ಗೌರಿಬಿದನೂರು: ಸರ್ಕಾರಿ ಶಾಲೆ (Government school) ಎಂದರೆ ಮೂಗು ಮುರಿಯುತ್ತಿರುವ ಸನ್ನಿವೇಶದಲ್ಲಿ ತಾನು ಓದಿದ ಸರ್ಕಾರಿ ಶಾಲೆಯ ಉಳಿವಿಗೆ, ಅದರ ಮೇಲಿನ ಕಾಳಜಿಗೆ ಕುವೈತ್ನಿಂದ (Kuwait) ಬಂದ ಉದ್ಯೋಗಿ ಓರ್ವರು ವಿದ್ಯಾರ್ಥಿಗಳಿಗೆ ಪಠ್ಯ ಪರಿಕರಗಳನ್ನು ವಿತರಿಸಿರುವ ಘಟನೆ ತಾಲೂಕಿನ ವೈಚಕೂರಹಳ್ಳಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಆಗಿದೆ.
ಹೌದು ಗೌರಿಬಿದನೂರು ತಾಲೂಕಿನ ವೈಚಕೂರಹಳ್ಳಿ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ರಾಜೇಶ್ ಅಶ್ವಥ್ಥಪ್ಪ ಅವರು ಕುವೈತ್ ನಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ.
ನಿನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಬ್ಯಾಗ್, ಲೇಖನ ಸಾಮಗ್ರಿಗಳ ಮುಂತಾದ ಪಠ್ಯ ಪರಿಕರಗಳನ್ನು ವಿತರಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಳಿಕ ತಾನು ಓದಿದ ಕಾದಲವೇಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ RO Plant ಅನ್ನು ಕೊಡುಗೆಯಾಗಿ ನೀಡಿ ಸರ್ಕಾರಿ ಶಾಲೆಯ ಮೇಲಿನ ಪ್ರೇಮವನ್ನು ಮೆರೆದಿದ್ದಾರೆ.
ಈ ವೇಳೆ ಶಾಲೆಯ ಸಿಬ್ಬಂದಿ ವರ್ಗ, ಶಾಲೆಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಸದಸ್ಯರು, ಶಾಲೆಯ ಹಳೆಯ ವಿಧ್ಯಾರ್ಥಿಗಳು ಇದ್ದರು.

