Harithalekhani; ಒಂದು ಸಾಮ್ರಾಜ್ಯದಲ್ಲಿ ರಾಜ-ರಾಣಿಯರಿದ್ದರು. ಅವರಿಗೆ ಒಬ್ಬಳು ಮಗಳು ಹುಟ್ಟಿದಳು (Apsare). ಆ ರಾಜಕುಮಾರಿಯು ಎಲ್ಲರ ಕಣ್ಣು ಕುಕ್ಕುವ ತೇಜೋಮಣಿಯಂತೆ ಹೊಳೆಯುತ್ತಿದ್ದಳು.
ರಾಣಿಯು ಮಗಳ ಜಾತಕ ತೆಗೆಯಿಸಿ ನೋಡಿದಾಗ ರಾಜಕುಮಾರಿ ಶಾಪಗ್ರಸ್ತೆ ಎಂದು ತಿಳಿದುಬಂದಿತು. ಶಾಪ ನಿವಾರಣಾ ಹಾದಿ ಅನುಸರಿಸಲು ರಾಣಿ ರಾಜನಿಗೆ ತಿಳಿಸಿದಳು. ಆದರೆ ರಾಜ ಇದರ ಕಡೆಗೆ ಗಮನ ಕೊಡಲಿಲ್ಲ.
ವರ್ಷದ ನಂತರ ರಾಣಿಗೆ ಮತ್ತೊಬ್ಬ ರಾಜಕುಮಾರ ಜನಿಸಿದ. ಆದರೆ ರಾಜಕುಮಾರಿಯ ಶಾಪದ ಫಲವಾಗಿ ರಾಜ ರಾಣಿಯಲ್ಲಿ ಮನಸ್ತಾಪ ಉಂಟಾಯಿತು. ರಾಣಿಯು ತನ್ನ ಮಕ್ಕಳೊಡನೆ ತನ್ನ ಅಣ್ಣನ ರಾಜ್ಯಕ್ಕೆ ಹೊರಟುಹೋದಳು.
ಹೀಗೇ ದಿನ ಕಳೆದವು. ರಾಜಕುಮಾರಿ ಪ್ರಾಯಕ್ಕೆ ಕಾಲಿಟ್ಟಳು. ಈಗಂತೂ ರಾಜಕುಮಾರಿ ದೇವಲೋಕದ ಕನ್ಯೆಯನ್ನು ಮೀರಿಸುವ ಸೌಂದರ್ಯ ಹೊಂದಿದ್ದಳು. ಆಕೆಯನ್ನು ವರಿಸಲು ದೇಶ ವಿದೇಶದ ರಾಜಕುಮಾರರು ಬಂದರು.
ಅಲ್ಲದೆ ರಾಣಿಯ ಹಿರಿಯ ಅಣ್ಣನ ಮಗನು ಆಕೆಯ ಮೇಲೆ ಪ್ರೀತಿ ಬೆಳೆಸಿಕೊಂಡು ವರಿಸಲು ಮುಂದಾಗಿದ್ದನು. ಆದರೆ ರಾಜಕುಮಾರಿಗೆ ವಿವಾಹದ ಇಚ್ಛೆ ಇರಲಿಲ್ಲ. ಕಾರಣಗಳನ್ನು ಕೇಳಿದಾಗ ‘ಸಮಯ ಬರಲಿ’ ಎಂದು ತಳ್ಳಿಹಾಕುತ್ತಿದ್ದಳು.
ದಿನ ಕಳೆದಂತೆ ರಾಣಿಗೆ ಚಿಂತೆಯಾಯಿತು. ಒಂದು ಹುಣ್ಣಿಮೆಯಂದು ರಾಜಕುಮಾರಿಯು ತನ್ನ ತಂದೆಯ ರಾಜ್ಯಕ್ಕೆ ಕರೆತಂದಳು. ಆಕೆಯ ತಂದೆಯ ಅರಮನೆಯ ಎದುರು ಒಂದು ಬಿಳಿ ಕುದುರೆ ಸಾರೋಟು ಆಕಾಶದಿಂದಿಳಿಯಿತು.
ರಾಜಕುಮಾರಿ ಅದನ್ನೇರಿ, ‘ನಾನು ಅಪ್ಪರಾ ಲೋಕದ ಅಪ್ಸರೆ. ದೇವೇಂದ್ರನ ಶಾಪದಿಂದ ಭೂಮಿಗೆ ಬಂದಿದ್ದೆ. ಈಗ ನನ್ನ ಶಾಪ ವಿಮೋಚನೆಯಾಗಿದೆ. ನಾನು ಹೋಗುತ್ತೇನೆ’ ಎಂದಳು.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.