Daily story; ಹರಿತಲೇಖನಿ ದಿನಕ್ಕೊಂದು ಕತೆ:‌ ಅಹಂಕಾರದಿಂದ ಮಾಡಿದ ದಾನ

Daily story; ದಾನವನ್ನು ಅಹಂಕಾರ ಅರ್ಥಾತ್ ‘ನನ್ನ’ ತನದಿಂದ ನೀಡಬಾರದು. ಅಹಂಕಾರದಿಂದ ಮಾಡಿರುವ ದಾನಕ್ಕೆ ಯಾವುದೇ ಲಾಭವಿರುವುದಿಲ್ಲ. ಇದರ ಮಹತ್ವವನ್ನು ಒಂದು ಕಥೆಯಿಂದ ತಿಳಿದುಕೊಳ್ಳೋಣ.

ಮಹಾಭಾರತ ಕಾಲದ ಕಥೆಯಾಗಿದೆ. ಒಬ್ಬ ಬ್ರಾಹ್ಮಣನು ಭಿಕ್ಷೆಯನ್ನು ಬೇಡಿ ತನ್ನ ಕುಟುಂಬದವರ ಹೊಟ್ಟೆಯನ್ನು ತುಂಬಿಸುತ್ತಿದ್ದನು. ಒಮ್ಮೆ ಆ ಬ್ರಾಹ್ಮಣ ಹಾಗೂ ಅವನ ಕುಟುಂಬದವರು ಊಟವನ್ನು ತಯಾರಿಸುತ್ತಿದ್ದರು. ಅದೇ ಸಮಯದಲ್ಲಿ ಒಬ್ಬ ವೃದ್ಧ ವ್ಯಕ್ತಿ ಅವರ ಮನೆಯ ಬಾಗಿಲಿಗೆ ಬಂದನು.

ಅವನು ಹಸಿದಿದ್ದನು ಮತ್ತು ಅವನು ಭಿಕ್ಷೆಯಲ್ಲಿ ಏನಾದರೂ ತಿನ್ನಲು ಕೊಡುವಂತೆ ಕೇಳಿದನು. ಬ್ರಾಹ್ಮಣ ಕುಟುಂಬದವರು ತಮ್ಮ ಸಂಪೂರ್ಣ ಊಟವನ್ನು ಆ ವೃದ್ಧ ಅತಿಥಿಗೆ ಅರ್ಪಿಸಿದರು. ಆ ವೃದ್ಧ ಅತಿಥಿ ಅನ್ನವನ್ನು ಗ್ರಹಣ ಮಾಡಿ ತೃಪ್ತನಾದನು. ತದನಂತರ ಅತಿಥಿಯು ತನ್ನ ಕೈಗಳನ್ನು ತೊಳೆದನು.

ಅದೇ ಸಮಯದಲ್ಲಿ ಅಲ್ಲಿಗೆ ಒಂದು ಮುಂಗುಸಿ ಬಂದಿತು ಮತ್ತು ಎಲ್ಲಿ ಆ ಅತಿಥಿಯು ಕೈತೊಳೆದಿದ್ದನೋ, ಆ ಸ್ಥಾನದಲ್ಲಿ ಬಿದ್ದ ನೀರಿನಲ್ಲಿ ಆ ಮುಂಗುಸಿ ಹೊರಳಾಡತೊಡಗಿತು. ಮುಂಗುಸಿಯ ಅರ್ಧಶರೀರ ಬಂಗಾರದ ಬಣ್ಣದ್ದಾಯಿತು.

ಈ ವಿಷಯವು ಅರಣ್ಯದಲ್ಲಿ ಹರಡುವ ಬೆಂಕಿಯಂತೆ ಎಲ್ಲೆಡೆಯೂ ಹಬ್ಬಿತು. ಧರ್ಮರಾಜ ಯುಧಿಷ್ಠಿರನಿಗೂ ಈ ವಿಷಯ ತಲುಪಿತು. ಆಗ ಅವನ ಮನಸ್ಸಿನಲ್ಲಿ ‘ನಾನಂತೂ ಲಕ್ಷಾಂತರ ಜನರಿಗೆ ಪ್ರತಿದಿನ ಊಟವನ್ನು ಹಾಕುತ್ತೇನೆ. ಒಂದು ವೇಳೆ ಇಲ್ಲಿಗೆ ಬಂದು ಆ ಮುಂಗುಸಿ ಹೊರಳಾಡಿದರೆ ಅದರ ಉಳಿದರ್ಧ ಭಾಗವೂ ಬಂಗಾರದ ಬಣ್ಣವಾಗುವುದು’ ಎಂದು ವಿಚಾರ ಮಾಡಿದರು. ಯುಧಿಷ್ಠಿರನು ಒಂದು ಅನ್ನ ಛತ್ರವನ್ನು ಆಯೋಜಿಸಿದನು. ಅಲ್ಲಿಯೂ ಅದೇ ಮುಂಗುಸಿ ಬಂದಿತು ಮತ್ತು ಅದು ಅದೇ ರೀತಿ ಮಾಡಿತು. ಆದರೆ ಅದರ ಉಳಿದರ್ಧ ಶರೀರ ಮೂಲ ಬಣ್ಣದ್ದಾಗಿಯೇ ಉಳಿಯಿತು.

ಧರ್ಮರಾಜನು ಇದರ ಕಾರಣವನ್ನು ಕೇಳಿದಾಗ, ಭಗವಾನ ಶ್ರೀಕೃಷ್ಣನು ‘ಹೇ ರಾಜಾ! ನೀನು ಎಷ್ಟು ಜನರಿಗೆ ಭೋಜನವನ್ನು ಬಡಿಸಬಲ್ಲೆ, ಅನ್ನದಾನ ಮಾಡಬಲ್ಲೆ ಎನ್ನುವ ಅಹಂಕಾರ ನಿನಗೆ ಇದೆ. ಈ ಅಹಂಕಾರದ ಕಾರಣವೇ ಈ ಮುಂಗುಸಿಯ ಶರೀರ ಬಂಗಾರದ ಬಣ್ಣಕ್ಕೆ ತಿರುಗಲಿಲ್ಲ.

ಆ ಬಡ ಬ್ರಾಹ್ಮಣನ ಕುಟುಂಬದವರು ಮಾತ್ರ ಮನೆಗೆ ಬಂದ ಅತಿಥಿ ಬರಿಹೊಟ್ಟೆಯಲ್ಲಿ ಹಿಂದಿರುಗಿ ಹೋಗಬಾರದು ಎಂದು ತಾವು ಬರಿಹೊಟ್ಟೆಯಲ್ಲಿದ್ದರೂ ಅತಿಥಿಗೆ ಊಟವನ್ನು ಬಡಿಸಿದರು. ಅದರ ಹಿಂದೆ ಯಾವುದೇ ಸ್ವಾರ್ಥ ಅಥವಾ ಅಹಂಕಾರವಿರಲಿಲ್ಲ’ ಎಂದು ಹೇಳಿದನು.

ಕೃಪೆ: ಹಿಂದೂ ಜಾಗೃತಿ

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!