಪಸ್ಸು ಮಾಡಲು ಮಂದರ ಪರ್ವತಕ್ಕೆ ಹೋದರು.

ನಾರದರು ಅಲ್ಲಿಗೆ ಬಂದರು. ಅವರಿಗೆ ನಮಸ್ಕರಿ ಸಿದ ವ್ಯಾಸರು ತಮ್ಮ ಆಲೋಚನೆಯನ್ನು ಸಾಕಾರ ಗೊಳಿಸಲು ಗಣಪತಿ -ವಿಷ್ಣು- ಶಿವ- ಪಾರ್ವತಿ -ಸ್ಕಂದ ಇವರಲ್ಲಿ ನಾನು ಯಾರನ್ನು ಕುರಿತು ತಪಸ್ಸು ಮಾಡಿದರೆ ಶ್ರೇಷ್ಠ ಸಂತಾನ ಸಿಗುವುದು ಎಂದು ಕೇಳಿದರು.

ನಾರದರು ಹೇಳಿದರು, ನೀನು ಕೇಳಿದ ಪ್ರಶ್ನೆಯನ್ನೇ ವಿಷ್ಣುವಿನ ನಾಭಿ ಕಮಲದಲ್ಲಿ ಬಂದ ಬ್ರಹ್ಮ, ವಿಷ್ಣುವನ್ನೇ ಕೇಳ ಬೇಕೆಂಬ ಯೋಚನೆ ಬಂದು ವೈಕುಂಠಕ್ಕೆ ಬಂದಾಗ ಸರ್ವ ಶಕ್ತನಾಗಿದ್ದ ವಿಷ್ಣು ಧ್ಯಾನಸ್ಥ ನಾಗಿ ತಪಸ್ಸು ಮಾಡುವುದನ್ನು ನೋಡಿದ ಬ್ರಹ್ಮ ಬೆರಗಾದನು.

ಬ್ರಹ್ಮ ಹುಟ್ಟಿರುವುದು ವಿಷ್ಣುವಿನ ನಾಭಿಕಮಲದ ಹೂವಿನಲ್ಲಿ ಯಾವಾಗಲೂ ಹೂವಿನ ಮೇಲೆ ಬ್ರಹ್ಮ ಕುಳಿತಿರುತ್ತಾನೆ. ಹೀಗಾಗಿ ವಿಷ್ಣು ಸರ್ವ ಶ್ರೇಷ್ಠ.‌ ವಿಷ್ಣುವಿನ ಹತ್ತಿರ ಹೇ ವಿಷ್ಣು ಜಗತ್ತಿನ ಸೃಷ್ಟಿಕರ್ತ ಸಕಲಕಾರಕ್ಕೂ ನೀನು ಪ್ರಭು, ಅಲ್ಲದೆ ಸೃಷ್ಟಿ ಕಾರ್ಯ ಮಾಡುವ ನಾನು ಕೂಡ ನಿನ್ನ ನಾಭಿ ಕಮಲದ ಮೇಲೆ ಕುಳಿತಿರುವೆ. ನಿನ್ನನ್ನೇ ಸರ್ವ ಶಕ್ತ ಎಂದುಕೊಂಡಿರುವೆ. ಆದರೆ ನೀನು ಯಾರನ್ನು ಕುರಿತು ತಪಸ್ಸು ಮಾಡುತ್ತಿರುವೆ ಎಂದು ಕೇಳಿದನಂತೆ.‌

ಬ್ರಹ್ಮನ ಪ್ರಶ್ನೆಗೆ ಉತ್ತರಿಸುತ್ತಾ ವಿಷ್ಣು ಹೇಳಿದ ನಾನು ನನ್ನ ಮನಸ್ಸಿನ ವಿಚಾರವನ್ನು ಹೇಳುತ್ತಿರುವೆ ಕೇಳು. ಬ್ರಹ್ಮ ನೀನು ಸೃಷ್ಟಿ ಮಾಡುತ್ತಿರುವೆ, ನಾನು ಪಾಲಿಸುತ್ತಿರುವೆ, ಶಂಕರ ಸಂಹಾರಕ ಆಗಿದ್ದಾನೆ. ಉಳಿದ ದೇವತೆಗಳು- ದಾನವರು -ಮಾನವರು ಎಲ್ಲರೂ ಹಾಗೆ ತಿಳಿದಿದ್ದಾರೆ. ಆದರೆ ವೇದಗಳನ್ನು ಅರಿತು ಪಾರಂಗತರಾದ ಋಷಿಮುನಿಗಳು, ಸೃಷ್ಟಿ- ಸ್ಥಿತಿ- ಸಂಹಾರ ಮಾಡುವ ಏಕೈಕ ಶಕ್ತಿ ಎಂದರೆ ಶಕ್ತಿ ದೇವತೆಯಾದ ಆದ್ಯಾಶಕ್ತಿಯಿಂದ ದೊರೆತಿರುವುದು ಎಂದಿದ್ದಾರೆ.

ವೇದವ್ಯಾಸರು ದೇವಿ ಭಾಗವತದಲ್ಲಿ ತಿಳಿಸಿರುವಂತೆ ಪ್ರಪಂಚದಲ್ಲಿ ಯಾವುದೇ ಜ್ಞಾನ- ಸೃಷ್ಟಿ ಅಥವಾ ಸಂಹಾರ ಆಗಲಿಲ್ಲ ಎಲ್ಲೆಡೆ ಅಂಧಕಾರ ತುಂಬಿತ್ತು ಆಗ ಆದಿಶಕ್ತಿ ಒಂದು ಪ್ರಕಾಶ ರೂಪದಲ್ಲಿ ಅವತಾರ ತೆಗೆದುಕೊಂಡಳು. ಆ ಪ್ರಕಾಶದಿಂದ. ಸೃಷ್ಟಿ ಕಾರ್ಯಕ್ಕೆ ಬ್ರಹ್ಮ, ಪೋಷಣೆಗೆ ವಿಷ್ಣು ಹಾಗೂ ಲಯಕಾರಕ ಶಿವ ಹುಟ್ಟಿದರು.

ಆದ್ಯಾ ಶಕ್ತಿಯ ಕೊರತೆ ಯಾದರೆ ಸೃಷ್ಟಿ -ಸ್ಥಿತಿ- ಲಯ ಈ ಕಾರ್ಯವನ್ನು ನಮ್ಮಿಂದ ಮಾಡಲು ಸಾಧ್ಯವಿಲ್ಲ. ಆದ್ಯಾಶಕ್ತಿಗೆ ಅಧೀನನಾಗಿ ನಾನು ಪ್ರಳಯ ಕಾಲದಲ್ಲಿ ಶೇಷಶಾಹಿಯ ಮೇಲೆ ಮಲಗಿರುತ್ತೇನೆ. ಸೃಷ್ಟಿ ಮಾಡುವ ಅವಕಾಶ ಬಂದಾಗ ಏಳುತ್ತೇನೆ. ಹಾಗೆ ಮಲಗಿದಾಗ ಆದ್ಯಾಶಕ್ತಿಯನ್ನು ಧ್ಯಾನ ಮಾಡುತ್ತೇನೆ.

ಇನ್ನೊಂದು ಪ್ರಕಾರ ಶಿವನು ನಿಶ್ಚೇತನಾಗಿ ಮಲಗಿರುವಾಗ ಕಾಳಿ ಮಾತೆ ತನ್ನ ಕಾಲನ್ನು ಶಿವನ ಎದೆಯ ಮೇಲಿಟ್ಟು ನಿಂತಿರುವುದನ್ನು ನೋಡಿದರೆ ಗಾಬರಿ ಯಾಗುತ್ತದೆ. ಆದರೆ ಶಿವನೊಳಗಿನ ಶಕ್ತಿಯೇ ಪಾರ್ವತಿ.

ಶಿವನು ಪ್ರಬಲವಾದ ಎಲ್ಲಾ ಶಕ್ತಿಗಳನ್ನು ( ಪೆಟ್ರೋಮ್ಯಾಕ್ಸ್ ನಂತೆ) ತನ್ನೊಳಗೆ ಇಟ್ಟುಕೊಂಡು ಧ್ಯಾನಸ್ಥನಾಗಿರುತ್ತಾನೆ ಆಧ್ಯಾಶಕ್ತಿ ಅವನಲ್ಲಿ ಶಕ್ತಿ ತುಂಬಿದಾಗ ನಟರಾಜನಾಗಿ ನಾಟ್ಯ ಆರಂಭಿಸುತ್ತಾನೆ ಆಗ ಅವನಲ್ಲಿರುವ ಶಕ್ತಿಯೆಲ್ಲ ಹೊರಹೊಮ್ಮುತ್ತದೆ.

ಆದ್ಯಾಶಕ್ತಿ ತ್ರಿಮೂರ್ತಿಗಳ ಒಳಗಿನ ಮೂಲ ಶಕ್ತಿ.‌ ಸರ್ವ ಸೃಷ್ಟಿಯ ಮೂಲಶಕ್ತಿ ಆದಿಶಕ್ತಿ ಎಲ್ಲಾ ದೇವತೆಗಳು ಬ್ರಹ್ಮ -ವಿಷ್ಣು ಮತ್ತು ಶಿವ ತ್ರಿಮೂರ್ತಿಗಳ ಶಕ್ತಿಯ ಆಧಾರವೇ ಆದಿಶಕ್ತಿ. ಒಮ್ಮೆ ತ್ರಿಮೂರ್ತಿಗಳು ತಮ್ಮ ಕೆಲಸ ಗಳನ್ನು ಮಾಡಲಾಗದೆ ಇರುವ ಪರಿಸ್ಥಿತಿ ಬಂತು.

ಬ್ರಹ್ಮ ಸೃಷ್ಟಿಸಲು ಆಗಲಿಲ್ಲ ವಿಷ್ಣು ವಿಶ್ರಾಂತಿಯಲ್ಲಿ, ಶಿವನು ತಪಸ್ಸಿನಲ್ಲಿ, ಹೀಗೆ ಯಾವುದು ನಡೆಯದಂತೆ ಇದ್ದಾಗ ಆದ್ಯಾಶಕ್ತಿ ತ್ರಿಮೂರ್ತಿಗಳ ಅಂತರೊಳಗಿದ್ದ ಶಕ್ತಿಯನ್ನು ಜಾಗೃತಗೊಳಿಸಿದಳು. ಈ ಶಕ್ತಿ ಯೇ “ಆದಿ ಪರಾಶಕ್ತಿ” ವಿಶ್ವವನ್ನು ಚಲಿಸುವಂತೆ ಮಾಡುವ ಚೇತನಾ ಶಕ್ತಿ. ಇದಿಲ್ಲದೆ ಬ್ರಹ್ಮ ಸೃಷ್ಟಿಸಲಾರ ವಿಷ್ಣು ಪೋಷಿಸಲಾರ ಶಿವನು ಸಂಹಾರ ಮಾಡಲಾರ.

ಯಾ ದೇವಿ ಸರ್ವಭೂತೇಶು ಶಕ್ತಿ ರೂಪೇಣ ಸಂಸ್ಥಿತ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ!!

ತ್ರಿಮೂರ್ತಿಗಳ ಶಕ್ತಿ ರೂಪ ಅಂದರೆ ಬ್ರಹ್ಮನಿಗೆ ಸರಸ್ವತಿ, ವಿಷ್ಣುವಿಗೆ ಲಕ್ಷ್ಮಿ ಹಾಗೂ ಶಿವನಿಗೆ ಪಾರ್ವತಿ ಅಥವಾ ದುರ್ಗಾ. ಈ ಮೂರು ಶಕ್ತಿಗಳೆಲ್ಲಾ ಒಬ್ಬ ಆದಿಶಕ್ತಿಯ ವಿಭಿನ್ನ ರೂಪಗಳು. ದೇವಿಯು ಒಬ್ಬಳೇ ಆದರೆ ಅವಳು ವಿಭಿನ್ನ ಕಾರ್ಯಗಳಿಗೆ ವಿಭಿನ್ನ ರೂಪಗಳಲ್ಲಿ ಪ್ರತ್ಯಕ್ಷವಾಗುತ್ತಾಳೆ.

ಸಂದೇಶ:- ಶಕ್ತಿ ಇಲ್ಲದ ತ್ರಿಮೂರ್ತಿಗಳು ಶೂನ್ಯ, ಶಕ್ತಿಯು ಚೇತನತೆ -ಕ್ರಿಯಾಶೀಲತೆ ಪ್ರೇರಣೆಯ ಮೂಲ. ಆಧ್ಯಾದೇವಿ ಇಡೀ ಬ್ರಹ್ಮಾಂಡವನ್ನು ನಿರ್ವಹಿಸುತ್ತಿರುವ ಶಕ್ತಿ ಯಾವುದೋ ಒಂದಲ್ಲ ನಾವೆಲ್ಲ ನಮ್ಮೆಲ್ಲರಲ್ಲೂ ನೆಲೆಸಿರುವ ಜೀವಶಕ್ತಿ.‌

ಶಿವನ ಶಕ್ತಿ ಪಾರ್ವತಿ, ವಿಷ್ಣುವಿನ ಶಕ್ತಿ ಲಕ್ಷ್ಮಿ, ಬ್ರಹ್ಮನ ಶಕ್ತಿ ಸರಸ್ವತಿ ಈ ಮೂರು ಶಕ್ತಿಗಳ ಮೂಲತತ್ವ ಆಧ್ಯಾ ಶಕ್ತಿ.‌ ಈ ಆದ್ಯಾ ಶಕ್ತಿಯೇ ಬ್ರಹ್ಮಾಂಡದ ಮೊದಲ ಬೆಳಕು ಇವಳೇ ಪ್ರಪಂಚದ ತಾಯಿ.‌

ಬರಹ ಕೃಪೆ: ಆಶಾ ನಾಗಭೂಷಣ ( ಸಾಮಾಜಿಕ ಜಾಲತಾಣ)

ರಾಜಕೀಯ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಬಿಜೆಪಿಯ (BJP) ಗತವೈಭವದ ದಿನಗಳು ದಾವಣಗೆರೆಯಲ್ಲಿ ಮರುಕಳಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

[ccc_my_favorite_select_button post_id="121758"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]