ಅಮರಾವತಿ: ಉದ್ಯಮಿಯೊಬ್ಬರು ತಿರುಪತಿ (Tirupati) ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ 140 ಕೋಟಿ ರೂ. ಮೌಲ್ಯದ 121 ಕೆಜಿ ಚಿನ್ನ (121 kg of gold) ಕಾಣಿಕೆ ನೀಡುತ್ತಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮಂಗಳವಾರ ತಿಳಿಸಿದ್ದಾರೆ.
ತಮ್ಮ ಗುರುತನ್ನು ಬಹಿರಂಗಪಡಿಸಲು ಇಚ್ಛಿಸದ ಆ ಭಕ್ತ, ತಮ್ಮ ಕಂಪನಿಯ ಶೇ.60ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ 1.5 ಬಿಲಿಯನ್ ಅಮೆರಿಕ ಡಾಲರ್ ಅಥವಾ ಸುಮಾರು 6,000 ಕೋಟಿಯಿಂದ 7,000 ಕೋಟಿ ರೂ. ಗಳಿಸಿದ್ದಾರೆ. ತಮಗೆ ಈ ಸಂಪತ್ತನ್ನು ವೆಂಕಟೇಶ್ವರ ಸ್ವಾಮಿಯೇ ಕರುಣಿಸಿದ್ದಾರೆ ಎಂಬ ನಂಬಿಕೆಯಿಂದ ಅವರು ಇದೀಗ ಈ ಬೃಹತ್ ದೇಣಿಗೆ ಯನ್ನು ನೀಡಲು ನಿರ್ಧರಿಸಿದ್ದಾರೆ ಎಂಬುದಾಗಿ ನಾಯ್ಡು ತಿಳಿಸಿದ್ದಾರೆ.
ಬಾಲಾಜಿ ವಿಗ್ರಹವನ್ನು ಪ್ರತಿದಿನ 120 ಕೆಜಿ ತೂಕದ ಚಿನ್ನದ ಆಭರಣಗಳಿಂದ ಅಲಂಕರಿಸಲಾಗುತ್ತದೆ.