HD Kumaraswamy Proposes Advanced EV and Automotive Tech Centre in Bengaluru

Bengaluru: ಬೆಂಗಳೂರಿನಲ್ಲಿ ICAT ಕೇಂದ್ರ ಸ್ಥಾಪನೆ ಖಚಿತ; ಉನ್ನತ ಅಧಿಕಾರಿಗಳ ಜತೆ ಹೆಚ್‌ಡಿ ಕುಮಾರಸ್ವಾಮಿ ಚರ್ಚೆ

ಮಾನೇಸರ್ (ಹರಿಯಾಣ): ಬೆಂಗಳೂರು (Bengaluru) ನಗರದಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ -ಐಕ್ಯಾಟ್ ನ ಮೂರನೇ ಕೇಂದ್ರ ಸ್ಥಾಪನೆಯಾಗಲಿದೆ.

ಹರಿಯಾಣದ ಗುರುಗ್ರಾಮದಲ್ಲಿರುವ ಐಕ್ಯಾಟ್ (ICAT- The International Centre for Automotive Technology) ನ ಎರಡು ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು; ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದ ನೆಲೆವೀಡಾದ ಬೆಂಗಳೂರಿನಲ್ಲಿ ಇದರ ಮೂರನೇ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಐಕ್ಯಾಟ್ ನ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಅಲ್ಲದೆ; ದಕ್ಷಿಣದಲ್ಲಿಯೇ ಅತ್ಯಂತ ಆಯಕಟ್ಟಿನ ಹಾಗೂ ವ್ಯೂಹಾತ್ಮಕ ನಗರವೂ ಆಗಿರುವ ಬೆಂಗಳೂರಿನಲ್ಲಿ ಐಕ್ಯಾಟ್ ನ ಹೊಸ ಕೇಂದ್ರ ಬರುವುದು ಅತ್ಯಗತ್ಯವಾಗಿದೆ. ನಾವೀನ್ಯತೆ, ಆವಿಷ್ಕಾರ ಹಾಗೂ ಉದ್ಯಮಶೀಲತೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ.

ಅಟೋಮೊಬೈಲ್ ಕ್ಷೇತ್ರದ ಹಬ್ ಆಗಿಯೂ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಐಕ್ಯಾಟ್ ಕೇಂದ್ರ ಸ್ಥಾಪನೆ ಬಗ್ಗೆ ಕೇಂದ್ರದ ನಿರ್ದೇಶಕ ಸೌರಭ್ ದಲೇಲ ಅವರೊಂದಿಗೆ ಚರ್ಚಿಸಿದರು.

ಬೆಂಗಳೂರಿನಲ್ಲಿ ಆದಷ್ಟು ಬೇಗ ಐಕ್ಯಾಟ್ ಕೇಂದ್ರ ಆರಂಭ ಮಾಡುವ ಬಗ್ಗೆ ಪ್ರಕ್ರಿಯೆಗಳನ್ನು ಆರಂಭ ಮಾಡುವುದಾಗಿ ಅಧಿಕಾರಿಗಳು ಸಚಿವರಿಗೆ ಸ್ಪಷ್ಟ ಭರವಸೆ ನೀಡಿದರು.

ಬೆಂಗಳೂರಿನಲ್ಲಿ ಸ್ಥಾಪನೆ ಆಗಲಿರುವ ಈ ಕೇಂದ್ರವು ಎಲೆಕ್ಟ್ರಿಕ್ ವಾಹನ (ಇವಿ) ತಂತ್ರಜ್ಞಾನ, ಸಾಫ್ಟ್‌ವೇರ್ ನಿಯಂತ್ರಿತ ವಾಹನಗಳು (ಎಸ್‌ಡಿವಿಗಳು), ಸ್ವಾಯತ್ತ ವ್ಯವಸ್ಥೆಗಳು ಮತ್ತು ದತ್ತಾಂಶ ಸುರಕ್ಷತೆಯಲ್ಲಿ ಐಕ್ಯಾಟ್ ಕೇಂದ್ರವು ನಿರ್ಣಾಯಕವಾಗಿ ಕೆಲಸ ಮಾಡುತ್ತದೆ.

ಅಲ್ಲದೆ, ಈ ಕೇಂದ್ರವು ಬೆಂಗಳೂರಿನಲ್ಲಿ ಸ್ಥಾಪನೆ ಆಗುವುದರಿಂದ ಕರ್ನಾಟಕದ ಜತೆಗೆ ಅದರ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಅಟೋಮೊಬೈಲ್ ಆವಿಷ್ಕಾರಕ್ಕೆ ಭಾರೀ ಪ್ರಮಾಣದ ಉತ್ತೇಜನ ದೊರೆಯಲಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಬೆಂಗಳೂರಿನಲ್ಲಿ ಐಕ್ಯಾಟ್ ಕೇಂದ್ರ ಸ್ಥಾಪನೆಗೆ ಕೇಂದ್ರದ ಬೃಹತ್ ಕೈಗಾರಿಕೆ ಸಚಿವಾಲಯದಿಂದ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಹಾಗೂ ಅದೇ ರೀತಿ ಕರ್ನಾಟಕ ಸರ್ಕಾರದಿಂದ ಸಿಗಬೇಕಿರುವ ಅನುಕೂಲಗಳನ್ನು ಒದಗಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಐಕ್ಯಾಟ್ ನಿರ್ದೇಶಕರಿಗೆ ಭರವಸೆ ನೀಡಿದರು.

ಬೆಂಗಳೂರಿನಲ್ಲಿ ಐಕ್ಯಾಟ್ ನ ಮೂರನೇ ಕೇಂದ್ರ ಬಂದರೆ ಅಟೋಮೊಬೈಲ್ ಕ್ಷೇತ್ರಕ್ಕೆ ಮಾತ್ರವಷ್ಟೇ ಅಲ್ಲದೆ, ರಕ್ಷಣೆ ಮತ್ತು ರೇಲ್ವೆ ಕ್ಷೇತ್ರಗಳಿಗೂ ಹೆಚ್ಚು ಉಪಯೋಗ ಆಗುತ್ತದೆ, ಹೊಸ ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ. ಅಟೋಮೊಬೈಲ್ ತಂತ್ರಜ್ಞಾನದ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಸಚಿವರು ಹೇಳಿದರು.

ಐಕ್ಯಾಟ್ 3ನೇ ಕೇಂದ್ರ; ಏನಿದರ ವೈಶಿಷ್ಟ್ಯಗಳು?

ಐಕ್ಯಾಟ್ 3ನೇ ಕೇಂದ್ರ ಕೇಂದ್ರ ಕೇವಲ ಒಂದು ತಂತ್ರಜ್ಞಾನ ಆಧಾರಿತ ಕೇಂದ್ರವಷ್ಟೇ ಆಗಿರದೆ, ಒಟ್ಟಾರೆ ಆರ್ಥಿಕತೆ ಮೇಲೆ ಪ್ರತಿಕೂಲಕರ ಪ್ರಭಾವ ಬೀರುತ್ತದೆ.

  • •ಸುಧಾರಿತ ಎಲೆಕ್ಟ್ರಿಕ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಮಾಪನಾಂಕ ನಿರ್ಣಯದ ಪ್ರಯೋಗಾಲಯಗಳನ್ನು ಹೊಂದಿರುತ್ತದೆ.
  • •ಎಲೆಕ್ಟ್ರಾನಿಕ್ ನಿಯಂತ್ರಿತ ವ್ಯವಸ್ಥೆ (ECU) ಹಾಗೂ ಸೆನ್ಸಾರ್ ತಂತ್ರಜ್ಞಾನ ಅಭಿವೃದ್ಧಿ ವ್ಯವಸ್ಥೆ ಹೊಂದಿರುತ್ತದೆ.
  • •ಸೈಬರ್ ಸುರಕ್ಷತೆ ಲ್ಯಾಬ್‌ಗಳು ಮತ್ತು ಅತ್ಯಾಧುನಿಕ ಚಾಲನಾ ನೆರವು ವ್ಯವಸ್ಥೆ (ADAS) ಸಂಶೋಧನೆ ವ್ಯವಸ್ಥೆ ಹೊಂದಿರುತ್ತದೆ.
  • •ಸಂಪರ್ಕಿತ ಮತ್ತು ಸ್ವಾಯತ್ತ ಇಲ್ಲವೇ ಏಕೀಕೃತ ನಿಯಂತ್ರಣ ವ್ಯವಸ್ಥೆಯುಳ್ಳ ವಾಹನ ತಂತ್ರಜ್ಞಾನಗಳಿಗೆ ಸೌಲಭ್ಯಗಳನ್ನು ಹೊಂದಿರುತ್ತದೆ.
  • •ಸಾಫ್ಟ್‌ವೇರ್ ಆಧಾರಿತ ಅಥವಾ ನಿಯಂತ್ರಿತ ವಾಹನಗಳ (SDVs) ಸಾಫ್ಟ್‌ವೇರ್ ಪರೀಕ್ಷೆ ಮತ್ತು ಅಭಿವೃದ್ಧಿಯನ್ನು ಮಾಡುತ್ತದೆ.
  • •ಮಹತ್ವದ್ದಾದ ಆಟೋಮೋಟಿವ್ ದತ್ತಾಂಶವನ್ನು ಸುರಕ್ಷಿತವಾಗಿ ಕಾಪಾಡುವ ವ್ಯವಸ್ಥೆಯನ್ನು ಹೊಂದಿರುತ್ತದೆ.

ಸಚಿವರ ಕನಸು ನನಸು

ಪ್ರಧಾನಿಗಳ ಆತ್ಮನಿರ್ಭರ್ ಭಾರತ್ ಹಾಗೂ ಮೆಕ್ ಇಂಡಿಯಾ ಮೂಲಕ ವಿಕಸಿತ ಭಾರತ ಕನಸು ಸಾಕಾರಕ್ಕೆ ಐಕ್ಯಾಟ್ ನ ಎರಡು ಕೇಂದ್ರಗಳ ಕೊಡುಗೆ ದೊಡ್ಡದು. ಅದೇ ರೀತಿ ಬೆಂಗಳೂರಿನಲ್ಲಿ ಮೂರನೇ ಅತಿದೊಡ್ಡ ಕೇಂದ್ರ ಸ್ಥಾಪನೆಯಾದರೆ ರಾಜ್ಯಕ್ಕೆ ಹೆಚ್ಚು ಅನುಕೂಲ ಆಗುವುದು ಮಾತ್ರವಲ್ಲದೆ, ದಕ್ಷಿಣದ ರಾಜ್ಯಗಳಲ್ಲಿ ಆಟೋಮೊಟೀವ್ ತಂತ್ರಜ್ಞಾನದ ಬೃಹತ್ ಕ್ರಾಂತಿಯೇ ಆಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಎರಡೂ ಕೇಂದ್ರಗಳಿಗೆ ಭೇಟಿ, ಪರಿಶೀಲನೆ

ಸೋಮವಾರ ಇಡೀ ದಿನ ಐಕ್ಯಾಟ್ ಕೇಂದ್ರಗಳ ವಿವಿಧ ವಿಭಾಗಳಿಗೆ ಭೇಟಿ ನೀಡಿದ ಸಚಿವ ಕುಮಾರಸ್ವಾಮಿ ಅವರು; ಅಲ್ಲಿರುವ ಎಲ್ಲಾ ಸುಧಾರಿತ ತಾಂತ್ರಿಕ ಸೌಲಭಗಳನ್ನು ಖುದ್ದು ವೀಕ್ಷಿಸಿದರು. ಅಲ್ಲದೆ, ವಾಹನಗಳ ಸುರಕ್ಷತಾ ಸೌಲಭ್ಯಗಳನ್ನು ಅವರು ಪರಿಶೀಲಿಸಿದರು.

ಅದಕ್ಕೂ ಮೊದಲು ಅಧಿಕಾರಿಗಳ ಸಭೆ ನಡೆಸಿದ ಸಚಿವರು; ಐಕ್ಯಾಟ್ ಕೇಂದ್ರದಲ್ಲಿನ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ಆ ನಂತರ ಇಡೀ ಕೇಂದ್ರದ ಪ್ರಯೋಗಾಲಯಗಳು, ಅಪಘಾತ ಪರೀಕ್ಷೆ ಪ್ರಯೋಗಾಲಯಗಳು, ಪ್ರತಿಧ್ವನಿ ಅಧ್ಯಯನ ಕೇಂದ್ರಗಳು ಹಾಗೂ ಇಂಧನ ಹರಿವಿನ ಪರೀಕ್ಷಾ ಕಾರ್ಯವಿಧಾನಗಳನ್ನು ಸಚಿವರು ಪರಿಶೀಲನೆ ವೀಕ್ಷಿಸಿದರು.

ಈ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಭಾರತದ ವಾಹನಗಳ ಉತ್ಕೃಷ್ಟತೆಗೆ ಐಕ್ಯಾಟ್ ಕೇಂದ್ರ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಆವಿಷ್ಕಾರ, ನಾವೀನ್ಯತೆ ಕ್ಷೇತ್ರಗಳಿಗೆ ಇದು ಹೆಚ್ಚು ಆದ್ಯತೆ ಕೊಡುತ್ತಿದೆ.

ಇಲ್ಲಿಗೆ ಬಂದಿರುವುದು ನನಗೆ ಬಹಳ ಸಂತೋಷ ತಂದಿದೆ. ಇಲ್ಲಿನ ಸುಧಾರಿತ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಮೂಲಸೌಕರ್ಯಗಳನ್ನು ಒಳಗೊಂಡಂತೆ ICAT ನ ಅತ್ಯಾಧುನಿಕ ಸೌಲಭ್ಯಗಳು ಆಟೋಮೋಟಿವ್ ನಾವೀನ್ಯತೆಯಲ್ಲಿ ಭಾರತದ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿವೆ ಎಂದು ಸಚಿವರು ಹೇಳಿದರು.

ಇದೇ ವೇಳೆ ಸಚಿವರು ಅತ್ಯಾಧುನಿಕ ಐಟಿ ಆಟೋಮ್ಯಾಟಿವ್ ಕೇಂದ್ರಕ್ಕೆ ಅಡಿಗಲ್ಲು ಹಾಕಿದರು.

ರಾಜಕೀಯ

ರಾಹುಲ್ ಗಾಂಧಿ ಸೇರಿ 25 ಕಾಂಗ್ರೆಸ್ ಸಂಸದರಿಗೆ ಜೀವ ಬೆದರಿಕೆ

ರಾಹುಲ್ ಗಾಂಧಿ ಸೇರಿ 25 ಕಾಂಗ್ರೆಸ್ ಸಂಸದರಿಗೆ ಜೀವ ಬೆದರಿಕೆ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

[ccc_my_favorite_select_button post_id="119574"]
20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

ಫ್ರಾನ್ಸ್ ಮೂಲದ ಏರ್ ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಜತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ

[ccc_my_favorite_select_button post_id="119504"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರ ಮೇಲೆ ಗುಂಡು ಹಾರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="119595"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಖಾಸಗಿ ಕಾರ್ಖಾನೆಯ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ (Accident), ದ್ವಿಚಕ್ರ ವಾಹನ ಸವಾರ ಸಾವನಪ್ಪಿರುವ ಘಟನೆ ತಾಲೂಕಿನ ಗೊಲ್ಲಹಳ್ಳಿ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಇಂದು ಸಂಜೆ

[ccc_my_favorite_select_button post_id="119492"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!