ದರ್ಶನ್ ವಿರುದ್ಧ ಬೇಕಾಬಿಟ್ಟಿ ಮಾತು; ಪ್ರಥಮ್‌ ವಿರುದ್ಧ ಹಿರಿಯ ನಿರ್ಮಾಪಕ ಕೆ.ಮಂಜು ಆಕ್ರೋಶ

Senior producer K. Manju chides Pratham for his outspoken remarks against Darshan

ಬೆಂಗಳೂರು: ಖ್ಯಾತ ನಟ ದರ್ಶನ್ (Darshan) ಹಾಗೂ ಅವರ ಅಭಿಮಾನಿಗಳ ವಿರುದ್ಧ ಬೇಕಾಬಿಟ್ಟಿ ಮಾತನಾಡುತ್ತಿರುವ ಬಿಗ್ ಬಾಸ್ ವಿನ್ನರ್ ಪ್ರಥಮ್‌ಗೆ (Pratham) ಹಿರಿಯ ನಿರ್ಮಾಪಕ ಕೆ ಮಂಜು (K Manju) ಆಕ್ರೋಶ ಹೊರಹಾಕಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ದರ್ಶನ್ ಬಗ್ಗೆ ಪ್ರಥಮ್ ಮಾತನಾಡಿರುವುದು ಓಒರ್ ಆಗಿದೆ. ಜೈಲಿಗೆ ಹೋದವರೆಲ್ಲ ಕೆಟ್ಟವರಲ್ಲ, ಅನಿವಾರ್ಯ ಕಾರಣಗಳಿಂದ ಓಗಿರ್ತಾರೆ. ದರ್ಶನ್ ಒಬ್ಬ ಸೆಲೆಬ್ರಿಟಿ ಅವರನ್ನ ಮಾತನಾಡಿಸಿದವರೆಲ್ಲ ಕೆಟ್ಟವರ..? ನಿನಗೇನುಕ್ ಬೇಕು..? ನೀನ್ ಯಾರು..? ನೀನೆನ್ ಪೊಲೀಸ..? ಕಾನೂನಾ.? ಎಂದು ಪ್ರಥಮ್ ಅವರನ್ನು ಪ್ರಶ್ನಿಸಿದ್ದಾರೆ.

ಅಲ್ಲೆಲ್ಲೋ ಹೋಗಿದ್ದೀಯಾ ಫಂಗ್ಷನ್ಗೆ ಅಲ್ಲೊಂದು ಕಿರಿಕ್, ನಿನು ಬೇಕು ಅಂತ ಮಾಡ್ತಾ ಇದ್ದೀಯಾ. ಇದರಿಂದ ಯಾರೋ ಅಭಿಮಾನಿಗೆ ಕೋಪ ಬರುತ್ತೆ. ನಾವು ಹೋಗುವಾಗ ತುಂಬಾ ಜನ ಚೆನ್ನಾಗಿ ಮಾತಾಡಿಸುವವರು ಇರ್ತಾರೆ, ಬೈದುಕೊಳ್ಳುವವರು ಇರ್ತಾರೆ.

ದರ್ಶನ್ ಅಭಿಮಾನಿಗಳಿಗೆ ಹೇಳಬೇಕು ಅಂತಾನೆ. ದರ್ಶನ್ ಹೇಳುದ್ರೆ ಅಭಿಮಾನಿಗಳು ಕೇಳಿಬಿಡ್ತಾರಾ..? ದರ್ಶನ್ ಅಭಿಮಾನಿಗಳಿಗೆ ಬೈಯ್ಯಿ ಅಂತ ಹೇಳಿದ್ರಾ..? ಪ್ರಥಮ್ ಮಾತುಗಳು ನಾ ಇಷ್ಟ ಪಡಲ್ಲ. ಪ್ರಥಮ್ ದರ್ಶನ್ ಬಗ್ಗೆ ಮಾತನಾಡಿದ್ದು ತಪ್ಪು. ಯಾಕ್ ಕೇಳ್ತಿಯಾ..? ದರ್ಶನ್ ಹೇಳಿದ್ ನೀ ನೋಡಿದ್ದೀಯಾ..? ಸಾವಿರ ಜನ ಸಾವಿರ ಮಾತಾಡುತ್ತಾರೆ.

ಇದನ್ನು ಓದಿ: ದೊಡ್ಡಬಳ್ಳಾಪುರಕ್ಕೆ ಪ್ರಥಮ್.. ಪೊಲೀಸರಿಂದ ಸ್ಥಳ ಮಹಜರ್

ಫಥಮ್ ಫಸ್ಟ್ ನೀ ಸರಿಯಾಗಿರು, ನೀ ಯಾಕ್ ಪದೇ ಪದೇ ಹೋಗಿ ಈ ರೀತಿ ಆಡೋದು. ಪೊಲೀಸರಿಗೆ ದೂರು ಕೊಟ್ಟಿದ್ದೀಯಾ ಅವರು ತನಿಖೆ ಮಾಡ್ತಾರೆ. ನೀನ್ ಯಾಕ್ ಅವರ ಸುದ್ದಿ ಹೇಳ್ತೀಯ. ಪ್ರಥಮ್ ಮಾಡಿರುವುದು ತಪ್ಪು ಅಂತ ನಾ ಹೇಳ್ತಿನಿ. ವಯಕ್ತಿಕವಾಗಿ ದರ್ಶನ್ ನಿನಗೆ ದುಷ್ಮನ್ ಏನಲ್ಲ. ನೀನ್ ಯಾಕ್ ದರ್ಶನ್ ಬಗ್ಗೆ ಮಾತಾಡುತ್ತೀಯಾ..? ಬಿಟ್ ಬಿಡು.

ಯಾರಾದ್ರೂ ಬಂದ್ ಮಾತಾಡುದ್ರೆ, ಇಲ್ಲಪ್ಪ ನಾವು ಅವರು ಚೆನ್ನಾಗಿದ್ದೀವಿ ಅಂತ ಹೇಳು. ಯಾರೂ ಬಂದು ಸುಮ್ ಸುಮ್ನೆ ಚುಚ್ ಬಿಡಲ್ಲ‌, ಯಾಕ್ ಚುಚ್ ಬಿಡ್ತಾರೆ..? ಮತ್ ನಮ್ ಬಗ್ಗೆ ಯಾಕ್ ಯಾರು ಮಾತಾಡಲ್ಲ. ಬೇರೆಯವರ ಬಗ್ಗೆ ಯಾಕ್ ಮಾತಾಡಲ್ಲ. ಯಾಥಾ ರಾಜ ತಥಾ ಪ್ರಜಾ, ನಾವ್ ಹೇಗ್ ಇರ್ತೀವಿ ಜನ ಹಾಗೆ ಇರ್ತಾರೆ. ಅದ್ ಬಿಟ್ ನೀನು ಹಾಗ್ ಮಾಡಿ ಬಿಡ್ತೀನಿ, ಹೀಗ್ ಮಾಡಿ ಬಿಡ್ತೀನಿ ಅಂದ್ರೆ, ಅಭಿಮಾನಿಗಳು ಇದ್ದೇ ಇರ್ತಾರೆ.

ಪಾಪ ದರ್ಶನ್ ಯಾರಿಗೂ ಏನೂ ಹೇಳುವಂತ ವ್ಯಕ್ತಿಯಲ್ಲ. ಕಲಾವಿದರ ಬಗ್ಗೆ, ಚಿತ್ರರಂಗದ ಬಗ್ಗೆ ಆತನಿಗೆ ತುಂಬಾ ಗೌರವವಿದೆ. ಸಿನಿಮಾ ಮಂಡಳಿಗೂ ಗೊತ್ತಿದೆ. ಎಲ್ಲಾ ಕಲಾವಿದರಿಗೂ ದರ್ಶನ್ ಬಗ್ಗೆ ಗೌರವ ಇದೆ.

ನಾವೂ ನಾವೂ ಕಿತ್ತಾಡುವುದು ಬೇಡ. ಯಾರೋ ಮಾಡಿರ್ತಾರೆ. ಆತನ ಅಭಿಮಾನಿಗಳು ಅಂತ ನೀ ಹೇಗ್ ಹೇಳ್ತೀಯಾ..? ನಿನ್ನ ಕಡೆಯವರೆ ಮಾಡಿರಬಹುದು. ನೀನ್ ಹೇಳ್ತಿರುತ್ತೀಯಾ..? ಕಣ್ಣಾರೆ ನೋಡದೆ, ಕಿವಿಯಾರೆ ಕೇಳದೇ ಮಾತಾಡಬೇಡ ಎಂದು ಛೀಮಾರಿ ಹಾಕಿದರು.

ಕೇಸ್ ಕೋರ್ಟಲ್ಲಿ ಇರುವಾಗ ರಮ್ಯಾ ಪೋಸ್ಟ್ ತಪ್ಪು: ನಟ ನಟಿಯರ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತದೆ‌. ಅದು ನಾವು ಯಾವ ರೀತಿ ಒಡನಾಟ ಇಟ್ಟುಕೊಂಡಿರುತ್ತೇವೆ ಅದರ ಮೇಲೆ ನಿರ್ಣಯ ಆಗುತ್ತೆ.

ಇನ್ನೂ ಸಮಾಜಿಕ ಜಾಲತಾಣ ಬಂದ ಬಳಿಕ ಯಾರ್ ಯಾರೋ ಅಭಿಮಾನಿಗಳ ಹೆಸರಲ್ಲಿ ಒರಿಜಿನಲ್ ಅಭಿಮಾನಿಗಳು ಇರ್ತಾರೆ, ನಕಲಿ ಅಭಿಮಾನಿಗಳು ಇರ್ತಾರೆ, ಕೆಲವರು ಜಗಳ ತಂದಿಡಬೇಕೆಂದು ಅಂತಲೇ ಇರ್ತಾರೆ. ಅದನ್ನು ತುಂಬ ಜನ ಇರ್ತಾರೆ. ಚಿತ್ರರಂಗದವರು ಅದನ್ನು ತಲೆಗೆ ಇಟ್ಟುಕೊಳ್ಳಬೇಡಿ. ಅದಕ್ಕೆ ಅಂತಲೇ ಕೆಲವು ಜನ ಹುಟ್ಟಿಕೊಂಡು ಬಿಟ್ಟಿದ್ದಾರೆ.

ಸಿನಿಮಾ ಅನ್ನೋದು ದೇವಸ್ಥಾನ ಇದ್ದಂತೆ. ನಮ್ಮ ಉದ್ದೇಶ ಉತ್ತಮ ಸಿನಿಮಾ ನೀಡುವುದಾಗಬೇಕು ಅಷ್ಟೆ. ತಂದಿಟ್ಟು ಮಜಾ ತಗೋಳಕ್ಕೆ ಅಂತನೇ ಕೆಲವರು ಇದ್ದಾರೆ ಅದುನ್ನ ನೀವ್ ಯಾಕ್ ಸೀರಿಯಸ್ ತಗೋತೀರಿ ಅಂತ ಸಂಸದೆ ರಮ್ಯಾ ಅವರಿಗೆ ತಿರುಗೇಟು ನೀಡಿದರು.

ದರ್ಶನ್ ನೊಂದಿದ್ದಾರೆ. ನೊಂದಿರುವವರಿಗೆ ನಾವು ಕಲ್ಲು ಹಾಕಬಾರದು. ಈಗ ಅವರು ಮಾಡಿದ್ದಾರೋ ಬಿಟ್ಟಿದ್ದಾರೋ ನಮ್ಮ ಕೈಯಲ್ಲಿ ಇಲ್ಲ ಕಾನೂನಿನ ಅನ್ವಯ ನ್ಯಾಯಾಲಯ ತೀರ್ಪು ನೀಡುತ್ತೆ. ನಾವೆಲ್ಲ ಯಾರು ಹೇಳೋಕೆ.

‘ದರ್ಶನ್ ಪ್ರಕರಣ ಕೋರ್ಟ್ ನಲ್ಲಿದ್ದಾಗ ರಮ್ಯಾ ಆ ರೀತಿ ಪೋಸ್ಟ್ ಮಾಡಿದ್ದು ತಪ್ಪು’. ಅಲ್ಲದೆ ಈ ಘಟನೆ ನಡೆದಾಗ ಎಲ್ಲರೂ ಖಂಡಿಸಿ ಮಾತನಾಡಿದ್ದೇವೆ. ಈಗ ಕೋರ್ಟ್‌ನಲ್ಲಿದ್ದಾಗ ರಮ್ಯಾ ಯಾಕೆ ಪೋಸ್ಟ್ ಮಾಡಬೇಕಿತ್ತು ? ನ್ಯಾಯಾಲಯದಲ್ಲಿರುವ ಕೇಸಿನ ಬಗ್ಗೆ ಮಾತನಾಡಬಾರದಿತ್ತು.

ಅವಿವೇಕಿಗಳು ಕೆಲವರು ತಂದಿಡುವವರು ಇರ್ತಾರೆ, ಅದಕ್ಕೆ ಯಾರು ಕಿವಿಗೊಡಬೇಡಿ. ನಿಮ್ ತೊಂದರೆ ಆದರೆ ಪೊಲೀಸರಿಗೆ ದೂರುಕೊಡಿ, ಕಾನೂನಿನ ಪ್ರಕಾರ ತೀರ್ಪು ಕೊಡ್ತಾರೆ ಎಂದು ಕೆ. ಮಂಜು ಹೇಳಿದ್ದಾರೆ.

ರಾಜಕೀಯ

ಮೋದಿ ಸರ್ಕಾರದ ಟೊಳ್ಳಾದ ವಿದೇಶಾಂಗ ನೀತಿಯಿಂದ ಗ್ಯಾಸ್ ಬೆಲೆ ಏರಿಕೆ: ಸಿಎಂ‌ ಸಿದ್ದರಾಮಯ್ಯ

ಮೋದಿ ಸರ್ಕಾರದ ಟೊಳ್ಳಾದ ವಿದೇಶಾಂಗ ನೀತಿಯಿಂದ ಗ್ಯಾಸ್ ಬೆಲೆ ಏರಿಕೆ: ಸಿಎಂ‌ ಸಿದ್ದರಾಮಯ್ಯ

ನಾವು ಎಲ್ಲಾ ಸಮಯದಲ್ಲೂ ಎಚ್ಚರಿಸಿದಂತೆ, ವಿಧಾನಸಭಾ ಚುನಾವಣೆಗಳು ಮುಗಿದ ಕ್ಷಣ, ನರೇಂದ್ರ ಮೋದಿ ಸರ್ಕಾರ ಮತ್ತೆ ಬೆಲೆಗಳನ್ನು ಹೆಚ್ಚಿಸಿದೆ. ಮೇ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹993 ರಷ್ಟು ಹೆಚ್ಚಿಸಲಾಗಿದೆ, ಚುನಾವಣಾ

[ccc_my_favorite_select_button post_id="121599"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]